ಟಾಟಾ ಆಲ್‌ಟ್ರೊಜ್, ಟಿಯಾಗೋ ಮತ್ತು ನೆಕ್ಸಾನ್ ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಟಾಟಾ ಮೋಟಾರ್ಸ್ ಕಂಪನಿಯು ಕರೋನಾ ವೈರಸ್‌ನಿಂದಾಗಿ ತೀವ್ರವಾಗಿ ಕುಸಿತಕಂಡಿರುವ ಕಾರು ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಕಾರು ಮಾರಾಟದ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಹೊಸ ವಾಹನ ಖರೀದಿದಾರರಿಗೆ ಇಎಂಐ ದರ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಲಾಕ್‌ಡೌನ್‌ಗೂ ಮೊದಲು ವಾಹನ ಖರೀದಿಯ ಯೋಜನೆಯಲ್ಲಿದ್ದ ಬಹುತೇಕ ಗ್ರಾಹಕರು ಕಾರು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದು ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಇದರಿಂದ ಗ್ರಾಹಕರನ್ನು ಸೆಳೆಯಲು ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯಗಳನ್ನು ನೀಡುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮೇಲೆ ವಿಶೇಷ ಆಫರ್‌ಗಳನ್ನು ನೀಡಿದೆ.

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಟಾಟಾ ಹೊಸ ಕಾರುಗಳನ್ನು ಖರೀದಿಸುವ ಗ್ರಾಹಕರು ಯಾವುದೇ ಡೌನ್‌ಪೆಮೆಂಟ್ ಇಲ್ಲದೆ ಕಾರಿನ ಮಾಲೀಕತ್ವದ ಹೊಂದಬಹುದಾಗಿದ್ದು, ಜನವರಿಯಿಂದ ಇಎಂಐ ಅನ್ವಯವಾಗುವಂತೆ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಆಲ್‌ಟ್ರೊಜ್, ಟಿಯಾಗೋ ಮತ್ತು ನೆಕ್ಸಾನ್ ಕಾರು ಖರೀದಿ ಮಾಡುವ ಗ್ರಾಹಕರಿಗೆ ಈ ಹೊಸ ಸಾಲ ಸೌಲಭ್ಯವು ಲಭ್ಯವಿರಲಿದ್ದು, ಕಾರು ಖರೀದಿ ಮಾಡಿದ ಆರು ತಿಂಗಳ ತಿಂಗಳ ತನಕ ಯಾವುದೇ ಇಎಂಐ ಹೊರೆಯಿರುವುದಿಲ್ಲ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಇದು ಸದ್ಯ ಆರ್ಥಿಕ ಸಂಕಷ್ಟದಿಂದ ಕಾರು ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಅನುಕೂಲಕರವಾಗಲಿದ್ದು, ಶೇ.100ರಷ್ಟು ಆನ್‌ರೋಡ್ ಸಾಲ ಸೌಲಭ್ಯವಿರುವುದರಿಂದ ಡೌನ್‌ಪೆಮೆಂಟ್ ಕೂಡಾ ಕಟ್ಟುವ ಅವಶ್ಯಕತೆಯಿಲ್ಲ.

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಆರು ತಿಂಗಳ ನಂತರ ಸಾಮಾನ್ಯ ಮಾದರಿಯಲ್ಲೇ ಇಎಂಐ ಪಾವತಿ ಮಾಡಬೇಕಿದ್ದು, ಇಎಂಐ ವಿನಾಯ್ತಿ ಮಾತ್ರವಲ್ಲದೆ ಹೊಸ ಕಾರುಗಳ ಮೇಲೂ ಇನ್ನು ಹಲವು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಸ್ಪೆಷಲ್ ಲೋನ್ ಆಫರ್

ಟಾಟಾ ನೀಡಿರುವ ಇಎಂಐ ಪಾವತಿ ವಿನಾಯ್ತಿ ಆಫರ್‌ ಜುಲೈನಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಕುಸಿದಿರುವ ಹೊಸ ಕಾರು ಮಾರಾಟವನ್ನು ಸುಧಾರಣೆ ತರಲು ಕೆಲವು ಮಹತ್ವದ ನಿರ್ಧಾರಗಳು ಸದ್ಯ ಆಟೋ ಉದ್ಯಮಕ್ಕೆ ಅನಿವಾರ್ಯವಾಗಿ ಪರಿಣಮಿಸಿವೆ.

Most Read Articles

Kannada
English summary
ata Motors has rolled out special finance offers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X