ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆಗಳ ಅಧಿಕೃತ ವಾಹನಗಳ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು ಡೀಸೆಲ್ ಕಾರುಗಳ ಆಯ್ಕೆಯನ್ನು ಗಣನೀಯವಾಗಿ ಇಳಿಕೆ ಮಾಡಿದ್ದು, ಪೂರ್ಣಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಪ್ರಮುಖ ಇಲಾಖೆಗಳಿಗೆ ಈಗಾಗಲೇ ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಜೆಟ್‌ಗೆ ಅನುಗುಣವಾಗಿ ಪೂರೈಕೆ ಮಾಡಿದ್ದು, ಇತ್ತೀಚೆಗೆ ಆಯಷ್ ಇಲಾಖೆಗೂ ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನು ಪರಿಚಯಿಸಿದೆ. ದೆಹಲಿಯಲ್ಲಿ ಆಯುಷ್ ಇಲಾಖೆಯ ಮುಖ್ಯ ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳ ಸರ್ಕಾರಿ ವಾಹನವನ್ನಾಗಿ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಆಯ್ಕೆ ಮಾಡಲಾಗಿದ್ದು, ಮೊದಲ ಬ್ಯಾಚ್ ವಿತರಣೆ ಮಾಡಲಾಗಿದೆ.

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಮುಂಬರುವ ದಿನಗಳಲ್ಲಿ ಆಯುಷ್ ಇಲಾಖೆಗಾಗಿಯೇ 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಟಿಗೋರ್ ಇವಿ ಕಾರು ಗ್ರಾಹಕರ ಬೇಡಿಕೆ ಒಟ್ಟು ಮೂರು ವೆರಿಯೆಂಟ್‌ಗಳೊಂದಿಗೆ ಅತ್ಯುತ್ತಮ ಮೈಲೇಜ್ ಹೊಂದಿದೆ.

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಎಕ್ಸ್ಇ ಪ್ಲಸ್, ಎಕ್ಸ್ಎಂ ಪ್ಲಸ್ ಮತ್ತು ಎಕ್ಸ್‌ಟಿ ಪ್ಲಸ್ ಆವೃತ್ತಿಗಳನ್ನು ಹೊಂದಿರುವ ಟಿಗೋರ್ ಇವಿ ಕಾರು ಸದ್ಯ 21.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 213ಕಿ.ಮೀ ಮೈಲೇಜ್ ನೀಡಲಿದ್ದು, ಹೊಸ ಕಾರಿನಲ್ಲಿ ಇದೀಗ ಬ್ಯಾಟರಿ ಪ್ಯಾಕ್ ಉನ್ನತೀಕರಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಟಿಗೋರ್ ಇವಿ ಕಾರು ವಾಣಿಜ್ಯ ಬಳಕೆದಾರರಿಗೆ ಒಂದು ಮಾದರಿಯ ದರ ಪಡೆದುಕೊಂಡಲ್ಲಿ ವ್ಯಯಕ್ತಿಕ ಕಾರು ಬಳಕೆದಾರರಿಗೆ ಮತ್ತೊಂದು ಮಾದರಿಯ ದರ ಪಟ್ಟಿ ಹೊಂದಿದೆ. ವಾಣಿಜ್ಯ ಬಳಕೆದಾರರಿಗಾಗಿ ಟಿಗೋರ್ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ 9.44 ಲಕ್ಷದಿಂದ ಬೆಲೆ ಆರಂಭವಾದಲ್ಲಿ ವ್ಯಯಕ್ತಿಕ ಕಾರು ಬಳಕೆದಾರರಿಗೆ ಆರಂಭಿಕವಾಗಿ ರೂ.12.59 ಲಕ್ಷ ಬೆಲೆ ಹೊಂದಿದೆ.

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪೂರಕವಾದ ವಾತಾವರಣವಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನಗಳ ಖರೀದಿಗೆ ಹಿನ್ನಡೆಯುಂಟು ಮಾಡುತ್ತಿದ್ದು, ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು ವಿವಿಧ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಆಯಾಕಟ್ಟಿನ ಪ್ರದೇಶಗಳಲ್ಲಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಕಳೆದ ಫೆಬ್ರುವರಿಯಲ್ಲೇ ಹೊಸ ಯೋಜನೆಗಾಗಿ ಬಿಎಸ್ಎನ್ಎನ್ ಸಂಸ್ಥೆಯ ಜೊತೆಗೂಡಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದ ಇಇಎಸ್ಎಲ್ ಸಂಸ್ಥೆಯು ಮಾರ್ಚ್‌ನಲ್ಲಿ ಹೊಸ ಯೋಜನೆಗೆ ಅಧಿಕೃತವಾಗಿ ನೀಡುವ ಯೋಜನೆಯಲ್ಲಿತ್ತು.

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

ಆದರೆ ಕರೋನಾ ವೈರಸ್ ಪರಿಣಾಮದಿಂದಾಗಿ ಹೊಸ ಯೋಜನೆಯನ್ನು ತಟಸ್ಥವಾಗಿಟ್ಟದ್ದ ಇಇಎಸ್ಎಲ್ ಸಂಸ್ಥೆಯು ಇದೀಗ ನೋಯ್ಡಾ ಅಭಿವೃದ್ದಿ ಪ್ರಾಧಿಕಾರದ ಜೊತೆಗೂಡಿ ಮರುಚಾಲನೆ ನೀಡುತ್ತಿದ್ದು, ಯೋಜನೆಯ ಮೊದಲ ಹಂತವಾಗಿ ನೋಯ್ಡಾದಲ್ಲಿ 13 ಚಾರ್ಜಿಂಗ್ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್ ನೀಡಲು ಮುಂದಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರು ಸೌಲಭ್ಯಕ್ಕಾಗಿ ಟಿಗೋರ್ ಇವಿ ಆಯ್ಕೆ ಮಾಡಿದ ಇಇಎಸ್ಎಲ್

2021ರ ಒಳಗಾಗಿ ದೇಶಾದ್ಯಂತ ಒಟ್ಟು 1 ಸಾವಿರ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾದರಿಗಳಿಗೆ ಅನುಗುಣವಾಗಿ ಎಸಿ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಮಾಡಲಿದೆ.

Most Read Articles

Kannada
English summary
Tata Motors Partners With The Ministry Of AYUSH First Batch Tigor EV Delivered. Read in Kannada.
Story first published: Wednesday, August 26, 2020, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X