ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳ ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಟಾಟಾ ಆಲ್‌ಟ್ರೊಜ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಎಕ್ಸ್‌ಟಿ ಆವೃತ್ತಿಯಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಉನ್ನತೀಕರಿಸಲಾಗಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಎಕ್ಸ್‌ಟಿ ಆವೃತ್ತಿಯು ಆಲ್‌ಟ್ರೊಜ್ ಕಾರಿನ ಮಧ್ಯಂತರ ಕಾರು ಮಾದರಿಯಾಗಿದ್ದು, ಈ ಹಿಂದೆ ಈ ಆವೃತ್ತಿಯಲ್ಲಿ ಮ್ಯಾನುವಲ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವನ್ನು ನೀಡಲಾಗಿತ್ತು. ಆದರೆ ಇದೀಗ ಗ್ರಾಹಕರ ಬೇಡಿಕೆಯೆಂತೆ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವನ್ನು ಆಟೋಮ್ಯಾಟಿಕ್‌ಗೆ ಬದಲಾಯಿಸಲಾಗಿದ್ದು, ಜೊತೆಗೆ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯವನ್ನು ಧ್ವನಿ ಆಜ್ಞೆಯ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಹೊಸ ತಾಂತ್ರಿಕ ಸೌಲಭ್ಯದ ನಂತರವೂ ಕಾರಿನ ಬೆಲೆಯಲ್ಲಿ ಯಾವುದೇ ಬೆಲೆ ಬದಲಾಣೆ ಮಾಡಲಾಗಿಲ್ಲ ಎನ್ನಲಾಗಿದ್ದು, ಎಕ್ಸ್‌ಟಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ರೂ.6.84 ಲಕ್ಷ ಮತ್ತು ಡೀಸೆಲ್ ಮಾದರಿಯು ರೂ.8.44 ಲಕ್ಷ ಬೆಲೆ ಹೊಂದಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಇನ್ನು ಆಲ್‌ಟ್ರೊಜ್ ಕಾರು ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಆಲ್‌ಟ್ರೊಜ್ ಕಾರು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.29 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.9.34 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಜೊತೆ ಹೊಸದಾಗಿ ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌ ಅನ್ನು ಹೊಸದಾಗಿ ಪಡೆದುಕೊಂಡಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಇನ್ನು ಶಾರ್ಕ್ ನೊಸ್ ಡಿಸೈನ್ ಹೊಂದಿರುವ ಆಲ್‌ಟ್ರೊಜ್ ಕಾರು ಸ್ವೆಪ್ಟ್ ಬ್ಯಾಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಸ್ಟ್ರೀಪ್ ಕ್ರೋಮ್, ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಫಾಗ್ ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್ ಜೋಡಿಸಲಾಗಿದ್ದು, 16-ಇಂಚಿನ ಸ್ಟ್ಯಾಂಡರ್ಡ್ ಡ್ಯುಯಲ್ ಟೋನ್ ಲೇಸರ್ ಕಟ್ ಅಲಾಯ್ ವೀಲ್ಹ್, ಸಿ ಪಿಲ್ಲರ್ ಹೊಂದಿಕೊಂಡಿರುವ ಹಿಂಭಾಗದ ಡೋರ್ ಲಾಕ್, ಸ್ಮೊಕ್ಡ್ ಟೈಲ್‌ಲೈಟ್ಸ್, ಬೂಟ್ ಲೀಡ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿವೆ.

MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಎಕ್ಸ್‌ಟಿ ಆವೃತ್ತಿಯನ್ನು ಉನ್ನತೀಕರಿಸಿದ ಟಾಟಾ

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್‌ಟ್ರೊಜ್ ಕಾರಿನಲ್ಲಿ 90 ಡಿಗ್ರಿ ಆ್ಯಂಗಲ್‌ನಲ್ಲಿ ತೆರೆಯಬಹುದಾದ ಬಾಗಿಲುಗಳು ಪ್ರಮುಖ ಆಕರ್ಷಣೆಯಾಗಿದ್ದು, ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್‌, ಸೆಂಟರ್ ಕನ್ಸೋಲ್‌, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

Most Read Articles

Kannada
English summary
Tata Upgrade Altroz XT Variant, No Price Change. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X