ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಮಾರುತಿ ಸುಜುಕಿ ಕಂಪನಿಯ ಇಗ್ನಿಸ್ ಕಾರು ಟಾಲ್ ಬಾಯ್ ವಿನ್ಯಾಸವನ್ನು ಹೊಂದಿರುವ ಆಕರ್ಷಕವಾಗಿ ಕಾಣುವ ಚಿಕ್ಕ ಹ್ಯಾಚ್‍‍ಬ್ಯಾಕ್ ಕಾರ್ ಆಗಿದೆ. ಬೇರೆ ಕಾರುಗಳಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿರುವ ಈ ಕಾರು ಈ ಸೆಗ್‍‍ಮೆಂಟಿನಲ್ಲಿರುವ ಕಾರುಗಳಿಗಿಂತ ವಿಭಿನ್ನವಾಗಿದೆ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಇಗ್ನಿಸ್ ಕಾರ್ ಅನ್ನು ಹೆಚ್ಚು ಮಾಡಿಫೈಗೊಳಿಸಬಹುದಾದ ಕಾರಣಕ್ಕೆ ಈ ಕಾರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವವರಿದ್ದಾರೆ. ಈ ಹಿಂದೆ ಇಗ್ನಿಸ್ ಕಾರ್ ಅನ್ನು ಭಾರತದ ವಿವಿಧ ಭಾಗಗಳಲ್ಲಿ ಮಾಡಿಫೈಗೊಳಿಸಲಾದ ಬಗ್ಗೆ ವರದಿಗಳಾಗಿದ್ದವು.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಈಗ ಮಾಡಿಫೈಗೊಳಿಸಲಾಗಿರುವ ಇಗ್ನಿಸ್ ಕಾರ್ ಅನ್ನು ಭಾರತದ ಅತಿ ವೇಗದ ಇಗ್ನಿಸ್ ಕಾರೆಂದು ಪರಿಗಣಿಸಲಾಗಿದೆ. ಮಾಡಿಫೈಗೊಂಡ ಈ ಕಾರು ಎಷ್ಟು ವೇಗದಲ್ಲಿ ಚಲಿಸುತ್ತದೆ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಅಚಿಂತ್ಯಾ ಎಂಬುವವರಿಗೆ ಸೇರಿರುವ ಈ ಕಾರಿನ ಬಗೆಗಿನ ವೀಡಿಯೊವನ್ನು ರಾಹುಲ್ ಸಿಂಗ್‍‍ರವರು ತಮ್ಮ ಯೂಟ್ಯೂಬ್ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿರುವ ಇಗ್ನಿಸ್ ಕಾರು ಮೂಲ ಸಿಗ್ಮಾ ಮಾದರಿಯಾಗಿದೆ. ಈ ಕಾರ್ ಅನ್ನು ಹೊರಗಡೆಯಿಂದ ನೋಡಿದಾಗ ಕಾರಿನಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಕಾರಿನ ಎಕ್ಸ್ ಟಿರಿಯರ್‍‍ನಲ್ಲಿ ಸ್ಪೋರ್ಟಿ ಲುಕ್‍‍ನ ಅಲಾಯ್ ವ್ಹೀಲ್ ಹಾಗೂ ಕಾರಿನ ಸೈಡಿನಲ್ಲಿ ಸ್ಟಿಕ್ಕರ್‍‍ಗಳಿವೆ. ಡೀಲರ್‍‍ಗಳು ಮಾರಾಟ ಮಾಡುವ ಪೆಟ್ರೋಲ್ ಮಾದರಿಯ ಇಗ್ನಿಸ್ ಕಾರು 1.2 ಲೀಟರಿನ ಎಂಜಿನ್ ಹೊಂದಿದ್ದರೆ, ವೀಡಿಯೊದಲ್ಲಿರುವ ಈ ಕಾರು 1.4 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಈ ಕಾರಿನ ಮಾಲೀಕರು ಈ ಕಾರಿನಲ್ಲಿ ವಿವಿಧ ಆಟೋ ಕ್ರಾಸ್ ಹಾಗೂ ರೇಸ್‍‍ಗಳಲ್ಲಿ ಭಾಗವಹಿಸುತ್ತಾರೆ. ಈ ಕಾರಣಕ್ಕೆ ಈ ಕಾರ್ ಅನ್ನು ಮಾಡಿಫೈಗೊಳಿಸಲಾಗಿದೆ. ಈ ಎಂಜಿನ್‍‍ನಲ್ಲಿರುವ ಇ‍‍ಸಿಯು, ವೈರಿಂಗ್, ಏರ್ ಇನ್‍‍ಟೇಕ್‍‍ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ವೀಡಿಯೊದಲ್ಲಿ ಹೇಳಿರುವಂತೆ ಈ ಮಾಡಿಫಿಕೇಶನ್ ಅನ್ನು ಅಧಿಕೃತ ಸರ್ವಿಸ್ ಸೆಂಟರ್‍‍ನಲ್ಲಿ ಮಾಡಲಾಗಿದೆ. ಎಂಜಿನ್ ಬದಲಾವಣೆಯಿಂದ ಕಾರಿನ ಪವರ್ ಉತ್ಪಾದನೆಯು ಸಹ ಹೆಚ್ಚಾಗಿದೆ. ಈ ಕಾರು ಈಗ 100 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

