ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಅವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಟಾಟಾ ಟಿಯಾಗೋ ಫೇಸ್‍‍ಲಿಫ್ಟ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.6 ಲಕ್ಷಗಳಾದರೆ, ಟಿಗೋರ್ ಫೇಸ್‍ಲಿಫ್ಟ್ ಕಾರಿನ ಬೆಲೆ ರೂ.5.75 ಲಕ್ಷಗಳಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಟಾಟಾ ಟಿಯಾಗೋ ಫೇಸ್‍‍ಲಿಫ್ಟ್ ಕಾರಿನ ಬೆಲೆ ಹಿಂದಿನ ಮಾದರಿಗಿಂತ ರೂ.20 ಸಾವಿರ ಹೆಚ್ಚಾಗಿದೆ. ಇನ್ನೂ ಟಾಟಾ ಟಿಗೋರ್ ಫೇಸ್‍‍ಲಿಫ್ಟ್ ಕಾರಿನ ಬೆಲೆ ಹಿಂದಿನ ಮಾದರಿಗಿಂತ ರೂ.10 ಸಾವಿರದಷ್ಟು ಹೆಚ್ಚಾಗಿದೆ. ಈ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಈ ಕಾರುಗಳ ಮುಂಭಾಗದಲ್ಲಿರುವ ಸ್ಲಿಮ್ಮರ್ ಹೆಡ್‍‍ಲ್ಯಾಂಪ್‍‍ಗಳು ಮತ್ತು ಫ್ರಂಟ್ ಗ್ರಿಲ್ ಸೇರಿವೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಇವುಗಳನ್ನು ಕ್ರೋಮ್‍ನಲ್ಲಿ ಟಾಟಾ ಅವರ ಸಿಗ್ನೇಚರ್ ಹ್ಯುಮಾನಿಟಿ ಲೈನ್ ಮೂಲಕ ಅಂಡರ್‍‍ಲೈನ್ ಮಾಡಲಾಗಿದೆ. ಈ ಎರಡೂ ಕಾರುಗಳಲ್ಲಿ ಮುಂಭಾಗದಲ್ಲಿ ಹೊಸ ಬಂಪರ್ ಅನ್ನು ಅಳವಡಿಸಲಾಗಿದೆ. ಇನ್ನೂ ನವೀಕರಿಸಿದ ಏರ್‍‍ಡ್ಯಾಮ್ ಮತ್ತು ಫಾಂಗ್ ಲ್ಯಾಂಪ್ ಗಳನ್ನು ನೀಡಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳ ಮುಂಭಾಗಲ್ಲಿ ಸಂಚರಿಸುವ ಪಾದಚಾರಿಗಳ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ರೈಸಡ್ ಬಾನೆಟ್ ಅನ್ನು ನೀಡಲಾಗಿದೆ. ಈ ಎರಡು ಕಾರುಗಳ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಟೇಲ್‍‍ಲೈಟ್‍‍ಗಳಿವೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಇಂಟಿರಿಯರ್‍‍ನಲ್ಲಿ ಫ್ಯಾಬ್ರಿಕ್ ಸೀಟ್‍‍ಗಳನ್ನು ಒಳಗೊಂಡಿದೆ. ಕಾಸ್ಮೆಟಿಕ್ ನವೀಕರಣಗಳನ್ನು ಬದಿಗಿಟ್ಟು ನೋಡಿದರೆ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳ ಪೆಟ್ರೋಲ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಈ ಎರಡು ಕಾರುಗಳಲ್ಲಿ 1.2 ಲೀಟರ್ ಮೂರು ಸಿಲಿಂಡರ್ ಬಿಎಸ್-6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿವೆ. ಈ ಎಂಜಿನ್ 86 ಬಿ‍‍ಹೆಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳಲ್ಲಿದ್ದ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಎರಡು ಕಾರುಗಳಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍‍‍ಪ್ಲೇ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಇದರೊಂದಿಗೆ ಹರ್ಮನ್ ಆಡಿಯೋ, ಕೈಮೆಂಟ್ ಕಂಟ್ರೋಲ್ ಸಿಸ್ಟಂ, ಡ್ರೈವ್ ಮೋಡ್‍‍ಗಳು ಮತ್ತು ಟಚ್‍‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಸ್ಟಂ ಅನ್ನು ಹೊಂದಿದೆ. ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

2020ರ ಟಾಟಾ ಟಿಯಾಗೋ ಕಾರಿಗೆ ಗ್ಲೋಬಲ್ ಎನ್‍‍ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ನಾಲ್ಕು ಸ್ಟಾರ್‍ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟ್ ನಲ್ಲಿ ಅಡಾಲ್ಟ್ ಅಕ್ವಿಪ್ಯಾಟ್ ಪ್ರೋಡಕ್ಷನ್ ನಲ್ಲಿ 12.52/17 ಪಾಯಿಂಟ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಚೈಲ್ಡ್ ಅಕ್ವಿಪ್ಯಾಟ್ ಪ್ರೊಟಕ್ಷನ್‍‍ನಲ್ಲಿ 34.15 ಪಾಯಿಂಟ್ ಪಡೆದು ಒಟ್ಟಾಗಿ 19 ಅಂಕವನ್ನು ಪಡೆದುಕೊಂಡಿದೆ. ಈ ಎರಡೂ ಕಾರುಗಳಿಲ್ಲಿಯೂ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಎರಡು ಕಾರುಗಳಲ್ಲಿ ಸ್ಟ್ಯಾಂಡರ್ಡ್ ಸೇಫ್ಟಿ ಕಿಟ್‍‍ನಲ್ಲಿ ಡ್ಯುಯಲ್ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಕಾರ್ನರ್ ಸ್ಟಿಬಿಲಿಟಿ ಕಂಟ್ರೋಲ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳಿವೆ.

ಬಿಡುಗಡೆಗೊಂಡ ಬಹುನಿರೀಕ್ಷಿತ ಟಿಯಾಗೋ ಮತ್ತು ಟಿಗೋರ್ ಫೇಸ್‍‍ಲಿಫ್ಟ್ ಕಾರುಗಳು

ಟಿಯಾಗೊ ಫೇಸ್‍ಲಿಫ್ಟ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೊ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ದಟ್ಸನ್ ಗೋ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇನ್ನೂ ಟಿಗೋರ್ ಫೇಸ್‍‍ಲಿಫ್ಟ್ ಕಾರು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಒರಾ, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಝ್ ಮತ್ತು ಪೋರ್ಡ್ ಆಸ್ಪೈರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, January 22, 2020, 17:55 [IST]
English summary
Tata Tiago, Tigor facelift launched at Rs 4.6 lakh and Rs 5.75 lakh. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+