40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಅಧಿಕೃತ ಯೂಟ್ಯೂಬ್ ಚಾನಲ್ ನಲ್ಲಿ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಕಂಪನಿಯು ಪ್ರಯಾಣಿಕರ ಕಾರುಗಳಲ್ಲಿ ತಾನು ನಡೆದು ಬಂದ ಹಾದಿಯನ್ನು ವಿವರಿಸಿದೆ.

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

40 ಲಕ್ಷ ಕಾರುಗಳ ಉತ್ಪಾದನೆಯ ಸಾಧನೆ ವೇಳೆ ಎದುರಾದ ಸವಾಲುಗಳು ಹಾಗೂ ಬದಲಾವಣೆಗಳನ್ನು ತೋರಿಸಲು ಟಾಟಾ ಮೋಟಾರ್ಸ್ ಕಂಪನಿಯು ಈ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊಗೆ ಬಾಲಿವುಡ್ ನಟ ಅನುಪಮ್ ಖೇರ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಆರಂಭಿಸಿದ ಕಾರುಗಳು ಹಾಗೂ ಕಂಪನಿಯ ಮಾಜಿ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ರತನ್ ಟಾಟಾ ಅವರ ಭಾರತೀಯ ವಾಹನ ಉದ್ಯಮದ ಮಹತ್ವಾಕಾಂಕ್ಷೆಗಳನ್ನು ಈ ವೀಡಿಯೊದಲ್ಲಿ ವಿವರಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಗ್ರಾಹಕರು ಟಾಟಾ ಮೋಟಾರ್ಸ್ ಮೇಲಿಟ್ಟಿರುವ ನಂಬಿಕೆಯನ್ನು ಈ ವೀಡಿಯೊ ಮೂಲಕ ತೋರಿಸಲಾಗಿದೆ. ಟಾಟಾ ಮೋಟಾರ್ಸ್ ಕಾರುಗಳು ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ.

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಟಾಟಾ ನೆಕ್ಸಾನ್ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ ಎಂದು ವರದಿಯಾಗಿದೆ. ಕಂಪನಿಯು ಈ ವೀಡಿಯೊದಲ್ಲಿ ತನ್ನ ಹಳೆಯ ಕಾರುಗಳನ್ನು ಹೊಸ ಕಾರುಗಳೊಂದಿಗೆ ಸೇರಿಸಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಮಾರುಕಟ್ಟೆಯಲ್ಲಿರುವ ನೆಕ್ಸಾನ್, ಆಲ್ಟ್ರೋಜ್, ಟಿಯಾಗೊ, ಟಿಗೋರ್ ಹಾಗೂ ಹ್ಯಾರಿಯರ್ ಕಾರುಗಳನ್ನು ವೀಡಿಯೊದಲ್ಲಿ ತೋರಿಸಲಾಗಿದ್ದು, ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಾರುಗಳನ್ನು ನೀಡಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ ನಂತರ ಮೂರನೇ ಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡುತ್ತವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟಾಟಾ ಮೋಟಾರ್ಸ್ ಸದ್ಯಕ್ಕೆ 1.5 ಲಕ್ಷ ಯೂನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿದೆ. ಇನ್ನು ಟಾಟಾ ಟಿಯಾಗೊದ 3 ಲಕ್ಷ ಯೂನಿಟ್ ಗಳು ಮಾರಾಟವಾಗಿವೆ. ಹೊಸ ಫೀಚರ್ ಗಳೊಂದಿಗೆ ಬಿಡುಗಡೆಯಾದ ಹ್ಯಾರಿಯರ್ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

40 ಲಕ್ಷ ಕಾರುಗಳ ಉತ್ಪಾದನೆಯ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್

ಜಾಗತಿಕ ಕ್ರ್ಯಾಶ್ ಪರೀಕ್ಷೆಯಲ್ಲಿ ಟಾಟಾ ಮೋಟಾರ್ಸ್‌ನ ಪ್ರಯಾಣಿಕ ಕಾರುಗಳು ಒಳ್ಳೆಯ ರೇಟಿಂಗ್ ಪಡೆದಿವೆ. ಟಾಟಾ ನೆಕ್ಸಾನ್ ಹಾಗೂ ಆಲ್ಟ್ರೋಜ್ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದರೆ, ಟಿಯಾಗೊ ಹಾಗೂ ಟಿಗೋರ್‌ ಕಾರುಗಳು 4 ಸ್ಟಾರ್ ರೇಟಿಂಗ್ ಪಡೆದಿವೆ.

Most Read Articles

Kannada
English summary
Tata Motors celebrates 4 million passenger cars production milestone. Read in Kannada.
Story first published: Thursday, November 19, 2020, 20:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X