ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ.

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

3-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲವೆಂದು ಕಂಪನಿಯು ಸ್ಪಷ್ಟ ಪಡಿಸಿದೆ. ಅದನ್ನು ಸಿಬಿಯು ಮೂಲಕ ಭಾರತಕ್ಕೆ ತರುವುದಿಲ್ಲ ಯಾವುದೇ ಅರ್ಥವಿಲ್ಲ. ನಾವು ಸ್ಥಳೀಯವಾಗಿ ತಯಾರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದು ಮಾರುತಿ ಸುಜುಕಿ ಕಂಪನಿಯು ಹೇಳಿದೆ. ಭಾರತದಲ್ಲಿ ಸ್ಥಳೀಯವಾಗಿ ಜಿಮ್ನಿ ಎಸ್‍ಯುವಿಯನ್ನು ತಯಾರಿಸಲಾಗುತ್ತದೆ ಎಂದು ಕಂಪನಿಯು ಸುಳಿವು ನೀಡಿದೆ.

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಕೆಲವು ವರದಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಭಾರತದ ಆಫ್-ರೋಡ್ ಪ್ರಿಯರು ಬಹುಕಾತರದಿಂದ ಸುಜುಕಿ ಜಿಮ್ನಿ ಎಸ್‍ಯುವಿಯನ್ನು ಕಾಯುತ್ತಿದ್ದಾರೆ.

MOST READ: ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಭಾರತದಲ್ಲಿ ಬಿಡುಗಡೆಗೊಳಿಸುವುದಾದರೆ ಮಾರುತಿ ಸುಜುಕಿ ಕಂಪನಿಯು ಗುರಗಾಂವ್ ಮೂಲದ ಘಟಕದಲ್ಲಿ ಜಿಮ್ನಿ ಎಸ್‍‍ಯುವಿಯನ್ನು ಉತ್ಪಾದಿಸಲಾಗುತ್ತದೆ. ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಬ್ರೆಝಾ, ಎಸ್-ಕ್ರಾಸ್, ಇಕೋ ಮತ್ತು ಕ್ಯಾರಿಯಂತಹ ಇತರ ಎಸ್‍‍ಯುವಿಗಳ ಜೊತೆಗೆ ಜಿಮ್ನಿ ಎಸ್‍‍ಯುವಿಯನ್ನು ಕೂಡ ತಯಾರಿಸಬಹುದು.

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಈ ಜಿಮ್ನಿ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿ ನಿರ್ಧರಿಸಿರಲಿಲ್ಲ. ಆದರೆ ಆಟೋ ಎಕ್ಸ್ ಪೋದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆನ್ನು ಲಭಿಸಿರುವುದರಿಂದ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಮೇಡ್ ಇನ್ ಇಂಡಿಯಾ ಮಾದರಿಯಾಗಿ ಬಿಡುಗಡೆಯಾಗಲಿದೆ ಮಾರುತಿ ಜಿಮ್ನಿ

ಶೀಘ್ರದಲ್ಲೇ ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು 5-ಡೋರಿನ ಜಿಮ್ನಿ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಜನಪ್ರಿಯ ಮಾರುತಿ ಸುಜುಕಿ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗೆ ನೇರವಾಗಿ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Monday, June 8, 2020, 13:02 [IST]
English summary
Maruti Jimny 5 door SUV could be launched as Made in India product. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+