ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಹಲವು ವಾಹನಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ.

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಭಾರೀ ಹಾಗೂ ಹಗುರ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿರುವ ಪ್ರಬಲ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್ ಕಾರು ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಲು ಪ್ರಯತ್ನ ಪಡುತ್ತಿದೆ. ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವೆಹಿಕಲ್ ಮಾರಾಟದಲ್ಲಿನ ಕುಸಿತದಿಂದ ಹೊರ ಬರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಹೊಸ ಕಂಪನಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ.

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಮುಂಬರುವ ದಿನಗಳಲ್ಲಿ ಪ್ರಯಾಣಿಕ ವಾಹನಗಳ ತಂತ್ರಜ್ಞಾನ ಹಾಗೂ ನಿರ್ಮಾಣದಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದೆ. ಇದಕ್ಕೆ ದೊಡ್ಡ ಮಟ್ಟದ ಹೂಡಿಕೆಯ ಅಗತ್ಯವಿರುತ್ತದೆ. ಸರಿಯಾದ ವ್ಯವಹಾರವನ್ನು ಹೊಂದಿದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಇದನ್ನು ಮನಗಂಡಿರುವ ವಿಶ್ವದ ಹಲವು ಪ್ರಮುಖ ಕಾರು ಕಂಪನಿಗಳು ಮೈತ್ರಿ ಮಾಡಿಕೊಳ್ಳಲು ಆರಂಭಿಸಿವೆ. ಈ ರೀತಿಯಾಗಿ ಹೂಡಿಕೆಯನ್ನು ಹಂಚಿಕೊಳ್ಳುವುದರಿಂದ ವ್ಯವಹಾರವೂ ಸಹ ಸುಗಮವಾಗಿ ಸಾಗುತ್ತದೆ.

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಇದನ್ನು ಗಮನದಲ್ಲಿಟ್ಟುಕೊಂಡು ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ಕಾರು ಸೆಗ್ ಮೆಂಟಿಗಾಗಿ ಪಾಲುದಾರನನ್ನು ಹುಡುಕುತ್ತಿದೆ. ಇತ್ತೀಚೆಗೆ ತನ್ನ ಪ್ರಯಾಣಿಕರ ವಾಹನ ಸೆಗ್ ಮೆಂಟ್ ಅನ್ನು ಪ್ರತ್ಯೇಕವಾಗಿಸಲು ನಿರ್ಧರಿಸಿರುವ ಟಾಟಾ ಮೋಟಾರ್ಸ್, ಇದನ್ನು ಮತ್ತೊಂದು ಕಂಪನಿಯ ಸಹಭಾಗಿತ್ವದಲ್ಲಿ ನಿರ್ವಹಿಸಲು ಬಯಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ನ ಉನ್ನತ ಅಧಿಕಾರಿಯಾದ ಶೈಲೇಶ್ ಚಂದ್ರ, ಟಾಟಾ ಮೋಟಾರ್ಸ್ ಕಂಪನಿಯು ಮೈತ್ರಿ ಮಾಡಿಕೊಳ್ಳಲು ಸ್ಪರ್ಧಿಸಲು ಎಂಬುದನ್ನು ಖಚಿತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ವ್ಯವಹಾರವನ್ನು ಸ್ಥಿರಗೊಳಿಸಲು ಮತ್ತೊಂದು ಕಂಪನಿಯೊಂದಿಗೆ ಮೈತ್ರಿ ಅಗತ್ಯವಿದೆ ಎಂದು ಅವರು ಹೇಳಿದರು.

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಈ ಮೈತ್ರಿ ಯೋಜನೆಯಿಂದಾಗಿ ಕಾರು ಮಾದರಿಗಳನ್ನು ಅಪ್‌ಗ್ರೇಡ್ ಮಾಡಲು, ಕಡಿಮೆ ಅವಧಿಯಲ್ಲಿ ಹೊಸ ಕಾರುಗಳನ್ನು ಪರಿಚಯಿಸಲು ಹೆಚ್ಚು ಅನುಕೂಲವಾಗುತ್ತದೆ. ಇದರಿಂದಾಗಿ ಅಲ್ಪಾವಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ತರಲು ಸಾಧ್ಯವಾಗಲಿದೆ ಎಂದು ಶೈಲೇಶ್ ಚಂದ್ರ ಹೇಳಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಮತ್ತೊಂದು ಕಂಪನಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಎರಡೂ ಕಂಪನಿಗಳ ಅನುಕೂಲಕ್ಕಾಗಿ ಸಹಭಾಗಿತ್ವವನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ವೈಯಕ್ತಿಕ ವಾಹನಗಳ ಬಳಕೆ ಹೆಚ್ಚಾದಂತೆ ಪ್ರಯಾಣಿಕರ ವಾಹನ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಇತ್ತೀಚಿಗೆ ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಅನ್ನು ಮಾರಾಟ ಮಾಡಲಿದೆ ಎಂದು ವರದಿಗಳಾಗಿದ್ದವು. ಆದರೆ, ಟಾಟಾ ಮೋಟಾರ್ಸ್ ಈ ವರದಿಗಳನ್ನು ತಳ್ಳಿಹಾಕಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಬಲವರ್ಧನೆಗೆ ಮತ್ತೊಂದು ಕಂಪನಿಯ ಜೊತೆಗೆ ಕೈಜೋಡಿಸಲು ಮುಂದಾದ ಟಾಟಾ ಮೋಟಾರ್ಸ್

ಈಗ ಟಾಟಾ ಮೋಟಾರ್ಸ್ ತನ್ನ ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟ್ ಅನ್ನು ಬಲಪಡಿಸಲು ಮತ್ತೊಂದು ಕಂಪನಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಗ್ಗೆ ವರದಿಯಾಗಿದೆ.

Most Read Articles

Kannada
English summary
Tata Motors looking for partner for passenger vehicle business. Read in Kannada.
Story first published: Monday, October 26, 2020, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X