ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿ ತಾನು ಹೊಂದಿರುವ ಪಾಲನ್ನು ಮಾರಾಟ ಮಾಡುವ ಬಗೆಗಿನ ವರದಿಗಳನ್ನು ನಿರಾಕರಿಸಿದೆ. ಟಾಟಾ ಮೋಟಾರ್ಸ್ ಜಾಗ್ವಾರ್ ಲ್ಯಾಂಡ್ ರೋವರ್‌ನಲ್ಲಿರುವ ಪಾಲನ್ನು ಮಾರಾಟ ಮಾಡುತ್ತಿಲ್ಲ ಎಂದು ಟ್ವೀಟರ್ ನಲ್ಲಿ ಖಚಿತಪಡಿಸಿದೆ.

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಈ ಕುರಿತು ಹಬ್ಬಿದ್ದ ಎಲ್ಲಾ ಸುದ್ದಿ ಹಾಗೂ ವದಂತಿಗಳನ್ನು ಕಂಪನಿಯು ತಳ್ಳಿಹಾಕಿದೆ. ಜಾಗ್ವಾರ್ ಲ್ಯಾಂಡ್ ರೋವರ್, ಟಾಟಾ ಮೋಟಾರ್ಸ್ ಮಾತ್ರವಲ್ಲದೆ ಟಾಟಾ ಸಮೂಹದ ಪ್ರಮುಖ ಭಾಗವಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆ ನೀಡಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳ ವ್ಯವಹಾರವು ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಕಂಪನಿಯು ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯ ಬಗ್ಗೆಯೂ ಕಂಪನಿಯು ಗಮನಹರಿಸುತ್ತಿದೆ.

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಇದರಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ವಾಹನಗಳು ಪ್ರಮುಖ ಪಾತ್ರ ವಹಿಸಲಿವೆ. ಜಾಗ್ವಾರ್ ಲ್ಯಾಂಡ್ ರೋವರ್ ವ್ಯವಹಾರಗಳನ್ನು ಮುಂದುವರೆಸಲು ಟಾಟಾ ಮೋಟಾರ್ಸ್ ಕಂಪನಿಯು ಪಾಲುದಾರನನ್ನು ಹುಡುಕುತ್ತಿದೆ ಎಂದು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವರದಿಗಳಾಗಿದ್ದವು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಪರಿಹಾರ ಪ್ಯಾಕೇಜ್ ಗಾಗಿ ಟಾಟಾ ಮೋಟಾರ್ಸ್ ಸಲ್ಲಿಸಿದ್ದ ಬೇಡಿಕೆಯನ್ನು ಬ್ರಿಟನ್ ಸರ್ಕಾರವು ತಿರಸ್ಕರಿಸಿದ ಕಾರಣಕ್ಕೆ ಕಂಪನಿಯು ಜಾಗ್ವಾರ್ ಲ್ಯಾಂಡ್ ರೋವರ್ ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ವರದಿಗಳಾಗಿದ್ದವು.

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಬ್ರಿಟನ್ ನಲ್ಲಿರುವ ಉಕ್ಕು ಉತ್ಪಾದನಾ ಘಟಕವನ್ನು ಸಹ ಮಾರಾಟ ಮಾಡಲಿದೆ ಎಂಬ ವದಂತಿಗಳು ಹಬ್ಬಿದ್ದವು. ಟಾಟಾ ಮೋಟಾರ್ಸ್ ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಗ್ರೂಪ್‌ನೊಂದಿಗೆ ವ್ಯವಹಾರ ನಡೆಸುತ್ತಿದ್ದರೂ ಸಹ ಕಂಪನಿಯು ತನ್ನ ಪಾಲನ್ನು ಮಾರಾಟ ಮಾಡುವ ವರದಿಗಳನ್ನು ನಿರಾಕರಿಸಿದೆ.

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಕಳೆದ ತಿಂಗಳು ಸಹ ಟಾಟಾ ಮೋಟಾರ್ಸ್ ವೈಯಕ್ತಿಕ ವಾಹನ ವ್ಯವಹಾರದಲ್ಲಿನ ತನ್ನ ಪಾಲನ್ನು ಮಾರಾಟ ಮಾಡುವ ವದಂತಿಗಳನ್ನು ತಳ್ಳಿಹಾಕಿತ್ತು. ಟಾಟಾ ಮೋಟಾರ್ಸ್ ಈ ಎಲ್ಲಾ ಸುದ್ದಿಗಳನ್ನು ನಿರಾಕರಿಸಿದ್ದು, ಈ ಎಲ್ಲಾ ಸುದ್ದಿಗಳು ಸುಳ್ಳು ಎಂದು ಹೇಳಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಾರುಗಳು ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿವೆ. ಟಾಟಾ ಮೋಟಾರ್ಸ್ ಕಾರುಗಳು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಜನಪ್ರಿಯವಾಗಿವೆ.

ಜಾಗ್ವಾರ್ ಲ್ಯಾಂಡ್ ರೋವರ್‌ ಪಾಲುಗಳ ಮಾರಾಟದ ಬಗ್ಗೆ ಸ್ಪಷ್ಟನೆ ನೀಡಿದ ಟಾಟಾ ಮೋಟಾರ್ಸ್

ಟಾಟಾ ಕಾರುಗಳು ಸರಿಸಾಟಿಯಿಲ್ಲದ ಸುರಕ್ಷತೆಯನ್ನು ನೀಡುತ್ತವೆ ಎಂದು ಎಂದು ಟಾಟಾ ಮೋಟಾರ್ಸ್ ಹೇಳಿದೆ. ಟಾಟಾ ಕಾರುಗಳ ಮಾರುಕಟ್ಟೆ ನಿಧಾನವಾಗಿ ಬಲಗೊಳ್ಳುತ್ತಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿದೆ. ಮುಂಬರುವ ದಿನಗಳಲ್ಲಿಯೂ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Tata Motors denies selling its share in Jaguar Land Rover. Read in Kannada.
Story first published: Monday, August 17, 2020, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X