ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೆಸರನ್ನು ಹೊಂದಲಿದೆ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಭಾರತದಲ್ಲಿ ಎರಡು ಎಸ್‌ಯುವಿಗಳನ್ನು ಬಿಡುಗಡೆಗೊಳಿಸಲಿದೆ. ಈ ಎಸ್‌ಯುವಿಗಳಲ್ಲಿ 7 ಸೀಟುಗಳ ಎಸ್‌ಯುವಿ ಹಾಗೂ ಸಣ್ಣ ಎಸ್‌ಯುವಿ ಸೇರಿವೆ. ಈ ಸೀಟುಗಳ 7 ಎಸ್‌ಯುವಿಗೆ ಗ್ರಾವಿಟಾಸ್ ಎಂದು ಹೆಸರಿಡಲಾಗಿದ್ದರೆ, ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಎಸ್‌ಯುವಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಟಾಟಾ ಮೋಟಾರ್ಸ್ ಭಾರತದಲ್ಲಿ ಟುಮೆರೊ ಎಂಬ ಹೊಸ ಹೆಸರಿನಿಂದ ವ್ಯವಹರಿಸಲು ಕಳೆದ ವರ್ಷ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಈ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಅನುಮೋದಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯೇ ಡೇಟಾಬೇಸ್‌ನಿಂದ ಈ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಕಾರ್ ಅಂಡ್ ಬೈಕ್ ವರದಿ ಮಾಡಿದೆ.

ಮುಂಬರುವ ದಿನಗಳಲ್ಲಿ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ನೊಂದಿಗೆ ಬಿಡುಗಡೆಯಾಗುವ ಎಸ್‌ಯುವಿಗಳಿಗೆ ಟುಮೆರೊ ಎಂಬ ಹೆಸರನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಕಂಪನಿಯು ಈ ವರ್ಷ ಈ ಎಸ್‌ಯುವಿಯನ್ನು ಬಿಡುಗಡೆಗೊಳಿಸಬೇಕಿತ್ತು. ಆದರೆ ಕರೋನಾ ವೈರಸ್ ಕಾರಣದಿಂದಾಗಿ ಇದರ ಬಿಡುಗಡೆಯು ವಿಳಂಬವಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟಾಟಾ ಮೋಟಾರ್ಸ್ 2020ರ ಆಟೋ ಎಕ್ಸ್ ಪೋದಲ್ಲಿ ಈ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಅನ್ನು ಪರಿಚಯಿಸಿತ್ತು. ಇದರ ಉತ್ಪಾದನಾ ಆವೃತ್ತಿಯು 90%ನಷ್ಟಿರಲಿದೆ ಎಂದು ಹೇಳಲಾಗಿದೆ. ಕಾನ್ಸೆಪ್ಟ್ ಮಾದರಿಯಂತೆ ಉತ್ಪಾದನಾ ಮಾದರಿಯೂ ಸಹ ಟೇಲ್ ಲ್ಯಾಂಪ್‌ಗಳನ್ನು ಹೊಂದಿರಲಿದೆ. ಆದರೆ ಸ್ವಲ್ಪ ಭಿನ್ನವಾಗಿರಲಿದೆ.

ಈ ಸಣ್ಣ ಎಸ್‌ಯುವಿಯನ್ನು ಕಂಪನಿಯ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೇಜ್ ನಲ್ಲಿ ನಿರ್ಮಿಸಲಾಗಿದೆ. ಈ ಎಸ್‌ಯುವಿಯಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್, ಫಾಕ್ಸ್ ಸ್ಕಿಡ್ ಪ್ಲೇಟ್, ಎಲ್‌ಇಡಿ ಡಿಆರ್‌ಎಲ್, ಇಂಟಿರಿಯರ್ ನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್ ಹಾಗೂ ಹಾರ್ಮನ್‌ನ ಆಡಿಯೊ ಸಿಸ್ಟಂಗಳನ್ನು ನೀಡಲಾಗುವುದು.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟಾಟಾ ಹೆಚ್‌ಬಿಎಕ್ಸ್ ಎಸ್‌ಯುವಿ 1.2-ಲೀಟರಿನ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 86 ಬಿಹೆಚ್‌ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಸ್‌ಯುವಿಯು ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಗೇರ್‌ಬಾಕ್ಸ್‌ಗಳಲ್ಲಿ ಲಭ್ಯವಿರಲಿದೆ. ಈ ಎಂಜಿನ್ ಅನ್ನು ಟಿಯಾಗೊ, ಆಲ್ಟ್ರೋಜ್ ಕಾರುಗಳಲ್ಲಿ ಬಳಸಲಾಗಿದೆ.

ಈ ಎಂಜಿನ್ 5 ಸ್ಪೀಡಿನ ಮ್ಯಾನುವಲ್ ಹಾಗೂ 5 ಸ್ಪೀಡಿನ ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿರಲಿದೆ. ಈ ಎಸ್‌ಯುವಿಯು ಡೀಸೆಲ್ ಎಂಜಿನ್ ಹೊಂದಿರುವುದಿಲ್ಲ. ಟಾಟಾ ಹೆಚ್‌ಬಿಎಕ್ಸ್, ನೆಕ್ಸಾನ್‌ಗಿಂತ 154 ಎಂಎಂ ಚಿಕ್ಕದಾಗಿದೆ. ಆದರೆ ನೆಕ್ಸಾನ್‌ಗಿಂತ 28 ಎಂಎಂ ಹೆಚ್ಚು ಎತ್ತರ ಹಾಗೂ 11 ಎಂಎಂ ಹೆಚ್ಚು ಅಗಲವನ್ನು ಹೊಂದಿದೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಟಾಟಾ ಹೆಚ್‌ಬಿಎಕ್ಸ್ ಭಾರತದಲ್ಲಿ ಬಿಡುಗಡೆಯಾದ ನಂತರ ಮಾರುತಿ ಇಗ್ನಿಸ್ ಹಾಗೂ ಮಹೀಂದ್ರಾ ಕೆಯುವಿ 100 ಕಾರುಗಳಿಗೆ ಪೈಪೋಟಿ ನೀಡಲಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಈ ಎಸ್‌ಯುವಿಯ ಬೆಲೆಯನ್ನು ರೂ.4-5 ಲಕ್ಷಗಳಿಗೆ ನಿಗದಿಪಡಿಸುವ ಸಾಧ್ಯತೆಗಳಿವೆ.


Click it and Unblock the Notifications