ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಮಹಾಮಾರಿ ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರವು ಎಪ್ರಿಲ್ 14ರ ತನಕ 21 ದಿನಗಳ ಕಾಲ ಲಾಕ್ ಡೌನ್ ವಿಧಿಸಿದ್ದು, ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬಿದ್ದಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ವೈರಸ್ ತಡೆಯುವ ಉದ್ದೇಶದಿಂದ ಅನಿವಾರ್ಯವಾಗಿ ಲಾಕ್ ಡೌನ್ ವಿಧಿಸಿದ್ದರಿಂದ ಕೈಗಾರಿಕೆ ವಲಯದಲ್ಲಿ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಟೋ ಕಂಪನಿಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ. ಅದರಲ್ಲೂ ಬ್ಯಾನ್ ಭೀತಿಯಲ್ಲಿದ್ದ ಬಿಎಸ್-4 ವಾಹನ ಮಾರಾಟಕ್ಕೆ ಹಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಹೊಸ ವಾಹನಗಳ ಉತ್ಪಾದನೆ ಕುಂಠಿತವಾಗಿರುವುದಲ್ಲದೆ ಹಳೆಯ ವಾಹನ ಮಾರಾಟದಲ್ಲೂ ನಷ್ಟ ಭೀತಿ ಎದುರಾಗಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ದೇಶದ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಸಹ ಮಾರ್ಚ್ ಅವಧಿಯಲ್ಲಿ ಶೇ.84ರಷ್ಟು ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದ್ದು, ಎಪ್ರಿಲ್ ಅವಧಿಯಲ್ಲೂ ಭಾರೀ ನಷ್ಟ ಭೀತಿ ಎದುರಾಗಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಮಾರ್ಚ್ ಅವಧಿಯಲ್ಲಿ ಟಾಟಾ ಕಂಪನಿಯು ಪ್ಯಾಸೆಂಜರ್ ಕಾರುಗಳ ಮಾರಾಟದಲ್ಲಿ ಶೇ.68ರಷ್ಟು ಕುಸಿತ ಕಂಡಲ್ಲಿ, ವಾಣಿಜ್ಯ ವಾಹನಗಳು ಮತ್ತು ಪ್ಯಾಸೆಂಜರ್ ಕಾರುಗಳ ಒಟ್ಟಾರೆ ಮಾರಾಟದಲ್ಲಿ ಶೇ.84ರಷ್ಟು ಕುಸಿತ ಕಂಡಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಇದರಲ್ಲದೇ ಬಿಎಸ್-4 ವಾಹನ ಸ್ಟಾಕ್ ಪ್ರಮಾಣವು ಆಟೋ ಕಂಪನಿಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟುಮಾಡಲಿದೆ. ಭಾರತದಲ್ಲಿ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ 2018ರ ಅಕ್ಟೋಬರ್‌ನಲ್ಲಿ ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ನಿಯಮವನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಸುಪ್ರೀಂ ಆದೇಶದಂತೆ ಇಂದಿನಿಂದ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಇನ್ನು ಕೂಡಾ ಬಿಎಸ್-4 ವಾಹನಗಳವನ್ನು ಮುಂದಿನ ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

2020ರ ಏಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಬಿಎಸ್-6 ಜಾರಿಗೆ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ಬ್ಯಾನ್ ನಷ್ಟ ತಡೆಗೆ ಸಹಕರಿಸಿದೆ.ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

ಕರೋನಾ ಎಫೆಕ್ಟ್- ಶೇ.84ರಷ್ಟು ಕುಸಿತ ಕಂಡ ಟಾಟಾ ವಾಹನಗಳ ಮಾರಾಟ..!

ಮಾಹಿತಿಗಳ ಪ್ರಕಾರ, ವಿವಿಧ ಆಟೋ ಕಂಪನಿಗಳ ಬಳಿ ಇನ್ನು ಸುಮಾರು 7 ಲಕ್ಷ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ.

Article Published On: Thursday, April 2, 2020, 12:27 [IST]
English summary
Tata Motors March sales declined 84 percent. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+