ಗ್ರಾಹಕರ ಬೇಡಿಕೆಯೆಂತೆ ಟಿಯಾಗೋ ಎಕ್ಸ್‌ಟಿ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್
ಟಾಟಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಪ್ರತಿ 2ರಿಂದ 3 ತಿಂಗಳಿಗೆ ಒಂದು ಬಾರಿ ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ತಾಂತ್ರಿಕ ಅಂಶಗಳ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಇದೀಗ ಟಿಯಾಗೋ ಮಧ್ಯಮ ಕ್ರಮಾಂಕದ ಎಕ್ಸ್‌ಟಿ ವೆರಿಯೆಂಟ್‌ನಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆಗೊಳಿಸಿದೆ.

ಟಿಯಾಗೋ ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ ನೀಡಲಾಗುತ್ತಿದ್ದ ಸ್ಟೀರಿಂಗ್ ಮೌಂಟೆಡ್ ಸೌಲಭ್ಯವನ್ನು ಇದೀಗ ಮಧ್ಯಮ ಕ್ರಮಾಂಕದ ಎಕ್ಸ್‌ಟಿ ವೆರಿಯೆಂಟ್‌ನಲ್ಲೂ ಜೋಡಣೆ ಮಾಡಿರುವ ಟಾಟಾ ಕಂಪನಿಯು ಚಾಲಕನಿಗೆ ಮತ್ತಷ್ಟು ಅನುಕೂಲಕರ ಮಾಹಿತಿಯನ್ನು ಅತಿ ಸರಳವಾಗಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಿದ್ದು, ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಬಹುತೇಕ ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಈ ಫೀಚರ್ಸ್ ಸಾಮಾನ್ಯವಾಗಿದೆ.

ಇದಕ್ಕಾಗಿ ಎಕ್ಸ್‌ಟಿ ವೆರಿಯೆಂಟ್‌ನಲ್ಲಿ ಸ್ಟ್ರೀರಿಂಗ್ ಮೌಂಟೆಡ್ ಸೌಲಭ್ಯ ಸೇರಿ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದ್ದು, ಸ್ಟ್ರೀರಿಂಗ್ ಮೌಂಟೆಡ್ ಸೌಲಭ್ಯ ಪರಿಚಯಿಸಿ ಹಿನ್ನಲೆಯಲ್ಲಿ ರಿಯರ್ ಸೀಟ್ ಮತ್ತು ಬೂಟ್ ಸ್ಪೆಸ್ ಸ್ಥಾನವನ್ನು ಮುಚ್ಚಲು ನೆರವಾಗುವ ಪಾರ್ಸೆಲ್ ಸೆಲ್ಪ್ ಟ್ರೈ ಸೌಲಭ್ಯವನ್ನು ತೆಗೆದುಹಾಕಿದೆ.

ಹೊಸ ಸೌಲಭ್ಯಕ್ಕಾಗಿ ಯಾವುದೇ ಹೆಚ್ಚುವರಿ ದರ ನಿಗದಿ ಮಾಡದ ಟಾಟಾ ಕಂಪನಿಯು ಹೊಸ ಕಾರನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.70 ಲಕ್ಷದಿಂದ ರೂ. 6.74 ಲಕ್ಷ ಬೆಲೆ ಅಂತರದಲ್ಲಿ ಮಾರಾಟ ಮಾಡುತ್ತಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನ ಪರಿಚಯಿಸುವ ಸುಳಿವು ನೀಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ಮೊದಲ ಬಾರಿಗೆ ಟಿಯಾಗೋ ಕಾರು ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ. ರೋಡ್ ಟೆಸ್ಟಿಂಗ್‌ಗೂ ಮುನ್ನ ನಮ್ಮ ಬೆಂಗಳೂರಿನ ಬಾಷ್ ಟೆಕ್ನಿಕಲ್ ಸೆಂಟರ್‌ನಲ್ಲಿ ಕಾರಿನ ಪ್ರಮುಖ ತಾಂತ್ರಿಕ ಅಂಶಗಳ ಬದಲಾವಣೆ ಪಡೆದುಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಮಾರುಕಟ್ಟೆಗೆ ಪ್ರವೇಶಿಸಲಿದೆ.

ಟಾಟಾ ಕಂಪನಿಯು ಸದ್ಯ ಗ್ರಾವಿಟಾಸ್, ಹೆಚ್‌ಬಿಎಕ್ಸ್ ಹ್ಯಾಚ್‌ಬ್ಯಾಕ್, ಹ್ಯಾರಿಯರ್ ಪೆಟ್ರೋಲ್, ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ತದನಂತರವಷ್ಟೇ ಟಿಯಾಗೋ ಟರ್ಬೋ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಮಾಹಿತಿಗಳ ಪ್ರಕಾರ, ಹೊಸ ಟಿಯಾಗೋ ಟರ್ಬೋ ಪೆಟ್ರೋಲ್ ಮಾದರಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು 1.0-ಲೀಟರ್ ಟರ್ಬೋ ಎಂಜಿನ್ ಮಾದರಿಯೊಂದಿಗೆ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಪವರ್‌ಫುಲ್ ಎಂಜಿನ್ ಮಾದರಿಯಾಗಿರಲಿದೆ.

ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಬಾಷ್ ಪ್ರೇರಣೆಯ ಮ್ಯಾನುವಲ್ ಗೇರ್‌ಬ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ಈ ಹಿಂದಿನ ಟಿಯಾಗೋ ಮತ್ತು ಟಿಗೋರ್ ಜೆಟಿಪಿ ಮಾದರಿಗಳನ್ನು ಸ್ಥಗಿತಗೊಳಿಸಿದ ನಂತರ ಟರ್ಬೋ ಮಾದರಿಯನ್ನು ಸಾಮಾನ್ಯ ಮಾದರಿಯಲ್ಲೂ ಅಳವಡಿಸಲಾಗುತ್ತಿದೆ.


Click it and Unblock the Notifications