ಅಕ್ಟೋಬರ್ ತಿಂಗಳಿನಲ್ಲಿ ಏರಿಕೆ ಕಂಡ ಟಾಟಾ ಮೋಟಾರ್ಸ್ ವಾಹನ ಮಾರಾಟ
ಟಾಟಾ ಮೋಟಾರ್ಸ್ ಕಂಪನಿಯು ತನ್ನ 2020ರ ಅಕ್ಟೋಬರ್ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಟಾಟಾ ಮೋಟಾರ್ಸ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 27%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 52,132 ಯೂನಿಟ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 49,669 ಯೂನಿಟ್ ವಾಹನಗಳನ್ನು ಮಾರಾಟ ಮಾಡಲಾಗಿದೆ. 2019ರ ಅಕ್ಟೋಬರ್‌ನಲ್ಲಿ 39,152 ಯೂನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಅಕ್ಟೋಬರ್ ತಿಂಗಳ ಮಾರಾಟವು ಸೆಪ್ಟೆಂಬರ್ ತಿಂಗಳಿಗಿಂತ 12%ನಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 44,444 ಯೂನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

2020ರ ಅಕ್ಟೋಬರ್‌ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯ 23,617 ಯೂನಿಟ್ ಪ್ರಯಾಣಿಕರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ 13,169 ಯೂನಿಟ್‌ಗಳು ಮಾರಾಟವಾಗಿದ್ದವು.

ಕಮರ್ಷಿಯಲ್ ವಾಹನಗಳ ಮಾರಾಟದ ಬಗ್ಗೆ ಹೇಳುವುದಾದರೆ, ಕಂಪನಿಯು 2020ರ ಅಕ್ಟೋಬರ್‌ನಲ್ಲಿ 26,052 ಯೂನಿಟ್ ಕಮರ್ಷಿಯಲ್ ವಾಹನಗಳನ್ನು ಮಾರಾಟ ಮಾಡಿದೆ. 2019ರ ಅಕ್ಟೋಬರ್ ತಿಂಗಳಿನಲ್ಲಿ 25,983 ಯೂನಿಟ್ ಕಮರ್ಷಿಯಲ್ ವಾಹನಗಳು ಮಾರಾಟವಾಗಿದ್ದವು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟಾಟಾ ಮೋಟಾರ್ಸ್ ಅಕ್ಟೋಬರ್ ತಿಂಗಳಿನಲ್ಲಿ 5,033 ಯೂನಿಟ್ ಬಸ್, ಟ್ರಕ್ ಹಾಗೂ ಇತರ ಹೆವಿ ವಾಹನಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಕಳೆದ ತಿಂಗಳು 40 ಲಕ್ಷ ಪ್ಯಾಸೆಂಜರ್ ಕಾರುಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ.

ಕಂಪನಿಯು 2005ರಲ್ಲಿ ಹತ್ತು ಲಕ್ಷ ಕಾರುಗಳ ನಿರ್ಮಾಣವನ್ನು ಪೂರ್ಣಗೊಳಿಸಿತ್ತು. 2015ರಲ್ಲಿ 3 ದಶಲಕ್ಷ, 2020ರಲ್ಲಿ 4 ದಶಲಕ್ಷ ಕಾರುಗಳ ನಿರ್ಮಾಣವನ್ನು ಪೂರ್ಣಗೊಳಿಸಿತ್ತು. ಟಾಟಾ ಮೋಟಾರ್ಸ್ ಕಂಪನಿಯ ಕಾರುಗಳು ಗುಣಮಟ್ಟ ಹಾಗೂ ಪರ್ಫಾಮೆನ್ಸ್ ಗೆ ಹೆಸರುವಾಸಿಯಾಗಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟಾಟಾ ಮೋಟಾರ್ಸ್ ಕಂಪನಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ನೆಕ್ಸಾನ್, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿರುವ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಟಾಟಾ ಮೋಟಾರ್ಸ್ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಕಾರುಗಳ ತಯಾರಕ ಕಂಪನಿಯಾಗಿದೆ. ದೇಶಿಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಕಂಪನಿಯು 67%ನಷ್ಟು ಪಾಲನ್ನು ಹೊಂದಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನೆಕ್ಸಾನ್ ಹಾಗೂ ಟಿಗೋರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಾಗಿವೆ. ಕಂಪನಿಯು ಹೊಸ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಟಾಟಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಆಲ್ಟ್ರೋಜ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ.

ಇದರ ಜೊತೆಗೆ ಹ್ಯಾರಿಯರ್ ಹಾಗೂ ಗ್ರಾವಿಟಾಸ್‌ನ 7 ಸೀಟರ್ ಮಾದರಿಗಳಲ್ಲದೇ ಮುಂದಿನ ವರ್ಷ ಹಲವಾರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.


Click it and Unblock the Notifications