ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಬಿಎಂಡಬ್ಲ್ಯೂ ಇಂಡಿಯಾ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಹೊಸ ತಲೆಮಾರಿನ ಎಕ್ಸ್6 ಎಸ್‍ಯುವಿಯ ಅಧಿಕೃತ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯ ಬುಕ್ಕಿಂಗ್ ಅನ್ನು ಕಳೆದ ಜನವರಿ ತಿಂಗಳಲ್ಲಿ ಪ್ರಾರಂಭಿಸಿದ್ದರು.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಮೂರನೇ ತಲೆಮಾರಿನ ಈ ಎಸ್‍ಯುವಿ-ಕೂಪ್ ಭಾರತದಲ್ಲಿ ನಾಳೆ ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಈ ಹೊಸ ಬಿಎಂಡಬ್ಲ್ಯೂ ಎಕ್ಸ್6 ಸ್ಪಾಟ್ ಟೆಸ್ಟ್ ನಡೆಸಿದೆ. ಭಾರತದಲ್ಲಿ ಈ ಹೊಸ ಬಿಎಂಡಬ್ಲ್ಯೂ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಭಾರತದಲ್ಲಿ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿತ್ತು. ಈ ಕಾರಣದಿಂದಾಗಿ ಬಿಎಂಡಬ್ಲ್ಯೂ ಎಸ್‍ಯುವಿಯ ಬಿಡುಗಡೆಯು ವಿಳಂಬವಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಈ ಮೂರನೇ ತಲೆಮಾರಿನ ಬಿಎಂಡಬ್ಲ್ಯೂ ಎಕ್ಸ್6 ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಬಿಡುಗಡೆಗೊಳಿಸಿದ್ದರು. ಭಾರತಕ್ಕೆ ಎಕ್ಸ್6 ಎಸ್‍ಯುವಿಯನ್ನು ಸಿಬಿಯು ಮೂಲಕ ತರಲಾಗುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯು ಎಕ್ಸ್‌ಲೈನ್ ಮತ್ತು ಎಂ ಸ್ಪೋರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಮೂರನೇ ತಲೆಮಾರಿನ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಬಿಎಂಡಬ್ಲ್ಯೂ ಎಕ್ಸ್6 ಬ್ರ್ಯಾಂಡ್ ನ ಡಬಲ್-ಕಿಡ್ನಿ ಗ್ರಿಲ್ ಅನ್ನು ಹೊಂದಿದೆ. ಬಿಎಂಡಬ್ಲ್ಯೂನ ಲೇಸರ್ ಲೈಟ್ ನೊಂದಿಗೆ ಹೊಸ ಅಡಾಪ್ಟಿವ್ ಎಲ್ಇಡಿ ಹೆಡ್ ಲೈಟ್ ಗಳನ್ನು ಹೊಂದಿದೆ. ಈ ಬಿಎಂಡಬ್ಲ್ಯೂ ಎಕ್ಸ್6 ಮರುರೂಪಿಸಿದ ಟೈಲ್ ಲೈಟ್ ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಅನ್ನು ಅಳವಡಿಸಿದ್ದಾರೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದು ಕೂಪ್ ಎಸ್‍ಯುವಿಯು ಅದರೂ ಸಿಲೂಯೆಟ್ ಅನ್ನು ಉಳಿಸಿಕೊಳ್ಳಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯ ಇಂಟಿರಿಯರ್ ನಲ್ಲಿ ವೆರ್ನಾಸ್ಕಾ ಲೆದರ್ ಅಪ್ಹೋಲ್ಸ್ಟರಿಯನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ, ಮಸಾಜ್ ಫಂಕ್ಷನ್‌ನೊಂದಿಗೆ ಪವರ್-ಚಾಲಿತ ಸೀಟುಗಳು, ನಾಲ್ಕು ಮಾದರಿಯ ಕ್ಲೈಮೇಂಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಇದರೊಂದಿಗೆ ಇಂಟಿರಿಯರ್ ನಲ್ಲಿ ವಿಲ್ಕಿನ್ಸ್‌ನ ಪ್ರೀಮಿಯಂ ಆಡಿಯೊ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಮತ್ತು ಬ್ರ್ಯಾಂಡ್ ನ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನವಿರುವ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಹ ಹೊಂದಿದೆ.

MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಿಎಂಡಬ್ಲ್ಯೂ ಎಕ್ಸ್6 ಮಾದರಿಯಲ್ಲಿ ಒಟ್ಟು ನಾಲ್ಕು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯೂ ಎಕ್ಸ್6 ಮಾದರಿಯಲ್ಲಿ ಎಕ್ಸ್‌ಡ್ರೈವ್ 40 ಐ 3.0-ಲೀಟರ್, ಆರು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಬಹುನಿರೀಕ್ಷಿತ ಈ ಐಷಾರಾಮಿ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯು ನಾಳೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಜಿಎಲ್ಇ ಕೂಪೆ ಮತ್ತು ಆಡಿ ಕ್ಯೂ8 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Third Generation BMW X6 Spotted Testing Ahead Of Its Launch In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X