ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಬಿಎಸ್-6 ಪಸಾಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಹಿಂದಿನ ಪಸಾಟ್ ಕಾರನ್ನು ಹೊಸ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾದಾಗ ಸ್ಥಗಿತಗೊಳಿಸಲಾಗಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಇದೀಗ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಪಸಾಟ್ ಕಾರನ್ನು ಬಿಡುಗಡೆಗೊಳಿಸಲು ಫೋಕ್ಸ್‌ವ್ಯಾಗನ್ ಕಂಪನಿಯು ಸಜ್ಜಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಪಸಾಟ್ ಕಾರು ಸ್ಪಾಟ್ ಟೆಸ್ಟ್ ನಡೆಸಿದೆ. ಹೊಸ ಪಸಾಟ್ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಝ್ಹೀಗ್ ವ್ಹೀಲ್ಸ್ ಬಹಿರಂಗಪಡಿಸಿದೆ. ಹೊಸ ಸೆಡಾನ್‍ನಲ್ಲಿ ಫ್ರಂಟ್ ಬಂಪರ್, ಸ್ಲ್ಯಾಟ್‍‍ಗಳನ್ನು ಹೊಂದಿರುವ ಗ್ರಿಲ್ ಮತ್ತು ಐಕ್ಯೂ ಲೈಟ್ ಎಲ್‍ಇ‍ಡಿ ಮ್ಯಾಟ್ರಿಕ್ಸ್ ಹೆಡ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಪಸಾಟ್ ಕಾರು ಹೊಸ ಟೇಲ್ ಲ್ಯಾಂಪ್ ಕ್ಲಸ್ಟರ್ ವಿನ್ಯಾಸವನ್ನು ಕೂಡ ಹೊಂದಿದೆ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಪಸಾಟ್ ಲೋಗೊವನ್ನು ಅಳವಡಿಸಲಾಗಿದೆ. ಮುಂಬರುವ ಫೋಕ್ಸ್‌ವ್ಯಾಗನ್ ಸೆಡಾನ್ 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಸಹ ಹೊಂದಿದೆ. ಕಂಪನಿಯು 18 ಇಂಚಿನ ಮತ್ತು 19 ಇಂಚಿನ ವ್ಹೀಲ್‍‍ಗಳ ಆಯ್ಕೆಯನ್ನು ನೀಡಬಹುದು.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಸ್ಪೈ ಚಿತ್ರದಲ್ಲಿ ಕಾರಿನ ಇಂಟಿರಿಯರ್‍‍ನಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ 2020ರ ಪಸಾಟ್ ಬಿ‍ಎಸ್-6 ಮಾದರಿಯು ಅತ್ಯಾಧುನಿಕ ಫೀಚರ್ಸ್‍‍ಗನ್ನು ಹೊಂದಿರಲಿದೆ ಎಂದು ನಿರೀಕ್ಷಿಸಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಹೊಸ ಕಾರಿನ ಇಂಟಿರಿಯರ್‍‍ನಲ್ಲಿ ಇತ್ತೀಚಿನ ಎಂಐಬಿ3 ಆಧಾರಿತ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಇಂಟಿಗ್ರೇಟೆಡ್ ಇಂಟರ್‍‍ನೆಟ್ ಕನೆಕ್ಟಿವಿಟಿ ಎಲ್ಲಾ ಹೊಸ ಡಿಜಿಟಲ್ ಕಾಕ್‍‍ಪಿಟ್ ಮತ್ತು ಕೆಪ್ಯಾಸಿಟಿವ್ ಸ್ಟೀಟಿಯರಿಂಗ್ ಅನ್ನು ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಮುಂಬರುವ 2020ರ ಪಸಾಟ್ ಕಾರ್ ಅನ್ನು ಆಯ್ದ ಸ್ಯಾಮ್‍‍ಸಂಗ್ ಸ್ಮಾರ್ಟ್ ಫೋನ್ ಗಳನ್ನು ಬಳಿಸಿ ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ. ಇದು ಸ್ಯಾಮ್‍‍ಸಾಂಗ್‍‍ನ ಕೆಲವು ಆಯ್ದ ಮೊಬೈಲ್ ಮಾದರಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಹೊಸ ಫೋಕ್ಸ್‌ವ್ಯಾಗನ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಫಾರ್ವರ್ಡ್ ಡಿಕ್ಕಿ ವಾರ್ನಿಂಗ್ ಸಿಸ್ಟಂ, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಮಾನಿಟರಿಂಗ್ ಸಿಸ್ಟಂ, ರೇರ್ ಟ್ರಾಫಿಕ್ ಅಲರ್ಟ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

MOST READ: ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಹಿಂದಿನ ಬಿಎಸ್-4 ಫೋಕ್ಸ್‌ವ್ಯಾಗನ್ ಪಸಾಟ್ ಕಾರಿನಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿತ್ತು. ಈ ಎಂಜಿನ್ 174 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಫೋಕ್ಸ್‌ವ್ಯಾಗನ್ ಪಸಾಟ್

ಹಿಂದಿನ ಬಿಎಸ್-4 ಫೋಕ್ಸ್ ವ್ಯಾಗನ್ ಪಸಾಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29.99 ಲಕ್ಷಗಳಾಗಿದೆ. ಹೊಸ ಬಿಎಸ್-6 ಮಾದರಿಯ ಬೆಲೆಯು ಹಿಂದಿನ ಬಿಎಸ್-4 ಪಸಾಟ್ ಮಾದರಿಗಿಂತ ಹೆಚ್ಚಾಗಿರುತ್ತದೆ.

Most Read Articles

Kannada
English summary
Volkswagen Passat BS6 Spotted Testing Ahead Of Launch. Read In Kannada.
Story first published: Tuesday, June 9, 2020, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X