ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

ಲಾಕ್‌ಡೌನ್ ಸಮಯದಲ್ಲಿ, ಅಗತ್ಯವಿರುವವರಿಗೆ ಸಹಾಯ ಮಾಡಲು ಟಾಟಾ ಮೋಟಾರ್ಸ್ ಹಾಗೂ ಟಾಟಾ ಗ್ರೂಪ್ ಶ್ರಮಿಸುತ್ತಿವೆ. ದೇಶದ ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಉದ್ಯೋಗವಿಲ್ಲದೇ ಭಾರಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

ಈ ಕಷ್ಟದ ಸಂದರ್ಭದಲ್ಲಿ, ಟಾಟಾ ಮೋಟಾರ್ಸ್ ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚಿದೆ. ಆಹಾರ, ನೀರಿನಿಂದ ಹಿಡಿದು ಎಲ್ಲಾ ಅಗತ್ಯ ವಸ್ತುಗಳನ್ನೂ ಪೂರೈಸಿದೆ. ಕಂಪನಿಯು ದೇಶದ ವಿವಿಧ ನಗರಗಳಲ್ಲಿ ಕ್ಯಾಂಪ್ ಗಳನ್ನು ಹಾಕಿದ್ದು, ಆಹಾರ ಪ್ಯಾಕೆಟ್‌ ಹಾಗೂ ಅಗತ್ಯವಿರುವ ಇತರ ವಸ್ತುಗಳನ್ನು ವಿತರಿಸುತ್ತಿದೆ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

ಇವರಲ್ಲಿ ಕೂಲಿ ಕಾರ್ಮಿಕರು, ಟ್ರಕ್ ಚಾಲಕರು, ಸೇನಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸೇರಿದ್ದಾರೆ. ಕಂಪನಿಯು ಇದುವರೆಗೂ 25,000 ಆಹಾರ ಪ್ಯಾಕೆಟ್‌ಗಳು ಹಾಗೂ 5000 ಕಿರಾಣಿ ಕಿಟ್‌ಗಳನ್ನು ವಿತರಿಸಿದೆ. ಇದಲ್ಲದೆ ಪೊಲೀಸರು ಚೆಕ್ ಪೋಸ್ಟ್‌ಗಳಲ್ಲಿ ನೀರಿನ ಬಾಟಲಿಗಳನ್ನು ವಿತರಿಸುತ್ತಿದ್ದಾರೆ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಕರೋನಾ ವೈರಸ್ ತಡೆಗಟ್ಟಲು ಮೂರು ಅಂಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ ಮೂರು ಅಂಶಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

1. ಅಗತ್ಯ ವಸ್ತುಗಳ ಪೂರೈಕೆ:

ಟಾಟಾ ಮೋಟಾರ್ಸ್ ತನ್ನ ಸಿಬ್ಬಂದಿಯ ಸಹಾಯದಿಂದ ಕಾರ್ಮಿಕರಿಗೆ ಹಾಗೂ ಅಗತ್ಯವಿರುವವರಿಗೆ ಸಂಘಟಿತ ರೀತಿಯಲ್ಲಿ ಅಗತ್ಯ ವಸ್ತುಗಳನ್ನು ವಿತರಿಸುತ್ತಿದೆ. ಇವರಲ್ಲಿ ಗ್ರಾಮಸ್ಥರು, ವಲಸೆ ಕಾರ್ಮಿಕರು, ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಸೇರಿದ್ದಾರೆ. ಟಾಟಾ ಮೋಟಾರ್ಸ್ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ ಸಹಭಾಗಿತ್ವದಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಿದೆ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

2. ನಿಯೋಜನೆ:

ಟಾಟಾ ಮೋಟಾರ್ಸ್ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ತಯಾರಿಸಲು ಸ್ವ-ಸಹಾಯ ಗುಂಪುಗಳಿಗೆ ಸಹಾಯ ಮಾಡುತ್ತಿದೆ. ಈ ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ಕಂಪನಿಯ ಉತ್ಪಾದನಾ ಘಟಕದ ಬಳಿಯಿರುವ ಆಸ್ಪತ್ರೆ, ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಹಾಗೂ ಸೇನಾ ಸಿಬ್ಬಂದಿಗಳಿಗೆ ವಿತರಿಸಲಾಗುತ್ತಿದೆ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

ಇದುವರೆಗೂ ಕಂಪನಿಯು ಕೈಯಿಂದ ತಯಾರಿಸಲಾದ 17,000 ಮಾಸ್ಕ್ ಗಳನ್ನು ವಿತರಿಸಿದೆ. ಪುರಸಭೆಯ ಆಸ್ಪತ್ರೆಗಳಿಗೆ ಎನ್ 95 ಮಾಸ್ಕ್, ಸ್ಯಾನಿಟೈಜರ್‌, ಪರ್ಸನಲ್ ಪ್ರೋಟೆಕ್ಟಿವ್ ಕಿಟ್‌ಗಳನ್ನು ಒದಗಿಸಿದೆ.

ಕೋವಿಡ್ 19: 3 ಅಂಶಗಳ ನೆರವು ನೀಡಲಿದೆ ಟಾಟಾ ಮೋಟಾರ್ಸ್

3. ಜಾಗೃತಿ ಅಭಿಯಾನ:

ಕೊಳೆಗೇರಿಗಳಲ್ಲಿ ಹಾಗೂ ಕಡಿಮೆ ಆದಾಯವಿರುವ ಜನರು ವಾಸಿಸುವ ಸ್ಥಳಗಳಲ್ಲಿ ಟಾಟಾ ಮೋಟಾರ್ಸ್, ಬ್ಯಾನರ್ ಹಾಗೂ ಇತರ ಸಂಬಂಧಪಟ್ಟ ಸಾಮಗ್ರಿಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಸರಳವಾದ ಹಾಗೂ ಸುಲಭವಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕಂಪನಿಯು ತನ್ನ ಸಾಮಾಜಿಕ ಜಾಲ ತಾಣಗಳ ಮೂಲಕವೂ ಅರಿವು ಮೂಡಿಸುತ್ತಿದೆ.

Article Published On: Thursday, April 9, 2020, 17:25 [IST]
English summary
Tata Motors adopts 3 pronged CSR approach to combat Covid 19. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+