ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಭವಿಷ್ಯದ ಭಾರತಕ್ಕಾಗಿ ಸುರಕ್ಷಿತ ವಾಹನಗಳ ಅಭಿವೃದ್ದಿ ಅಭಿಯಾನ ಕೈಗೊಳ್ಳಲಾಗಿದ್ದು, ಕ್ರ್ಯಾಶ್ ಟೆಸ್ಟ್ ಮೂಲಕ ಕಾರುಗಳ ಸುರಕ್ಷಾ ಗುಣಮಟ್ಟವನ್ನು ಪ್ರಕಟಿಸಲಾಗುತ್ತಿದೆ. ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಭಾರತದಲ್ಲಿ ಅಭಿವೃದ್ದಿಗೊಳ್ಳುತ್ತಿರುವ ಕೆಲವೇ ಕೆಲವು ಕಾರು ಮಾದರಿಗಳು ಉತ್ತಮ ಸುರಕ್ಷತೆ ಹೊಂದಿದ್ದು, ಇನ್ನುಳಿದ ಕಾರು ಮಾದರಿಗಳು ಸುರಕ್ಷತೆಯಲ್ಲಿ ಹಿನ್ನಡೆ ಅನುಭವಿಸುತ್ತಿವೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಭಾರತದಲ್ಲಿ ಕಾರು ಉತ್ಪಾದನೆಯಾಗುತ್ತಿರುವ ಹಲವು ಕಾರು ಮಾದರಿಗಳು ಪ್ರಯಾಣಿಕರಿಗೆ ನಿಗದಿತ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲಾಗುತ್ತಿದ್ದು, ಎಂಟ್ರಿ ಲೆವಲ್ ಕಾರುಗಳು ಮಾತ್ರವಲ್ಲದೆ ದುಬಾರಿ ಬೆಲೆಯ ಕಾರುಗಳು ಕೂಡಾ ಸುರಕ್ಷತೆಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಆದರೆ ದೇಶದ ನೆಚ್ಚಿನ ಕಾರು ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ಪ್ರತಿ ಕಾರಿನಲ್ಲೂ ಗರಿಷ್ಠ ಸುರಕ್ಷಾ ಕ್ರಮಗಳನ್ನು ಜೋಡಣೆ ಮಾಡುವಲ್ಲಿ ಯಶಸ್ವಿಯಾಗುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ನೆಕ್ಸಾನ್ ಮಾದರಿಯೊಂದಿಗೆ ಕಾರು ಸುರಕ್ಷಾ ಸೌಲಭ್ಯಗಳನ್ನು ಅಳವಡಿಸುವಲ್ಲಿ ಮಹತ್ವದ ಬದಲವಣೆ ತರುತ್ತಿರುವ ಟಾಟಾ ಕಂಪನಿಯು ಸದ್ಯ ಉತ್ಪಾದನೆಯಲ್ಲಿರುವ ಪ್ರತಿ ಮಾದರಿಯಲ್ಲೂ ಗರಿಷ್ಠ ಸುರಕ್ಷಾ ರೇಟಿಂಗ್ ನೀಡುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಅಪಘಾತಗಳ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವತ್ತ ಗಮನಹರಿಸಿರುವ ಟಾಟಾ ಕಂಪನಿಯು ಗುಣಮಟ್ಟದ ಕಾರು ಉತ್ಪಾದನೆಯತ್ತ ಮಹತ್ವದ ಹೆಜ್ಜೆಯಿರಿಸಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕ ಸೇಫ್ಟಿ ಫೀಚರ್ಸ್‌ಗಳನ್ನು ಜೋಡಣೆ ಮಾಡುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಇತ್ತೀಚೆಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಸೊನ್ನೆ ಅಂಕ ಸುತ್ತಿದ ಮಾರುತಿ ಸುಜುಕಿ ಹೊಸ ಎಸ್-ಪ್ರೆಸ್ಸೊ ಕಾರಿನ ಸುರಕ್ಷತೆ ಬಗೆಗೆ ಕುಟುಕಿರುವ ಟಾಟಾ ಮೋಟಾರ್ಸ್ ಕಂಪನಿಯು ಸಾಮಾಜಿಕ ಜಾಲತಾಣದಲ್ಲಿ ಸಂದರ್ಭಕ್ಕೆ ತಕ್ಕಂತೆ ಒಡೆದುಹೋದ ಕಾಫಿ ಲೋಟವನ್ನು ಪ್ರದರ್ಶನ ಮಾಡಿದೆ. ಜೊತೆಗೆ ಕಾರು ಚಾಲನಾ ವಿಧಾನ ಬಗೆಗೆ ಬರೆದುಕೊಂಡಿರುವ ಟಾಟಾ ಕಂಪನಿಯು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಸೂಚಿಸಿದ್ದು, ಯಾವುದನ್ನು ಅಷ್ಟು ಸುಲಭವಾಗಿ ಒಡೆದುಹೋಗಲು ಬಿಡುವುದಿಲ್ಲ ಎಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಇದರರ್ಥ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಒಂದೇ ಹೊಡೆತಕ್ಕೆ ಛಿದ್ರವಾದ ಮಾರುತಿ ಸುಜುಕಿ ಎಸ್‌-ಪ್ರೆಸ್ಸೊ ಕಾರಿನ ಸುರಕ್ಷತೆಗೆ ಟಾಂಗ್ ನೀಡಿರುವ ಟಾಟಾ ಮೋಟಾರ್ಸ್ ಕಂಪನಿಯು ಸುರಕ್ಷಿತ ಚಾಲನೆಗಾಗಿ ಎಸ್-ಪ್ರೆಸ್ಸೊ ಕಾರಿನ ಬೆಲೆಗೆ ಸಮನಾದ ಮತ್ತು ಹೆಚ್ಚು ಸುರಕ್ಷತೆಯುಳ್ಳ ಟಿಯಾಗೋ ಕಾರು ನೀಡುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಅಂಕಗಳಿಗೆ ನಾಲ್ಕು ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿರುವ ಟಾಟಾ ಟಿಯಾಗೋ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಟಿಯಾಗೋ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.70 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.74 ಲಕ್ಷ ಬೆಲೆ ಹೊಂದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಹಾಗೆಯೇ ಮಾರುತಿ ಸುಜುಕಿ ನಿರ್ಮಾಣದ ಎಸ್‌-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಮಾದರಿಯು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 3.71 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 5.14 ಲಕ್ಷ ಬೆಲೆ ಹೊಂದಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕ್ರ್ಯಾಶ್ ಟೆಸ್ಟ್‌ನಲ್ಲಿ ಸೊನ್ನೆ ಸುತ್ತಿದ ಮಾರುತಿ ಎಸ್-ಪ್ರೆಸ್ಸೊ ಕಾರಿಗೆ ಟಾಂಗ್ ಕೊಟ್ಟ ಟಾಟಾ ಮೋಟಾರ್ಸ್

ಬಜೆಟ್ ಬೆಲೆಯೊಂದಿಗೆ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಎಸ್-ಪ್ರೆಸ್ಸೊ ಕಾರು ಸುರಕ್ಷತೆಯಲ್ಲಿ ಸೊನ್ನೆ ಸುತ್ತಿದ್ದು, ಟಾಟಾ ಮೋಟಾರ್ಸ್ ಕಾರುಗಳು ಸುರಕ್ಷತೆಯಲ್ಲಿ ಗಮನ ಸೆಳೆಯುತ್ತಿವೆ.

Article Published On: Friday, November 13, 2020, 22:22 [IST]
English summary
Tata Motors Takes A Dig At The Maruti S-Presso Global NCAP Results. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+