ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನ ಪರಿಚಯಿಸುವ ಸುಳಿವು ನೀಡಿದೆ.

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಹೌದು, ಟಾಟಾ ಮೋಟಾರ್ಸ್ ಕಂಪನಿಯು ಮೊದಲ ಬಾರಿಗೆ ಟಿಯಾಗೋ ಕಾರು ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನು ಪರಿಚಯಿಸುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ. ರೋಡ್ ಟೆಸ್ಟಿಂಗ್‌ಗೂ ಮುನ್ನ ನಮ್ಮ ಬೆಂಗಳೂರಿನ ಬಾಷ್ ಟೆಕ್ನಿಕಲ್ ಸೆಂಟರ್‌ನಲ್ಲಿ ಕಾರಿನ ಪ್ರಮುಖ ತಾಂತ್ರಿಕ ಅಂಶಗಳ ಬದಲಾವಣೆ ಪಡೆದುಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಮಾರಾಟ ಪ್ರವೇಶಿಸಲಿದೆ.

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಟಾಟಾ ಕಂಪನಿಯು ಸದ್ಯ ಗ್ರಾವಿಟಾಸ್, ಹೆಚ್‌ಬಿಎಕ್ಸ್ ಹ್ಯಾಚ್‌ಬ್ಯಾಕ್, ಹ್ಯಾರಿಯರ್ ಪೆಟ್ರೋಲ್, ಆಲ್‌ಟ್ರೊಜ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದ್ದು, ತದನಂತರವಷ್ಟೇ ಟಿಯಾಗೋ ಟರ್ಬೋ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಮಾಹಿತಿಗಳ ಪ್ರಕಾರ, ಹೊಸ ಟಿಯಾಗೋ ಟರ್ಬೋ ಪೆಟ್ರೋಲ್ ಮಾದರಿಯು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು 1.0-ಲೀಟರ್ ಟರ್ಬೋ ಎಂಜಿನ್ ಮಾದರಿಯೊಂದಿಗೆ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಪವರ್‌ಫುಲ್ ಎಂಜಿನ್ ಮಾದರಿಯಾಗಿರಲಿದೆ.

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಬಾಷ್ ಪ್ರೇರಣೆಯ ಮ್ಯಾನುವಲ್ ಗೇರ್‌ಬ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ಈ ಹಿಂದಿನ ಟಿಯಾಗೋ ಮತ್ತು ಟಿಗೋರ್ ಜೆಟಿಪಿ ಮಾದರಿಗಳನ್ನು ಸ್ಥಗಿತಗೊಳಿಸಿದ ನಂತರ ಟರ್ಬೋ ಮಾದರಿಯನ್ನು ಸಾಮಾನ್ಯ ಮಾದರಿಯಲ್ಲೂ ಅಳವಡಿಸಲಾಗುತ್ತಿದೆ.

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದ ಜೆಟಿಪಿ ಕಾರು ಮಾದರಿಗಳನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿದ್ದು, ಇದೀಗ ಮೊದಲ ಹಂತವಾಗಿ ಟಿಯಾಗೋ ಮಾದರಿಯಲ್ಲಿ 1.0-ಲೀಟರ್ ತ್ರಿ ಸಿಲಿಂಡರ್ ಮಾದರಿಯ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಜೋಡಿಸಲಾಗುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಸದ್ಯ ಟಿಯಾಗೋ ಸಾಮಾನ್ಯ ಕಾರು ಮಾದರಿಯಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮಾದರಿಯನ್ನು ಮಾರಾಟ ಮಾಡಲಾಗುತ್ತಿದ್ದು, ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಮಾದರಿಗಿಂತಲೂ 1.0-ಲೀಟರ್ ಪೆಟ್ರೋಲ್ ಮಾದರಿಯು ಹೆಚ್ಚು ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 85-ಬಿಎಚ್‌ಪಿ ಮತ್ತು 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಸಾಮಾನ್ಯ ಮಾದರಿಗಿಂತಲೂ ಹೆಚ್ಚು ಪರ್ಫಾಮೆನ್ಸ್‌ನೊಂದಿಗೆ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಟಿಯಾಗೋ ಹ್ಯಾಚ್‌ಬ್ಯಾಕ್‌ನಲ್ಲೂ ಟರ್ಬೋ ಪೆಟ್ರೋಲ್ ಪರಿಚಯಿಸಲಿದೆ ಟಾಟಾ

ಇನ್ನು ಟಿಯಾಗೋ ಕಾರು ಮಾದರಿಯು ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.69 ಲಕ್ಷದಿಂದ ರೂ. 6.73 ಲಕ್ಷ ಬೆಲೆ ಹೊಂದಿದೆ. ಬಿಡುಗಡೆಯಾಗಲಿರುವ ಟರ್ಬೋ ಪೆಟ್ರೋಲ್ ಮಾದರಿಯು ಸಾಮಾನ್ಯ ಕಾರಿಗಿಂತ ರೂ. 1 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದು, ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರಲಿದೆ.

Most Read Articles

Kannada
English summary
Tata Tiago Turbo-Petrol Variant Spied Testing Completely Camouflaged. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X