ದೇಶದ ಮೊದಲ ಎಲ್‍ಎನ್‍ಜಿ ಬಸ್ ವಿತರಿಸಿದ ಟಾಟಾ ಮೋಟಾರ್ಸ್
ಡೀಸೆಲ್ ಹಾಗೂ ಪೆಟ್ರೋಲ್ ಚಾಲಿತ ವಾಹನಗಳಿಂದ ಪರಿಸರ ಮಾಲಿನ್ಯವು ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ವಾಹನಗಳಿಂದಾಗಿ ವಾಹನ ದಟ್ಟಣೆ ಹೆಚ್ಚುವುದರ ಜೊತೆಗೆ, ಅವುಗಳಿಂದ ಹೊರಹೊಮ್ಮುವ ಕಾರ್ಬನ್ ಡೈ ಆಕ್ಸೈಡ್ ಸಹ ಪರಿಸರ ಮಾಲಿನ್ಯವನ್ನುಂಟು ಮಾಡುತ್ತಿದೆ.

ಇವುಗಳಿಂದಾಗಿ ಡೀಸೆಲ್ ಹಾಗೂ ಪೆಟ್ರೋಲ್‍ಗಳಿಗೆ ಪರ್ಯಾಯವಾದ, ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡದ ಇಂಧನಗಳಿಂದ ಚಲಿಸುವ ವಾಹನಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಉಂಟಾಗಿದೆ. ಟಾಟಾ ಮೋಟಾರ್ಸ್ ಈ ಹಿನ್ನೆಲೆಯಲ್ಲಿ ಹೆಜ್ಜೆಯನ್ನಿಟ್ಟಿದೆ.
ಟಾಟಾ ಮೋಟಾರ್ಸ್ ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಎಲ್‍ಎನ್‍ಜಿ) ಎಂಜಿನ್ ಹೊಂದಿರುವ ಹೊಸ ಬಸ್ಸುಗಳನ್ನು ಅಭಿವೃದ್ಧಿಪಡಿಸಿದೆ. ಟಾಟಾ ಮೋಟಾರ್ಸ್ ಈ ಹೊಸ ರೀತಿಯ ಬಸ್ ಮಾದರಿಯನ್ನು ಕಳೆದ ತಿಂಗಳು ನಡೆದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿತ್ತು.
ಟಾಟಾ ಮೋಟಾರ್ಸ್ 36 ಸೀಟುಗಳನ್ನು ಹೊಂದಿರುವ ಎಲ್‍ಎನ್‍ಜಿ ಎಸಿ ಮಾದರಿಯ ಎರಡು ಸ್ಟಾರ್ ಬಸ್‍ಗಳನ್ನು ತಯಾರಿಸಿ ವಿತರಿಸಿದೆ. ಈ ಬಸ್‍ಗಳನ್ನು ಗುಜರಾತ್‍ನ ದಹೆಜ್‍ನಲ್ಲಿರುವ ಎಲ್‍ಎನ್‍ಜಿ ಪೆಟ್ರೋನೆಟ್ ಲಿಮಿಟೆಡ್ ಹಾಗೂ ಕೇರಳದ ಕೊಚ್ಚಿಯಲ್ಲಿ ವಿತರಿಸಲಾಗಿದೆ.
ಟಾಟಾ ಮೋಟಾರ್ಸ್ ಈ ಬಸ್‍ಗಳನ್ನು ನಿಗದಿತ ಸಮಯದಲ್ಲಿ ತನ್ನ ಉತ್ಪಾದನಾ ಘಟಕದಲ್ಲಿ ತಯಾರಿಸಿ ವಿತರಿಸಿದೆ. ಈ ಬಸ್‍ಗಳು ಆರಾಮದಾಯಕವಾಗಿರುವುದರ ಜೊತೆಗೆ ಪರಿಸರ ಸ್ನೇಹಿಯಾಗಿರಲಿವೆ. ಈ ಬಸ್‍ಗಳ ಹೊರತಾಗಿ 40 ಸೀಟ್ ಹಾಗೂ 56 ಸೀಟ್‍ಗಳ ಬಸ್‍ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಈ ಎಲ್‍ಎನ್‍ಜಿ ಬಸ್‍ಗಳು, ಸಿಎನ್‍ಜಿ ಬಸ್‍ಗಳಿಗಿಂತ 2.5 ಪಟ್ಟು ಹೆಚ್ಚು ಸಾಮರ್ಥ್ಯವನ್ನು ಹೊಂದಿವೆ. ಎಲ್‍ಎನ್‍ಜಿಗಳನ್ನು ಪೂರ್ತಿಯಾಗಿ ತುಂಬಿಸಿದರೆ ಈ ಬಸ್‍ಗಳು 600 - 700 ಕಿ.ಮೀಗಳವರೆಗೆ ಚಲಿಸುತ್ತವೆ. ಎಲ್‍ಎನ್‍ಜಿ ಬಸ್‍ಗಳು ಪರಿಸರ ಸ್ನೇಹಿಯಾಗಿವೆ.
ಈ ಎಲ್‍ಎನ್‍ಜಿ ಬಸ್‍ಗಳು ಕಡಿಮೆ ತೂಕವನ್ನು ಹೊಂದಿದ್ದರೂ ಸಹ ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿವೆ. ಈ ಬಸ್‍ಗಳು ಆರಾಮದಾಯಕ ಪ್ರಯಾಣವನ್ನು ನೀಡುವುದರ ಜೊತೆಗೆ ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.


Click it and Unblock the Notifications