Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‌ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- News
ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲೀಸ್ ಕಾರುಗಳ ಪಟ್ಟಿಯಲ್ಲಿ ಇದೀಗ ಟಾಟಾ ನೆಕ್ಸಾನ್ ಇವಿ ಕೂಡಾ ಲಭ್ಯ
ಹೊಸ ಕಾರು ಖರೀದಿ ಸಾಧ್ಯವಾಗದ ಸಂದರ್ಭದಲ್ಲಿ ಲೀಸ್ ಕಾರುಗಳ ಆಯ್ಕೆಯು ಸಾಕಷ್ಟು ಪ್ರಾಮುಖ್ಯತೆ ಹೊಂದಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಇವಿ ಕಾರು ಮಾದರಿಯಾದ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯನ್ನು ಲೀಸ್ ಕಾರುಗಳ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ.

ಮುಂಬೈ ಮೂಲದ ಓರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವೀಸ್ ಕಂಪನಿಯ ಜೊತೆಗೂಡಿರುವ ಟಾಟಾ ಮೋಟಾರ್ಸ್ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ನೆಕ್ಸಾನ್ ಇವಿ ಮಾದರಿಯನ್ನು ಮಾಸಿಕ ದರಗಳಿಗೆ ಅನ್ವಯಿಸುವಂತೆ ಲೀಸ್ ಆಯ್ಕೆ ನೀಡುತ್ತಿದ್ದು, ಸ್ವಂತ ಕಾರು ಖರೀದಿ ಸಾಧ್ಯವಿಲ್ಲದ ಸಂದರ್ಭದಲ್ಲಿ ಗ್ರಾಹಕರು ತಮ್ಮ ಅಗತ್ಯ ಸಂದರ್ಭಕ್ಕೆ ಅನುಗುಣವಾಗಿ ಇಂತಿಷ್ಟು ತಿಂಗಳು ಕಾಲ ಕಾರು ಮಾಲೀಕ್ವವನ್ನು ಹೊಂದಬಹುದಾಗಿದೆ.

ಸದ್ಯ ಕರೋನಾ ವೈರಸ್ ಪರಿಣಾಮ ಹೊಸ ಕಾರುಗಳ ಮಾರಾಟವು ಕುಸಿದಿರುವುದರಿಂದ ಲೀಸ್ ಕಾರುಗಳ ಆಯ್ಕೆಗೆ ಹೆಚ್ಚು ಬೇಡಿಕೆ ಬರುತ್ತಿದ್ದು, ವೈರಸ್ ಪರಿಣಾಮ ಸ್ವಂತ ವಾಹನಗಳ ಬಳಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.

ಆದರೆ ಸ್ವಂತ ವಾಹನಗಳ ಖರೀದಿಯು ಸಹ ಕರೋನಾ ವೈರಸ್ ಪರಿಣಾಮ ಉಂಟಾಗಿರುವ ಸಂಕಷ್ಟದಿಂದ ಕಷ್ಟಸಾಧ್ಯವಾಗಿದ್ದು, ಸಂಕಷ್ಟ ಸಂದರ್ಭದಲ್ಲಿ ಸ್ವಂತ ವಾಹನ ಖರೀದಿಯ ಬದಲಾಗಿ ಲೀಸ್ ಆಧಾರದ ಮೇಲೆ ಮಾಲೀಕತ್ವ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಟಾಟಾ ಮೋಟಾರ್ಸ್ ಇದೇ ನಿಟ್ಟಿನಲ್ಲಿ ಓರಿಕ್ಸ್ ಆಟೋ ಜೊತೆಗೂಡಿ ನೆಕ್ಸಾನ್ ಇವಿ ಕಾರನ್ನು 18 ತಿಂಗಳು 24 ತಿಂಗಳು ಮತ್ತು 36 ತಿಂಗಳಿಗೆ ಲೀಸ್ ನೀಡಲಿದ್ದು, ಮಾಸಿಕ ದರವನ್ನು ಆರಂಭಿಕವಾಗಿ ರೂ. 41,900 ನಿಗದಿ ಮಾಡಿದೆ.

