ಕೋವಿಡ್ 19: ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರ ಹಸಿವು ನೀಗಿಸುತ್ತಿದೆ ಟಾಟಾ ಮೋಟಾರ್ಸ್

ಮಾಹಾಮಾರಿ ಕರೋನಾ ವೈರಸ್ ಹೊಡೆದೊಡಿಸಲು ಆಟೋ ಉತ್ಪಾದನಾ ಕಂಪನಿಗಳಲ್ಲೇ ಗರಿಷ್ಠ ಪ್ರಮಾಣದ ಸಹಾಯಧನ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಸರ್ಕಾರಕ್ಕೆ ನೆರವು ನೀಡುವುದರ ಜೊತೆಗೆ ದಿನಂಪ್ರತಿ ದೇಶದ ವಿವಿಧಡೆ ಸಾವಿರಾರು ಬಡ ಜನರ ಹಸಿವು ನೀಗಿಸುತ್ತಿದೆ.

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ವಿವಿಧ ರಾಜ್ಯ ಸರ್ಕಾರಗಳಿಗೆ ವಿತರಣೆ ಮಾಡುತ್ತಿವೆ. ಇದರಲ್ಲಿ ಟಾಟಾ ಕಂಪನಿಯು ಕೂಡಾ ಗರಿಷ್ಠ ಪ್ರಮಾಣದಲ್ಲಿ ದೇಣಿಗೆ ನೀಡಿರುವುದರ ಜೊತೆಗೆ ಅನ್ನದಾನ ಮಾಡುತ್ತಿರುವುದು ಕೂಡಾ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಲಾಕ್‌ಡೌನ್ ನಂತರ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡು ಕೋಟ್ಯಾಂತರ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ ಸಾವಿರಾರು ಸಂಘ-ಸಂಸ್ಥೆಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಬಡವರಿಗೆ ಊಟ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

MOST READ: ಲಾಕ್‌ಡೌನ್ ವೇಳೆ ತಂಗಿಗಾಗಿ 85 ಕಿ.ಮೀ ದೂರ ಸೈಕಲ್ ತುಳಿದ ಅಣ್ಣ..!

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಇದರಲ್ಲಿ ಟಾಟಾ ಮೋಟಾರ್ಸ್ ಕೂಡಾ ಒಂದಾಗಿದ್ದು, ಇದುವರೆಗೆ ದೇಶದ ವಿವಿಧಡೆ 1.10 ಲಕ್ಷ ಜನರಿಗೆ ಸಿದ್ದ ಆಹಾರದ ಪೊಟ್ಟಣಗಳನ್ನು ಮತ್ತು ಅಗತ್ಯ ಅಡುಗೆ ಪದಾರ್ಥಗಳ ಪೊಟ್ಟಣಗಳನ್ನು ವಿತರಣೆ ಮಾಡಿದೆ.

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಜೊತೆಗೆ ಆಟೋ ಉತ್ಪಾದನಾ ಕಂಪನಿಗಳಲ್ಲೇ ಅತಿ ಹೆಚ್ಚು ದೇಣಿಗೆ ನೀಡಿರುವ ಟಾಟಾ ಸಮೂಹ ಸಂಸ್ಥೆಗಳು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ರೂ.1,500 ಕೋಟಿ ಸಹಾಯ ಘೋಷಿಸಿದ್ದು, ಅರ್ಧದಷ್ಟು ಧನಸಹಾಯ ಮತ್ತು ಇನ್ನುಳಿದ ಹಣದಲ್ಲಿ ವೈದ್ಯಕೀಯ ಉಪಕರಣಗಳನ್ನು ಮತ್ತು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಇದಲ್ಲದೆ ಕೇರಳದಲ್ಲಿ ಕರೋನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ಪೆಯೊಂದನ್ನು ಸಹ ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿರುವ ಟಾಟಾ ಕಂಪನಿಯು ಶೀಘ್ರದಲ್ಲೇ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಿದೆ.

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಇನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಸರ್ಕಾರಗಳ ಆರ್ಥಿಕ ಪರಿಸ್ಥಿತಿಯು ಶೋಚನೀಯ ಸ್ಥಿತಿ ತಲುಪಿದ್ದು, ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಯ ಜೊತೆಗೆ ಧನಸಹಾಯವನ್ನು ಕೂಡಾ ಮಾಡುತ್ತಿವೆ.

MOST READ: ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚುತ್ತೆ ಈ ವಿಶೇಷ ಇನೋವಾ ಕಾರು..!

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪಾದನೆ ಮಾಡುತ್ತಿವೆ.

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಸರ್ಕಾರಕ್ಕೆ ದೇಣಿಗೆ ಜೊತೆಗೆ ಬಡವರಿಗೆ ಹಸಿವು ನೀಗಿಸುತ್ತಿದೆ ಟಾಟಾ

ಈ ಹಿನ್ನಲೆಯಲ್ಲಿ ಸದ್ಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಗರಿಷ್ಠ ಸಹಾಯ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕಾರಣವಾಗಿದೆ.

Most Read Articles

Kannada
English summary
Tata Motors support donations relief services offered amidst COVID-19 pandamic in India details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X