ನೆಕ್ಸಾನ್ ಕಾರಿನ ಹೊಸ ಫೀಚರ್‍ಗಳನ್ನು ವಿವರಿಸುವ ಟಿವಿಸಿ ಬಿಡುಗಡೆಗೊಳಿಸಿದ ಟಾಟಾ
ಟಾಟಾ ಮೋಟಾರ್ಸ್ ಕಂಪನಿಯು ಈ ವರ್ಷದ ಆರಂಭದಲ್ಲಿ ನವೀಕರಿಸಿದ ಬಿಎಸ್-6 ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ನೆಕ್ಸಾನ್ ಕಾರಿನಲ್ಲಿ ಆಕರ್ಷಕ ಮತ್ತು ಅತ್ಯಾಧುನಿಕ ಫೀಚರ್‍ಗಳೊಂದಿಗೆ ಬಿಡುಗಡೆಗೊಳಿಸಿದ್ದರು.

ಟಾಟಾ ಕಾರುಗಳ ಸರಣಿಯಲ್ಲಿ ನೆಕ್ಸಾನ್ ಸುರಕ್ಷಿತ ಕಾರುಗಳಲ್ಲಿ ಇದು ಒಂದಾಗಿದೆ. ಹೊಸ ಸಬ್-4 ಮೀಟರ್ ನೆಕ್ಸಾನ್ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇದೀಗ ಈ ಹೊಸ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯ ಎಲ್ಲಾ ಫೀಚರ್ ಗಳನ್ನು ಪ್ರದರ್ಶಿಸುವ ಆಕರ್ಷಕ ಟಿವಿಸಿ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಈ ಹೊಸ ಟಿವಿಸಿ ವೀಡಿಯೋವನ್ನು ಟಾಟಾ ಮೋಟಾರ್ಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಿದೆ. ವೀಡಿಯೋದಲ್ಲಿ ಟಾಟಾ ನೆಕ್ಸಾನ್ ಎಲ್ಲಾ ಫೀಚರ್ ಗಳ ಬಗ್ಗೆ ಡಿಟೈಲ್ ಆಗಿ ಪ್ರದರ್ಶಿಸಿದ್ದಾರೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ವೀಡಿಯೊದಲ್ಲಿ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಎಕ್ಸ್‌ಪ್ರೆಸ್ ಕೂಲ್ ಬಟನ್‌ನಂತಹ ಫೀಚರ್ ಅನ್ನು ಪ್ರದರ್ಶಿಸಲಾಗಿದೆ. ಈ ಫೀಚರ್ ಗಳನ್ನು ಎಸ್‍ಯುವಿನಲ್ಲಿ ಹೊಸದಾಗಿ ಸೇರಿಸಲಾಗಿದೆ.

ನಂತರ ನೆಕ್ಸಾನ್ ನಲ್ಲಿ ಒದಗಿಸಿರುವ ಕನೆಕ್ಟಿವಿಟಿ ಫೀಚರ್‍ಗಳನ್ನು ಪ್ರದರ್ಶಿಸಿದ್ದಾರೆ. ಇದನ್ನು ಐಆರ್ಎ ಎಂದು ಕರೆಯಲಾಗುತ್ತದೆ. ಇದು ಇಂಟಿಲಿಜೆಂಟ್ ರಿಯಲ್-ಟೈಮ್ ಅಸಿಸ್ಟ್ ಆಗಿದೆ. ಈ ಫೀಚರ್ ಅನ್ನು ಪಡೆದ ಟಾಟಾ ಮೋಟಾರ್ಸ್ ಮೊದಲ ವಾಹನ ಇದಾಗಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಜಿಯೋಫೆನ್ಸ್ ಬಳಸಿ ಕಾರನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ ಕನ್ಕೆಟಿವಿಟಿ ಫೀಚರ್ ಮತ್ತು ಈ ಕಾರಿನಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟ್ ಆಗಿರುವ ಫೈಂಡ್-ಮೈ ಕಾರ್-ಫೀಚರ್ ಅನ್ನು ಹೊಂದಿದೆ. ಈ ಆಪ್ಲಿಕೇಷನ್ ಕಾರು ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚು ಪ್ರಯೋಜನೆಕಾರಿಯಾಗಿದೆ.

ಇನ್ನು ಈ ಎಸ್‍ಯುವಿಯಲ್ಲಿ ಎಮರ್ಜನ್ಸಿ ಕ್ರ್ಯಾಶ್-ಅಲರ್ಟ್ ಮತ್ತು ವಾಹನದ ಲೈವ್ ಡಯಾಗ್ನೋಸ್ಟಿಕ್ಸ್‌ನಂತಹ ಫೀಚರ್ ಅನ್ನು ಸಹ ಹೊಂದಿದೆ. ಇನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ವಾಯ್ಸ್ ಕಾಮೆಂಡ್ ಅನ್ನು ಹೊಂದಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ
ಟಾಟಾ ನೆಕ್ಸಾನ್ ನಲ್ಲಿ ಮೂರು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ. 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರೊಂದಿಗೆ 1.5 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿದೆ.

ಇದರಲ್ಲಿ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಡೀಸೆಲ್ ರೂಪಾಂತರವು 110 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಆವೃತ್ತಿಯನ್ನು ಒಂದು ಬಾರಿ ಪೂರ್ಣ ಪ್ರಮಾಣದ ಸುಮಾರು 250 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.


Click it and Unblock the Notifications