ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತಮ್ಮ ಹೊಸ ಸಿಎಲ್‌ಎಸ್ ಕಾರನ್ನು ಅಮೆರಿಕಾದಲ್ಲಿ ಅನಾವರಣಗೊಳಿಸಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಸಿಎಲ್‌ಎಸ್ ಕಾರನ್ನು ಹಲವು ನವೀಕರಣಗಳನ್ನು ನಡೆಸಿ ಹೊಸ ವಿನ್ಯಾಸದಲ್ಲಿ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಅದರಿಂದ ಹಿಂದಿನ ಮಾದರಿ ಮತ್ತು ಹೊಸ ಸಿಎಲ್‌ಎಸ್ ಕಾರುಗಳು ವಿಭಿನ್ನವಾಗಿದೆ. ಅದನ್ನು ಒಂದೇ ನೋಟದಲ್ಲಿ ಸಿಎಲ್‌ಎಸ್ ಕಾರು ಎಂದು ತಿಳಿಯಲು ಸ್ವಲ್ಫ ಕಷ್ಟವಾಗುತ್ತೆ. ಹೊಸ ಬೆಂಝ್ ಸಿಎಲ್‌ಎಸ್ ಮೊಜಾವೆ ಸಿಲ್ವರ್ ಮತ್ತು ಸಿರಸ್ ಸಿಲ್ವರ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಹೊಸ ಕಾರಿನಲ್ಲಿ ಬ್ಲ್ಯಾಕ್ ಆಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರಿನ ವಿಂಗ್ ಮಿರರ್ ಗಳು ಸಹ ಹೊಸ ಗ್ಲೊಶ್ ಬ್ಲ್ಯಾಕ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಇದರಿಂದ ಇದರ ಬಾಡಿಯು ಇನ್ನಷ್ಟು ಸ್ಫೋರ್ಟಿಯರ್ ಆಗಿ ಕಾಣುತ್ತದೆ. ಇದರಲ್ಲಿ ಡೈಮಂಡ್-ಮೆಶ್ ಗ್ರಿಲ್ ಮತ್ತು ದೊಡ್ಡ ಡಿಸ್ ಪ್ಲೇಯನ್ನು ಹೊಂದಿದೆ.

MOST READ: ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ ಬಿಡುಗಡೆ ದಿನಾಂಕ ಬಹಿರಂಗ

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಇನ್ನು ಕಾರಿನ ಒಳಭಾಗದಲ್ಲಿಯು ಪ್ರಮುಖವಾದ ನವೀಕರಣಗಳನ್ನು ಮಾಡಲಾಗಿದೆ. ಕಾಮೆಂಡ್ ಸಿಸ್ಟಂ ಅನ್ನು ಬದಲಾಯಿಸಿ ಹೊಸ ಎಂಬಿಯುಎಕ್ಸ್ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಹಿಂದಿನ ಮಾದರಿಯಲ್ಲಿ ಇದ್ದ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರುವ 12.3-ಇಂಚಿನ ದೊಡ್ಡ ಡಿಸ್ ಪ್ಲೇ ಹಾಗೆ ಮುಂದುವರೆಸಿದ್ದಾರೆ. ಹೊಸ ಕ್ರಾಸ್-ಟ್ರಾಫಿಕ್ ಫಂಕ್ಷನ್, ಇಂಟೆಲಿಜೆಂಟ್ ಡ್ರೈವ್ ಆಕ್ಟಿವ್ ಸ್ಪೀಡ್ ಲಿಮಿಟ್ ಅಸಿಸ್ಟ್ ಅನ್ನು ಒಳಗೊಂಡಿರುತ್ತವೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಇದು ವೇಗದ ಮಿತಿಯಲ್ಲಿನ ಬದಲಾವಣೆಗಳು ಮತ್ತು ವೇಗದ ತಕ್ಕಂತೆ ಕೆಲವು ಅಪಾಯಗಳ ಬಗ್ಗೆ ಮುನ್ಸೂಚನೆ ನೀಡಲು ಟ್ರಾಫಿಕ್ ಸೈನ್ ಅಸಿಸ್ಟ್‌ನಿಂದ ನಕ್ಷೆ ಡೇಟಾ ಮತ್ತು ಮಾಹಿತಿಯನ್ನು ಬಳಸುತ್ತದೆ. ಇನ್ನು ಈ ಕಾರು ಟೋಲ್ ಕೇಂದ್ರಗಳು ಮತ್ತು ಟಿ-ಜಂಕ್ಷನ್‌ಗಳು ಹೀಗೆ ಕೆಲವು ಮಾಹಿತಿಗಳನ್ನು ಕೂಡ ನೀಡುತ್ತದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಇನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಜಿಎಲ್ಇ 450 4 ಮ್ಯಾಟಿಕ್ ಮತ್ತು ಜಿಎಲ್ಇ 400 ಡಿ 4 ಮ್ಯಾಟಿಕ್ ಎಂಬ ಎರಡು ರೂಪಾಂತರಗಳನ್ನು ಬಿಡುಗಡೆಗೊಳಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಹೊಸ ಮರ್ಸಿಡಿಸ್ ಬೆಂಜ್ ಜಿಎಲ್ಇ 450 4 ಮ್ಯಾಟಿಕ್ ತನ್ನ ಸರಣಿಯಲ್ಲಿರುವ ಅಗ್ರಸ್ಥಾನದಲ್ಲಿರುವ ಪೆಟ್ರೋಲ್ ಆವೃತ್ತಿಯಾಗಿದೆ. ಈ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.88.80 ಲಕ್ಷಗಳಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಇ 400 ಡಿ 4 ಮ್ಯಾಟಿಕ್ ರೂಪಾಂತರವು ಡೀಸೆಲ್ ಆವೃತ್ತಿಯಾಗಿದೆ.

ಅನಾವರಣವಾಯ್ತು ಹೊಸ ಮರ್ಸಿಡಿಸ್ ಬೆಂಝ್ ಸಿಎಲ್‌ಎಸ್ ಕಾರು

ಟಾಪ್-ಸ್ಪೆಕ್ ಜಿಎಲ್ಇ 400 ಡಿ ಹಿಪ್-ಹಾಪ್ ಆವೃತ್ತಿಯ ಕೆಳಗಿನ ಸ್ಥಾನದಲ್ಲಿದೆ. ಹೊಸ ಜಿಎಲ್ಇ 400 ಡಿ 4 ಮ್ಯಾಟಿಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.89.90 ಲಕ್ಷಗಳಾಗಿದೆ

Most Read Articles

Kannada
English summary
2021 Mercedes-Benz CLS Unveiled In USA. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X