ಮಾಸಿಕ ಚಂದಾ ದರದಲ್ಲೇ ಕಾರಿನ ನೋಂದಣಿ, ರಸ್ತೆ ತೆರಿಗೆ, ನಿರ್ವಹಣಾ ವೆಚ್ಚ, ರೋಡ್ ಸೈಡ್ ಅಸಿಸ್ಟ್ ಸೇರಿದಂತೆ ಫಾಸ್ಟ್ ಚಾರ್ಜಿಂಗ್ ಸೆಟ್ಅಪ್ ವೆಚ್ಚವು ಸೇರಿ ಮಾಸಿಕವಾಗಿ ರೂ.41,900 ದರ ನಿಗದಿ ಮಾಡಲಾಗಿದ್ದು, ಆರಂಭಿಕವಾಗಿ ಲೀಸ್ ಕಾರುಗಳ ಸೌಲಭ್ಯವು ದೆಹಲಿ/ಎನ್‌ಸಿಆರ್, ಮುಂಬೈ, ಪುಣೆ, ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ಮಾತ್ರ ಲಭ್ಯವಿದೆ.

ಇನ್ನು ಲೀಸ್ ಕಾರುಗಳ ಆಯ್ಕೆಯು ಪರಿಸ್ಥಿತಿಗೆ ಅನುಗುಣವಾಗಿ ಪಡೆದುಕೊಳ್ಳುವುದು ಆರ್ಥಿಕವಾಗಿ ಉತ್ತಮ ನಿರ್ಧಾರವಾದರೂ ಧೀರ್ಘ ಕಾಲದ ಲೀಸ್ ಮಾಲೀಕತ್ವವು ಒಳ್ಳೆಯದಲ್ಲ. ಯಾಕೆಂದ್ರೆ 36 ತಿಂಗಳ ಕಾಲ ಲೀಸ್ ಪಡೆದುಕೊಂಡಲ್ಲಿ ಆ ವಾಹನದ ಪೂರ್ತಿ ಬೆಲೆ ಪಾವತಿಸಿದಂತಾಗುತ್ತದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ನಂತರ ಕಾರು ವಾಪಸ್ ನೀಡಲೇಬೇಕಿದ್ದು, ಈ ಹಿನ್ನಲೆಯಲ್ಲಿ ಲೀಸ್ ಕಾರುಗಳು ಧೀರ್ಘಾವಧಿಗೆ ಉತ್ತಮವಲ್ಲ. ಹೀಗಾಗಿ ಲೀಸ್ ಕಾರುಗಳ ಆಯ್ಕೆ ಮಾಡಿಕೊಳ್ಳುವಾಗಲೂ ಎಚ್ಚರಿಕೆ ವಹಿಸುವ ಅವಶ್ಯಕತೆಯಿದ್ದು, ಹೊಸ ಕಾರುಗಳ ಪಾವತಿ ಮಾಡಿದ ದರವನ್ನೇ ಲೀಸ್ ಕಾರುಗಳಿಗೂ ತೆತ್ತಬೇಕಾದ ಸಂದರ್ಭ ಎದುರಾಗಬಹುದು.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಪ್ರಮುಖ ಮೂರು ವೆರಿಯೆಂಟ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.15.99 ಲಕ್ಷ ಬೆಲೆಯೊಂದಿಗೆ ಮಾರಾಟಕ್ಕೆ ಲಭ್ಯವಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಒಂದು ವೇಳೆ ಇದೇ ಕಾರನ್ನು 36 ತಿಂಗಳಿಗೆ ಲೀಸ್ ಪಡೆದಲ್ಲಿ ರೂ.15.84 ಲಕ್ಷ ಬಿಲ್ ಮಾಡಲಾಗುತ್ತದೆ. ಇದು ಹೊಸ ಕಾರು ಖರೀದಿ ಸಮನಾಗಿದ್ದು, ಲೀಸ್ ಅವಧಿ ಮುಗಿದ ನಂತರ ವಾಹನವು ಸಹ ಹಿಂದಿರುಗಿಸಬೇಕಾಗುತ್ತದೆ.