ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಟಾಟಾ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಹೊಸ ಕಾರುಗಳ ಸುರಕ್ಷತೆಯಲ್ಲಿ ಗ್ರಾಹಕರ ಗಮನಸೆಳೆಯುತ್ತಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸುವ ಉದ್ದೇಶದಿಂದ ಕಾರು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದಕೊಳ್ಳುತ್ತಿರುವುದು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ನೆಕ್ಸಾನ್, ಹ್ಯಾರಿಯರ್, ಆಲ್‌ಟ್ರೊಜ್ ಕಾರುಗಳು ಈಗಾಗಲೇ ಗರಿಷ್ಠ ರೇಟಿಂಗ್‌ನೊಂದಿಗೆ ಪ್ರಯಾಣಿಕ ಸುರಕ್ಷತೆಯಲ್ಲಿ ಗಮನಸೆಳೆಯುತ್ತಿದ್ದು, ಇದೀಗ ಟಿಗೋರ್, ಟಿಯಾಗೋ ಕೂಡಾ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಅಡಲ್ಟ್ ಸೆಫ್ಟಿ ವಿಭಾಗದಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಲ್ಲಿ ಚೈಲ್ಡ್ ಸೆಫ್ಟಿ ವಿಭಾಗದಲ್ಲಿ 3 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದ್ದು, ಅಪಘಾತಗಳ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದ ಸುರಕ್ಷತೆ ನೀಡಲಿದೆ ಎನ್ನಬಹುದು.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಪ್ರಯಾಣಿಕರ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಕನಿಷ್ಠ 3 ಸ್ಟಾರ್ ರೇಟಿಂಗ್ ಅವಶ್ಯಕತೆಯಿದ್ದು, 3ಕ್ಕಿಂತ ಕಡಿಮೆ ರೇಟಿಂಗ್ ಪಡೆದುಕೊಂಡಲ್ಲಿ ಅಂತಹ ಕಾರುಗಳನ್ನು ಕಳಪೆ ಎಂದು ನಿರ್ಧರಿಸಲಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಸದ್ಯ ಮಾರುಕಟ್ಟೆಯಲ್ಲಿ ಹಲವು ಕಾರು ಮಾದರಿಗಳು 3 ಸ್ಟಾರ್‌ಗಿಂತಲೂ ಕಡಿಮೆ ರೇಟಿಂಗ್‌ನೊಂದಿಗೆ ಹಾಟ್ ಚೀಪ್ಸ್‌ನಂತೆ ಮಾರಾಟವಾಗುತ್ತಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಯಾವುದೇ ಭದ್ರತೆ ಇಲ್ಲದ ಪರಿಸ್ಥಿತಿಯಿದೆ.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಇದಕ್ಕಾಗಿ ಕಾರು ಗುಣಮಟ್ಟ ಮತ್ತು ಪ್ರಯಾಣಿಕ ಸುರಕ್ಷತೆಯನ್ನು ಸುಧಾರಿಸುವ ಸಂಬಂಧ #SAFERCARSFORINDIA ಅಭಿಯಾನ ಶುರು ಮಾಡಲಾಗಿದ್ದು, ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗೆ ಇದು ಸಾಕಷ್ಟು ಸಹಕಾರಿಯಾಗುತ್ತಿದೆ. ಜೊತೆಗೆ ಟಾಟಾ ಕಾರುಗಳ ಉತ್ಪಾದನೆಯಲ್ಲಿ ಹೊಸ ಅಭಿಯಾನವು ಸಾಕಷ್ಟು ಸುಧಾರಣೆ ತಂದಿರುವುದಲ್ಲದೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುವ ಮೂಲಕ ಬೇಡಿಕೆಯು ಹೆಚ್ಚುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಫ್ರಂಟ್ ಸೀಟ್ ಬೆಲ್ಟ್ ರಿಮೆಂಡರ್, ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಸುರಕ್ಷಾ ಕ್ರಮಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇದೀಗ ಬಿಡುಗಡೆಯಾಗಲಿರುವ ಫೇಸ್‌ಲಿಫ್ಟ್ ಮಾದರಿಯು ಮತ್ತಷ್ಟು ಹೊಸ ಸೆಫ್ಟಿ ಫೀಚರ್ಸ್‌ನೊಂದಿಗೆ ಖರೀದಿಗೆ ಲಭ್ಯವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಹೊಸ ಕಾರುಗಳ ಎಂಜಿನ್‌ನಲ್ಲಿ ಮಾತ್ರವಲ್ಲದೇ ಪ್ರಯಾಣಿಕರ ಸುರಕ್ಷತೆಯಲ್ಲೂ ಹಲವಾರು ಹೊಸ ಬದಲಾವಣೆಗಳಾಗಿದ್ದು, ಏಪ್ರಿಲ್ 1ರಿಂದ ಮಾರಾಟವಾಗಲಿರುವ ಪ್ರತಿಯೊಂದು ಕಾರು ಮಾದರಿಯು ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲೇಬೇಕಿದೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಒಂದು ವೇಳೆ 3 ಅಂಕಗಳಿಂತ ಕಡಿಮೆ ರೇಟಿಂಗ್ ಪಡೆದಲ್ಲಿ ಮಾರಾಟಕ್ಕೆ ಬ್ರೇಕ್ ಬೀಳಲಿದ್ದು, ಆರಂಭಿಕ ಆವೃತ್ತಿಯಲ್ಲೂ ನಿರ್ದಿಷ್ಟ ಪ್ರಮಾಣದ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಲೇಬೇಕಾಗುತ್ತದೆ.

ಕ್ರ್ಯಾಶ್ ಟೆಸ್ಟಿಂಗ್: ಉತ್ತಮ ಪ್ರದರ್ಶನ ತೋರಿದ ಟಾಟಾ ಟಿಗೋರ್ ಮತ್ತು ಟಿಯಾಗೋ

ಈ ನಿಟ್ಟಿನಲ್ಲಿ ಟಾಟಾ ಸಂಸ್ಥೆಯು ಎಂಟ್ರಿ ಲೆವಲ್ ಕಾರುಗಳಲ್ಲೂ ಸಹ 5 ಸ್ಟಾರ್ ರೇಟಿಂಗ್ ಮೂಲಕ ಹೊಸ ಭರವಸೆ ಮೂಡಿಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಲ್ಲಿ ಪ್ರಾಣಹಾನಿಯನ್ನು ಪ್ರಮಾಣವನ್ನು ತಡೆಗಟ್ಟಲು ಇದು ಸಾಕಷ್ಟು ಸಹಕಾರಿಯಾಗಿದೆ.

More from DriveSpark

Article Published On: Thursday, January 23, 2020, 8:45 [IST]
English summary
Tata Tiago Tigor gets 4 star in NCAP crash test, Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+