ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಕರೋನಾ ವೈರಸ್ ತೊಲಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಸಂಕಷ್ಟದ ನಡುವೆಯೂ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಕೈಗಾರಿಕಾ ವಲಯವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಕೇಂದ್ರ ಸರ್ಕಾರವು ಎಪ್ರಿಲ್ 14ರ ತನಕ 21 ದಿನಗಳ ಕಾಲ ಲಾಕ್ ಡೌನ್ ವಿಧಿಸಿದ್ದು, ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬಿದ್ದಿದೆ. ವೈರಸ್ ತಡೆಯುವ ಉದ್ದೇಶದಿಂದ ಅನಿವಾರ್ಯವಾಗಿ ಲಾಕ್ ಡೌನ್ ವಿಧಿಸಿದ್ದರಿಂದ ಕೈಗಾರಿಕೆ ವಲಯದಲ್ಲಿ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಟೋ ಕಂಪನಿಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಅದರಲ್ಲೂ ಬ್ಯಾನ್ ಭೀತಿಯಲ್ಲಿದ್ದ ಬಿಎಸ್-4 ವಾಹನ ಮಾರಾಟಕ್ಕೆ ಹಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಹೊಸ ವಾಹನಗಳ ಉತ್ಪಾದನೆ ಕುಂಠಿತವಾಗಿರುವುದಲ್ಲದೆ ಹಳೆಯ ವಾಹನ ಮಾರಾಟದಲ್ಲೂ ನಷ್ಟ ಭೀತಿ ಎದುರಾಗಿದೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ದೇಶದ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಸಹ ಮಾರ್ಚ್ ಅವಧಿಯಲ್ಲಿ ಶೇ.84ರಷ್ಟು ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದ್ದು, ಕಾರು ಉತ್ಪಾದನೆಯಲ್ಲಿ ಶೇ.75ರಷ್ಟು ಕುಸಿತವಾಗಿದೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಮಾರ್ಚ್ ಅವಧಿಯಲ್ಲಿ ಟಾಟಾ ಕಂಪನಿಯು ಪ್ಯಾಸೆಂಜರ್ ಕಾರುಗಳ ಮಾರಾಟದಲ್ಲಿ ಶೇ.68ರಷ್ಟು ಕುಸಿತ ಕಂಡಲ್ಲಿ, ವಾಣಿಜ್ಯ ವಾಹನಗಳು ಮತ್ತು ಪ್ಯಾಸೆಂಜರ್ ಕಾರುಗಳ ಒಟ್ಟಾರೆ ಮಾರಾಟದಲ್ಲಿ ಶೇ.84ರಷ್ಟು ಕುಸಿತ ಕಂಡಿದೆ. ಇದರಲ್ಲದೇ ಬಿಎಸ್-4 ವಾಹನ ಸ್ಟಾಕ್ ಪ್ರಮಾಣವು ಆಟೋ ಕಂಪನಿಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟುಮಾಡಲಿದೆ. ಭಾರತದಲ್ಲಿ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ 2018ರ ಅಕ್ಟೋಬರ್‌ನಲ್ಲಿ ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ನಿಯಮವನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಸುಪ್ರೀಂ ಆದೇಶದಂತೆ ಇದೀಗ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಇನ್ನು ಕೂಡಾ ಬಿಎಸ್-4 ವಾಹನಗಳವನ್ನು ಮುಂದಿನ ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

ಕರೋನಾ ಎಫೆಕ್ಟ್- ಟಾಟಾ ಕಾರುಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಇಷ್ಟೊಂದು ನಷ್ಟ ಭೀತಿಯ ನಡುವೆಯೂ ಜಗ್ಗದ ಟಾಟಾ ಸಮೂಹ ಸಂಸ್ಥೆಗಳು ಕರೋನಾ ವಿರುದ್ಧದ ಹೋರಾಟಕ್ಕಾಗಿ ಸರ್ಕಾರದ ಜೊತೆ ಕೈಜೋಡಿಸಿದ್ದು, ಬರೋಬ್ಬರಿ ರೂ.1,500 ಕೋಟಿ ದೇಣಿಗೆ ನೀಡಿ ಸರ್ಕಾರಕ್ಕೆ ಧೈರ್ಯ ತುಂಬಿದೆ.

Article Published On: Friday, April 3, 2020, 21:24 [IST]
English summary
Tata Motors Production Slips By 75 Percent. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+