0 - 100 ಕಿ.ಮೀ ವೇಗವನ್ನು 10 ಸೆಕೆಂಡುಗಳಲ್ಲಿ ಆಕ್ಸೆಲರೇಟ್ ಮಾಡುತ್ತದೆ. ವಿಬಾಕ್ಸ್ ನಲ್ಲಿ ದಾಖಲಾದ ನಿರ್ದಿಷ್ಟವಾದ ವೇಳೆಯು 9.85 ಸೆಕೆಂಡುಗಳಾಗಿದೆ. ಈ ವೀಡಿಯೊದಲ್ಲಿ ಎಕ್ಸಾಸ್ಟ್ ಸೆಟ್ ಅಪ್ ಹಾಗೂ ಎಕ್ಸಾಸ್ಟ್ ಮಫ್ಲರ್‍‍ಗಳನ್ನು ಕಾಣಬಹುದು.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಈ ಎಕ್ಸಾಸ್ಟ್ ಮಫ್ಲರ್‍‍ಗಳನ್ನು ಇಗ್ನಿಸ್‍ ಕಾರಿಗೆಂದೇ ತಯಾರಿಸಲಾಗಿದ್ದು, ಜಪಾನ್‍‍ನಿಂದ ಆಮದು ಮಾಡಿಕೊಳ್ಳಲಾಗಿದೆ. ಎಕ್ಸಾಸ್ಟ್ ನೋಟ್ ಹೆಚ್ಚು ಶಬ್ದವನ್ನು ಉಂಟುಮಾಡುತ್ತದೆ. ಈ ಶಬ್ದವು ಸ್ಪೋರ್ಟಿ ಫೀಲಿಂಗ್ ನೀಡುತ್ತದೆ.

ಈ ಕಾರಿನಲ್ಲಿರುವ ಸಸ್ಪೆಂಷನ್ ಸೆಟ್ ಅಪ್ ಅನ್ನು ಸಹ ಬದಲಿಸಲಾಗಿದೆ. ಆರ್‍ಎಸ್‍ಆರ್ ಜಪಾನ್‍‍ನ ಕಾಯಿಲ್‍ಒವರ್‍‍ಗಳನ್ನು ಅಳವಡಿಸಲಾಗಿದ್ದು, ಎತ್ತರ ಹಾಗೂ ಡ್ಯಾಂಪಿಂಗ್‍‍ಗಳನ್ನು ಪೂರ್ತಿಯಾಗಿ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ.

ಇದು ಭಾರತದ ಅತಿ ವೇಗದ ಇಗ್ನಿಸ್ ಕಾರು..!

ಇನ್ಫೋಟೇನ್‍‍ಮೆಂಟ್ ಸಿಸ್ಟಂ ಬದಲಿಗೆ ಇಗ್ನಿಸ್‍‍ನಲ್ಲಿ ಸರ್ಕ್ಯೂಟ್ ಬ್ರೇಕರ್ ಸ್ವಿಚ್ ಅಳವಡಿಸಲಾಗಿದೆ. ರೇಸ್‍‍ಗಳಲ್ಲಿ ಭಾಗವಹಿಸಿದಾಗ ಬೇಕಾಗುವ ಸುರಕ್ಷತೆಗಾಗಿ ಫೈರ್ ಎಕ್ಸ್ ಟಿಂಗ್ಯೂಷರ್ ನೀಡಲಾಗಿದೆ. ಇಗ್ನಿಸ್ ನೆಕ್ಸಾ ಸರಣಿಯಲ್ಲಿ ಮಾರಾಟವಾಗುವ ಎಂಟ್ರಿ ಲೆವೆಲ್ ಕಾರ್ ಆಗಿದೆ. ಅಪ್‍‍ಡೇಟ್ ಮಾಡಲಾಗಿರುವ ಇಗ್ನಿಸ್ ಕಾರ್ ಅನ್ನು ಈ ವರ್ಷ ಬಿಡುಗಡೆಗೊಳಿಸಲಾಗುವುದು.

More from DriveSpark

Article Published On: Monday, January 20, 2020, 17:42 [IST]
English summary
India's fastest Maruti Ignis. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+