ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಟಾಟಾ ಟಿಯಾಗೋ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಿಯಾಗೋ ಕಾರು ಸದ್ದಿಲ್ಲದೆ ಒಂದೆರಡು ನವೀಕರಣಗಳನ್ನು ಪಡೆದುಕೊಂಡಿದೆ.

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಟೀಂ ಬಿಹೆಚ್‍ಪಿ ಪ್ರಕಾರ, ಹೊಸ ಚಿತ್ರದಲ್ಲಿ ಕಾರಿನ ಡೋರಿನ ಒಳಭಾಗದ ಹ್ಯಾಂಡಲ್ ಮತ್ತು ಟಿಯಾಗೊ ಹ್ಯಾಚ್‌ಬ್ಯಾಕ್‌ನಲ್ಲಿ ಕಂಡುಬರುವ ಸ್ಟಿಕ್ ಮಾದರಿಯ ಡೋರ್ ಲಾಕ್ ಅನ್ನು ಹೆಚ್ಚು ಪ್ರೀಮಿಯಂ ಕಾಣುವ ಯುನಿಟ್ ನೊಂದಿಗೆ ಬದಲಾಯಿಸಲಾಗಿಲ್ಲ. ಆದರೆ ಹೊಸ ಎಲ್-ಆಕಾರದ ಡೋರ್ ಹ್ಯಾಂಡಲ್ ಮತ್ತು ಹ್ಯಾಂಡಲ್‌ನ ಮೇಲಿರುವ ಟ್ರೈಆಂಗಲ್ ಲಾಕ್ ಅನ್ನು ಪಡೆಯುತ್ತದೆ.

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಹೊಸ ಇಂಟಿರಿಯರ್ ಡೋರ್ ಹ್ಯಾಂಡಲ್ ಮತ್ತು ಲಾಕ್ ವಿನ್ಯಾಸದ ಜೊತೆಗೆ ಟಿಯಾಗೊ ಹ್ಯಾಚ್‌ಬ್ಯಾಕ್‌ನ ಟ್ರಿಮ್ ವಿನ್ಯಾಸಕ್ಕಾಗಿ ಕಂಪನಿಯು ನವೀಕರಿಸಿದೆ. ಹಿಂದಿನ ಫ್ಲಾಟ್ ವಿನ್ಯಾಸವನ್ನು ಬದಲಿಸುವ ಮೂಲಕ ಇದು ಎತ್ತರದ ಮತ್ತು ಎಂಗಲ್ಡ್ ಪವರ್-ವಿಂಡೋ ಸ್ವಿಚ್ ಕನ್ಸೋಲ್ ಅನ್ನು ಪಡೆಯುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಇಂಟಿರಿಯರ್ ಡೋರ್ ಹ್ಯಾಂಡಲ್ ಮತ್ತು ಪವರ್-ವಿಂಡೋ ಸ್ವಿಚ್‌ಗಳು ವಾಹನದಲ್ಲಿ ಹೆಚ್ಚು ಬಳಕೆಯಾಗುವ ಫೀಚರ್ ಗಳಾಗಿವೆ. ಹ್ಯಾಚ್‌ಬ್ಯಾಕ್‌ನ ಒಳಾಂಗಣಕ್ಕೆ ಹೊಸ ನವೀಕರಣಗಳ ನಂತರ ಕ್ಯಾಬಿನ್‌ನ ಆಕರ್ಷಕವಾಗಿದೆ,

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಡೋರ್ ನಲ್ಲಿ ಮಾಡಿದ ನವೀಕರಣಗಳ ಹೊರತಾಗಿ, ಟಿಯಾಗೊ ಹ್ಯಾಚ್‌ಬ್ಯಾಕ್‌ನಲ್ಲಿನ ಉಳಿದ ಫೀಚರ್ ಬದಲಾಗದೆ ಉಳಿದಿವೆ. ಟಿಯಾಗೋ ಕಾರು ಎರಡು ಆಟೋಮ್ಯಾಟಿಕ್ ರೂಪಾಂತರಗಳನ್ನು ಒಳಗೊಂಡಂತೆ ಆರು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಇನ್ನು ಕಾರಿನ ಇಂಟಿರಿಯರ್‍‍ನಲ್ಲಿ ಫ್ಯಾಬ್ರಿಕ್ ಸೀಟ್‍‍ಗಳನ್ನು ಒಳಗೊಂಡಿದೆ. ಇನ್ನು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍‍‍ಪ್ಲೇ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹರ್ಮನ್ ಆಡಿಯೋ, ಕೈಮೆಂಟ್ ಕಂಟ್ರೋಲ್ ಸಿಸ್ಟಂ, ಡ್ರೈವ್ ಮೋಡ್‍‍ಗಳು ಮತ್ತು ಟಚ್‍‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಟಾಟಾ ಟಿಯಾಗೋ ಪೆಟ್ರೋಲ್ ಆವೃತಿಯಲ್ಲಿ 1.2 ಲೀಟರ್ ಮೂರು ಸಿಲಿಂಡರ್ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿವೆ. ಈ ಎಂಜಿನ್ 86 ಬಿ‍‍ಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಟಾಟಾ ಟಿಯಾಗೋ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಎರಡು ಕಾರುಗಳಲ್ಲಿ ಸ್ಟ್ಯಾಂಡರ್ಡ್ ಸೇಫ್ಟಿ ಕಿಟ್‍‍ನಲ್ಲಿ ಡ್ಯುಯಲ್ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಕಾರ್ನರ್ ಸ್ಟಿಬಿಲಿಟಿ ಕಂಟ್ರೋಲ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳಿವೆ.

ಟಿಯಾಗೋ ಕಾರಿಗಾಗಿ ಹೊಸ ಅಪ್​ಡೇಟ್​ಗಳನ್ನು ಬಿಡುಗಡೆಗೊಳಿಸಿದ ಟಾಟಾ

ಪ್ರಸ್ತುತ ಈ ಟಿಯಾಗೋ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.7 ಲಕ್ಷದಿಂದ ರೂ.6.74 ಲಕ್ಷಗಳಾಗಿದೆ. ಟಿಯಾಗೊ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೊ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ದಟ್ಸನ್ ಗೋ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata Tiago Interior Feature Upgrades Received. Read In Kannada.
Story first published: Tuesday, October 20, 2020, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X