ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಭಾರತದ ಪ್ರಮುಖ ಕಮರ್ಷಿಯಲ್ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಸಿಗ್ನಾ 4825 ಟ್ರಕ್ ಟಿಕೆ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಅನ್ನು ಬಿಡುಗಡೆಗೊಳಿಸಿರುವುದಾಗಿ ಪ್ರಕಟಿಸಿದೆ. ಇದು 47.5 ಟನ್ ತೂಕದ ಮಲ್ಟಿ-ಆಕ್ಸಲ್ ಟ್ರಕ್ ಆಗಿದೆ.

ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಭಾರೀ ಪ್ರಮಾಣದ ನಿರ್ಮಾಣ ಸಾಮಗ್ರಿ ಅಥವಾ ಕಲ್ಲಿದ್ದಲನ್ನು ಸಾಗಿಸುವ ಉದ್ದೇಶದಿಂದ ಈ ಟ್ರಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಟಾಟಾ ಸಿಗ್ನಾ 4825 ಟಿಕೆ ಟ್ರಕ್, 29 ಕ್ಯೂಬಿಕ್ ಮೀಟರ್ ಬಾಕ್ಸ್ ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಟಿಪ್ಪರ್ ಟ್ರಕ್ ಅನ್ನು ಗ್ರಾಹಕರ ಹೆಚ್ಚಿನ ಉತ್ಪಾದಕತೆ ಹಾಗೂ ತ್ವರಿತ ವಹಿವಾಟು ಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ.

ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟ್ರಕ್ ಹೆಚ್ಚಿನ ಪರ್ಫಾಮೆನ್ಸ್, ಹೆಚ್ಚಿನ ಪೇಲೋಡ್ ಸಾಮರ್ಥ್ಯ, ಕಡಿಮೆ ವೆಚ್ಚ, ಹೆಚ್ಚು ಸೌಲಭ್ಯ ಹಾಗೂ ಚಾಲಕರಿಗೆ ಸುರಕ್ಷತೆಯನ್ನು ಒದಗಿಸುತ್ತದೆ. ಸಿಗ್ನಾ 4825 ಟಿಕೆ ಟ್ರಕ್ ನಲ್ಲಿ ಕಮ್ಮಿನ್ಸ್ ಐಎಸ್‌ಬಿ 6.7-ಲೀಟರಿನ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 250 ಬಿಹೆಚ್‌ಪಿ ಪವರ್ ಹಾಗೂ 950 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟ್ರಕ್, 9-ಸ್ಪೀಡಿನ ಜಿ 1150 ಗೇರ್ ಬಾಕ್ಸ್ ಹೊಂದಿದೆ. ಟ್ರಕ್‌ನಲ್ಲಿ 430 ಎಂಎಂ ಆರ್ಗ್ಯಾನಿಕ್ ಕ್ಲಚ್ ಅಳವಡಿಸಲಾಗಿದೆ. ಗೇರ್ ರೇಶಿಯೊಗಳನ್ನು ನಿರ್ದಿಷ್ಟವಾಗಿ ಕಡಿಮೆ ಇಂಧನವನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟಿಪ್ಪರ್ ಟ್ರಕ್‌ನಲ್ಲಿ ಲೈಟ್, ಮೀಡಿಯಂ ಹಾಗೂ ಹೆವಿ ಎಂಬ 3 ವಿಭಿನ್ನ ಡ್ರೈವ್ ಮೋಡ್‌ಗಳಿವೆ. ಈ ಡ್ರೈವ್ ಮೋಡ್‌ಗಳು ಲೋಡ್ ಹಾಗೂ ಭೂಪ್ರದೇಶದ ಆಧಾರದ ಮೇಲೆ ಹೆಚ್ಚಿನ ಪವರ್ ಹಾಗೂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಜೊತೆಗೆ ಹೆಚ್ಚಿನ ಪವರ್ ದಕ್ಷತೆಯನ್ನು ಖಾತ್ರಿಗೊಳಿಸುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟ್ರಕ್ ಫ್ಯಾಕ್ಟರಿ ಬಿಲ್ಟ್, ರೆಡಿ ಟು ಯೂಸ್ ವಾಹನವಾಗಿದ್ದು, 29 ಕ್ಯೂಬಿಕ್ ಮೀಟರ್ ಟಿಪ್ಪರ್ ಬಾಡಿ ಹಾಗೂ ಹೈಡ್ರಾಲಿಕ್ಸ್ ಗಳನ್ನು ಹೊಂದಿದೆ. ಸಿಗ್ನಾ 4825 ಟಿಕೆ ಟ್ರಕ್ ಅನ್ನು 10x4 ಹಾಗೂ 10x2 ಡ್ರೈವ್ ಮೋಡ್‌ ಹೊಂದಿರುವ ಎರಡು ಕಾನ್ಫಿಗರೇಷನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರಿ ಗಾತ್ರದ ಮಲ್ಟಿ ಆಕ್ಸಲ್ ಟಿಪ್ಪರ್ ಟ್ರಕ್ ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್

ಈ ಟ್ರಕ್ ಹೆವಿ ಸ್ಲೀಪರ್ ಕ್ಯಾಬಿನ್, ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀಯರಿಂಗ್ ಸಿಸ್ಟಂ, ಅಡ್ಜಸ್ಟಬಲ್ ಡ್ರೈವರ್ ಸೀಟ್, ಏರ್ ಕಂಡಿಷನಿಂಗ್ ಸಿಸ್ಟಂ, ಸುಲಭವಾದ ಶಿಫ್ಟ್ ಗೇರ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ ಈ ಟ್ರಕ್‌ಗೆ 6 ವರ್ಷ ಅಥವಾ 6 ಲಕ್ಷ ಕಿ.ಮೀಗಳ ವಾರಂಟಿ ನೀಡುತ್ತದೆ.

Most Read Articles

Kannada
English summary
Tata motors launches heavy load multi excel truck. Read in Kannada
Story first published: Friday, August 14, 2020, 9:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X