ಬಾಯ್ಕಟ್ ಚೀನಾ ಅಭಿಯಾನ: ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ದೇಶಾದ್ಯಂತ 'ಬಾಯ್ಕಟ್ ಚೀನಾ' ಅಭಿಯಾನವು ಜೋರಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಭಾರತದಲ್ಲಿ ಹೊಸದಾಗಿ ಉದ್ಯಮ ಆರಂಭಕ್ಕೆ ಮುಂದಾಗಿದ್ದ ಪ್ರಮುಖ ಚೀನಿ ಆಟೋ ಕಂಪನಿಗಳಿಗೆ ಶಾಕ್ ನೀಡಿದ್ದು, ಹೊಸ ಯೋಜನೆಗಳಿಗೆ ಬ್ರೇಕ್ ಹಾಕಿದೆ.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಬಾಯ್ಕಟ್ ಚೀನಾ ಅಭಿಯಾನದಿಂದಾಗಿ ಆತಂಕದಲ್ಲಿರುವ ದೇಶದ ಪ್ರಮುಖ ಆಟೋ ಕಂಪನಿಗಳು ಚೀನಿ ಆಟೋ ಕಂಪನಿಗಳೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದು, ಟಾಟಾ ಮೋಟಾರ್ಸ್ ಸಹ ಚೀನಿ ಕಾರು ಉತ್ಪಾದನಾ ಕಂಪನಿಯಾದ ಚೆರಿ ಜೊತೆಗಿನ ಸಹಭಾಗಿತ್ವ ಯೋಜನೆಗೆ ಸ್ಥಗಿತಗೊಳಿಸಲು ಮುಂದಾಗಿದೆ. ಹೊಸ ಸಹಭಾಗಿತ್ವ ಯೋಜನೆಯಿಂದಾಗಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಅರಿತಿರುವ ಟಾಟಾ ಮೋಟಾರ್ಸ್ ಕಂಪನಿಯು ಚೀನಾದಲ್ಲಿ ಹೊಸ ಉದ್ಯಮ ವ್ಯವಹಾರಕ್ಕಾಗಿ ಜಪಾನ್ ಅಥವಾ ಜರ್ಮನ್ ಮೂಲದ ಕಂಪನಿಗಳ ಜೊತೆಗೂಡಿ ಕಾರ್ಯನಿರ್ವಹಿಸಲು ಮುಂದಾಗಿದೆ.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಟಾಟಾ ಕಂಪನಿಯು ಚೀನಾ ಮಾರುಕಟ್ಟೆಯಲ್ಲಿ ತನ್ನ ಒಡೆತನ ಲ್ಯಾಂಡ್ ರೋವರ್, ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರು ಉತ್ಪನ್ನಗಳ ಮಾರಾಟ ವಿಸ್ತರಣೆಗಾಗಿ ಚೆರಿ ಜೊತೆ ಸಹಭಾಗಿತ್ವ ಯೋಜನೆ ಆರಂಭಿಸುತ್ತಿದ್ದು, ಚೆರಿ ನಿರ್ಮಾಣದ ಕೆಲವು ಜನಪ್ರಿಯ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಟಾಟಾ ಹೆಸರಿನೊಂದಿಗೆ ಮಾರಾಟ ಮಾಡುವ ಯೋಜನೆ ಹೊಂದಲಾಗಿತ್ತು.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಆದರೆ ಪ್ರಸ್ತುತ ಗಡಿ ವಿವಾದ ಸಂದರ್ಭದಲ್ಲಿ ದೇಶದ ಜನರ ವಿರೋಧಕ್ಕೆ ಕಾರಣವಾಗಬಾರದೆಂಬ ಉದ್ದೇಶದಿಂದ ಹೊಸ ಯೋಜನೆಗೆ ತಾತ್ಕಾಲಿಕವಾಗಿ ತಡೆ ನೀಡಿದ್ದು, ಮುಂಬರುವ ದಿನಗಳಲ್ಲಿ ನಡೆಯುವ ಬೆಳವಣಿಗಳ ಆಧಾರ ಮೇಲೆ ಹೊಸ ಯೋಜನೆಯನ್ನು ಮುಂದುವರಿಸಬೇಕೆ ಅಥವಾ ಬೇಡ ಎಂಬುವುದನ್ನು ಅಂತಿಮಗೊಳಿಸಲಿವೆ.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಇದಲ್ಲದೆ ಮಹಾರಾಷ್ಟ್ರ ಸರ್ಕಾರವು ಚೀನಿ ಆಟೋ ಉತ್ಪಾದನಾ ಕಂಪನಿಗಳ ಹೊಸ ಬಂಡವಾಳ ಹೂಡಿಕೆಗೆ ತಡೆ ನೀಡಿದ್ದು, ಬರೋಬ್ಬರಿ ರೂ. 5 ಸಾವಿರ ಕೋಟಿಯಷ್ಟು ಬಂಡವಾಳ ಹೂಡಿಕೆಗೆ ತಡನೀಡಿರುವುದು ಚೀನಿ ಕಂಪನಿಗಳು ಅತಂತ್ರ ಸ್ಥಿತಿಗೆ ಸಿಲುಕಿವೆ.