ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಭಾರತದಲ್ಲಿರುವ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಇತ್ತೀಚಿಗೆ ಮುಕ್ತಾಯಗೊಂಡ 2020ರ ಆಟೋ ಎಕ್ಸ್ ಪೋದಲ್ಲಿ 7 ಸೀಟರ್‍‍ಗಳ ಹೊಸ ಕಾರ್ ಅನ್ನು ಪ್ರದರ್ಶಿಸಿತ್ತು.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಈ ಕಾರ್ ಅನ್ನು ಅತಿ ಶೀಘ್ರದಲ್ಲಿಯೇ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಟಾಟಾ ಮೋಟಾರ್ಸ್ ಟಿಯಾಗೋ, ಟಿಗೋರ್ ಹಾಗೂ ಹ್ಯಾರಿಯರ್‍‍ನಂತಹ ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತದೆ. ಅದೇ ರೀತಿ ನೆಕ್ಸಾನ್ ಸಹ ಟಾಟಾ ಮೋಟಾರ್ಸ್‍‍ನ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಈ ಕಾರು ಭಾರತದ ಮೊದಲ ಪರಿಪೂರ್ಣ ಸುರಕ್ಷತಾ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ವಿಷಯವನ್ನು ಕ್ರಾಶ್ ಟೆಸ್ಟ್ ಗಳನ್ನು ಆಯೋಜಿಸುವ ಗ್ಲೋಬಲ್ ಎನ್‍‍ಸಿ‍ಎ‍ಪಿ ಬಹಿರಂಗಪಡಿಸಿದೆ. ಎನ್‍‍ಸಿ‍ಎ‍‍ಪಿ ನಡೆಸಿದ ಕ್ರಾಶ್ ಟೆಸ್ಟ್ ನಲ್ಲಿ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ನೆಕ್ಸಾನ್ ಭಾರತದಲ್ಲಿರುವ ಕಾರು ತಯಾರಕ ಕಂಪನಿಗಳ ಪೈಕಿ ಈ ರೇಟಿಂಗ್ ಪಡೆದ ಮೊದಲ ಕಾರ್ ಆಗಿದೆ. ಈ ಕಾರಣಕ್ಕಾಗಿ ಈ ಕಾರು ಜನರ ಗಮನವನ್ನು ತನ್ನತ್ತ ಸೆಳೆದಿದೆ. 2019ರಲ್ಲಿ ನೆಕ್ಸಾನ್ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಮೋಟಾರ್ ಶೋ ಎಂಬ ಯುಟ್ಯೂಬ್ ಚಾನೆಲ್ ಟಾಟಾ ಪವರ್ಡ್ ನೆಕ್ಸಾನ್ ಕಾರ್ ಆಗಿ ಬದಲಾಗಿರುವ ಮಾದರಿಯ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ಪ್ಯಾಸೆಂಜರ್ ಕಾರು ಪೊಲೀಸ್ ಕಾರ್ ಆಗಿ ಬದಲಾದರೆ ಹೇಗಿರಲಿದೆ ಎಂಬುದನ್ನು ತೋರಿಸಲಾಗಿದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಈ ವೀಡಿಯೊದಲ್ಲಿ ಸಿಲ್ವರ್ ಬಣ್ಣವನ್ನು ಹೊಂದಿದ್ದ ಕಾರಿನ ರೂಫ್ ಅನ್ನು ಕಪ್ಪು ಬಣ್ಣಕ್ಕೆ ಬದಲಿಸಿರುವುದನ್ನು ಕಾಣಬಹುದು. ಈ ಕಾರಿನ ರೂಫ್ ಈಗ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ. ಕಾರಿನಲ್ಲಿರುವ ಉಳಿದ ಭಾಗಗಳನ್ನು ಸಹ ಕಪ್ಪು ಬಣ್ಣಕ್ಕೆ ಬದಲಿಸಲಾಗಿದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಈ ಕಾರಿನ ಮುಂಭಾಗದ ಗ್ರಿಲ್‍‍ನಲ್ಲಿ ಫ್ಲಾಶ್ ಎಲ್ಇ‍‍‍ಡಿ ಲೈಟ್‍‍ಗಳನ್ನು ಅಳವಡಿಸಲಾಗಿದೆ. ಕಾರಿನ ರೂಫ್‍‍ನಲ್ಲಿ ಪೊಲೀಸ್ ವಾಹನವೆಂದು ಹೇಳಲು ಮೂರು ಬಣ್ಣದ ಎಲ್‍ಇ‍‍ಡಿ ಲೈಟ್‍‍ಗಳಿವೆ. ಕಾರಿನ ಸೈಡಿನಲ್ಲಿ ಪೊಲೀಸ್ ಇಂಟರ್‍‍ಸೆಪ್ಟರ್ ಎಂಬ ಸ್ಟಿಕ್ಕರ್‍‍ಗಳಿವೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಕಾರಿನ ಮಿರರ್‍‍ಗಳ ಬಳಿಯಿರುವ ಎಲ್‍ಇ‍‍ಡಿ ಲೈಟ್‍‍ಗಳ ನೆರವಿನಿಂದ ಕತ್ತಲಿರುವಾಗ ಹಾಗೂ ಹಿಮ ಬೀಳುವಾಗ ಸ್ಪಷ್ಟವಾಗಿ ನೋಡಲು ಸಾಧ್ಯವಾಗಲಿದೆ. ಮುಂಭಾಗದಲ್ಲಿ ಬುಲ್ ಬಾರ್ ಅಳವಡಿಸಲಾಗಿದೆ. ಇದರಿಂದಾಗಿ ಡಿಕ್ಕಿ ಸಂಭವಿಸಿದಾಗ ಕಾರ್ ಅನ್ನು ರಕ್ಷಿಸಬಹುದಾಗಿದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಕಾರಿನ ಮೇಲಿರುವ ಎಲ್‍ಇ‍‍ಡಿ ಫ್ಲಾಶ್ ಲೈಟ್‍‍ಗಳು ಎಲ್ಲಾ ಸಮಯದಲ್ಲಿಯೂ ಫ್ಲಾಶ್ ಆಗುತ್ತವೆ. ಭಾರತ ಮೂಲದ ನೆಕ್ಸಾನ್ ಕಾರು ಒಂದು ವೇಳೆ ಅಂತರ್‍‍ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಕಾರ್ ಆದರೆ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಹೆಚ್ಚಿನ ಸುರಕ್ಷತೆಯನ್ನು ಹೊಂದಿರುವ ನೆಕ್ಸಾನ್ ಕಾರಿನಲ್ಲಿ ಬಿ‍ಎಸ್ 6 ಎಂಜಿನ್ ಅನ್ನು ಅಳವಡಿಸಿದೆ. ಈ ಕಾರ್ ಅನ್ನು 1.2 ಲೀಟರಿನ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರಿನ ಟರ್ಬೊ ಡೀಸೆಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುತ್ತದೆ.

ಪೊಲೀಸ್ ಕಾರ್ ಆದರೆ ಹೀಗಿರಲಿದೆ ಟಾಟಾ ನೆಕ್ಸಾನ್

ಈ ಎಂಜಿನ್‍‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಹಾಗೂ 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಕಾರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿಯೂ ಸಹ ಬಿಡುಗಡೆಗೊಳಿಸಲಾಗಿದೆ. ಎಲೆಕ್ಟ್ರಿಕ್ ಕಾರಿನ ಬೆಲೆಯು ಡೀಸೆಲ್ - ಪೆಟ್ರೋಲ್ ಆವೃತ್ತಿಗಳಿಗಿಂತ ಹೆಚ್ಚಾಗಿದೆ.

More from DriveSpark

Article Published On: Monday, February 17, 2020, 17:48 [IST]
English summary
Tata Nexon rendered as a police car. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+