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಇದರ ನಡುವೆ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಕಂಪನಿಗಳಿಗೆ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರವು ಭವಿಷ್ಯದಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಯೋಜನೆಗಾಗಿ ಚೀನಿ ಕಂಪನಿಗಳನ್ನು ಅವಲಂಬನೆ ಮಾಡದಿರುವುದು ಒಳಿತು ಎನ್ನುವ ಸಂದೇಶ ನೀಡಿದೆ.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಹೊಸ ವಾಹನ ತಯಾರಿಕೆಗಾಗಿ ಚೀನಾದಲ್ಲಿ ಉತ್ಪಾದನೆಯಾದ ಬಿಡಿಭಾಗಗಳನ್ನೇ ನೆಚ್ಚಿಕೊಂಡಿರುವ ಭಾರತದ ಆಟೋ ಕಂಪನಿಗಳಿಗೆ ಕೆಲವು ಮಹತ್ವದ ಮಹತ್ವದ ಸೂಚನೆಗಳನ್ನು ನೀಡಿರುವ ಸಚಿವ ನಿತಿನ್ ಗಡ್ಕರಿ ಅವರು, ಸ್ವದೇಶಿ ನಿರ್ಮಾಣದ ಬಿಡಿಭಾಗಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿ ಅದರ ಬದಲಾಗಿ ಚೀನಾದಲ್ಲಿ ಉತ್ಪಾದನೆಯಾಗುವ ಬಿಡಿಭಾಗಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಭವಿಷ್ಯದಲ್ಲಿ ಒಳ್ಳೆಯದಲ್ಲ ಎನ್ನುವ ಎಚ್ಚರಿಕೆ ನೀಡಿದ್ದಾರೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಸದ್ಯ ಭಾರತದಲ್ಲಿ ಉತ್ಪಾದನೆಯಾಗುವ ಬಹುತೇಕ ವಾಹನಗಳಲ್ಲಿ ಶೇ. 40ರಿಂದ ಶೇ.60 ರಷ್ಟು ಪ್ರಮಾಣದಲ್ಲಿ ಚೀನಿ ಕಂಪನಿಗಳ ಬಿಡಿಭಾಗಗಳೇ ಹೆಚ್ಚು ಬಳಕೆಯಾಗುತ್ತಿದ್ದು, ವಾಹನ ಬೆಲೆ ಇಳಿಕೆಗಾಗಿ ಅಗ್ಗದ ಬೆಲೆಯ ಚೀನಿ ಉತ್ಪನ್ನಗಳನ್ನೇ ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಅದರಲ್ಲೂ ಎಲೆಕ್ಟ್ರಿಕ್ ವಾಹನ ಮಾದರಿಗಳು ಶೇ.90ರಷ್ಟು ಚೀನಿ ಬಿಡಿಭಾಗಗಳೊಂದಿಗೆ ಅಭಿವೃದ್ದಿಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಶೇ.100ರಷ್ಟು ಚೀನಿ ಮತ್ತು ತೈವಾನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಚೆರಿ ಕಂಪನಿ ಜೊತೆಗಿನ ಹೊಸ ಯೋಜನೆಗೆ ಗುಡ್‌ಬೈ ಹೇಳಲಿದೆ ಟಾಟಾ

ಹೀಗಾಗಿ ಭವಿಷ್ಯದಲ್ಲಿ ಚೀನಿ ಮಾರುಕಟ್ಟೆಯ ಬಿಡಿಭಾಗಗಳಿಗೆ ಅವಲಂಬನೆಯಾಗುವುದನ್ನು ತಪ್ಪಿಸುವಂತೆ ಸಲಹೆ ನೀಡಿರುವ ನಿತಿನ್ ಗಡ್ಕರಿಯವರು ದೇಶಿಯ ಮಾರುಕಟ್ಟೆಯಲ್ಲಿನ ಬಿಡಿಭಾಗಗಳ ಬಳಕೆಯೊಂದಿಗೆ ಸ್ವದೇಶಿ ಕಂಪನಿಗಳಿಗೆ ಸಹಕರಿಸಿ ಎನ್ನುವ ಸಲಹೆ ನೀಡಿದ್ದಾರೆ.

Article Published On: Thursday, June 25, 2020, 21:16 [IST]
English summary
Tata Motors Talks With Chinese Carmakers Put On Hold Amidst Border Tensions. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+