ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಟೊಯೊಟಾ ನಿರ್ಮಾಣದ ಬಹುತೇಕ ಕಾರು ಮಾದರಿಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದು, ಸದ್ಯದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ಕ್ರಾಸ್ ಓವರ್ ಮಾದರಿಯಾದ ಸಿ-ಹೆಚ್ಆರ್ ಮತ್ತು ಮಿನಿ ಫಾರ್ಚೂನರ್ ಖ್ಯಾತಿಯ ರಷ್ ಕಾರು ಭಾರೀ ಸಂಚಲನಕ್ಕೆ ಕಾರಣವಾಗಿವೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ದೇಶಿಯ ಮಾರುಕಟ್ಟೆಗಾಗಿ ವಿನೂತನ ವಿನ್ಯಾಸದ ಸಿ-ಹೆಚ್‌ಆರ್ ಕ್ರಾಸ್ ಓವರ್ ಎಸ್‌ಯುವಿ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ಆವೃತ್ತಿಯಾದ ರಷ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಟೊಯೊಟಾ ಸಂಸ್ಥೆಯು ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ, ರೆನಾಲ್ಟ್ ಕ್ಯಾಪ್ಚರ್, ನಿಸ್ಸಾನ್ ಕಿಕ್ಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಷ್ ಮತ್ತು ಸಿ-ಹೆಚ್‌ಆರ್ ಕಾರುಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಸದ್ಯ ಇಟಿಯಾಸ್ ಲಿವಾ, ಪ್ಲ್ಯಾಟಿನಂ ಇಟಿಯಾಸ್ ಮತ್ತು ಇಟಿಯಾಸ್ ಕ್ರಾಸ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳು ತುಸು ದುಬಾರಿ ಎನ್ನಿಸಲಿದ್ದು, ರೂ.10 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಯಾರಿಸ್ ಸೆಡಾನ್ ಹೊರತಾಗಿ ಮತ್ಯಾವುದೇ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಲ್ಲ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಆವೃತ್ತಿಯು ರೂ.19 ಲಕ್ಷದಿಂದ ರೂ.29 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದೀಗ ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಹೊಸ ನಮೂನೆಯ ರಷ್ ಮತ್ತು ಸಿ-ಹೆಚ್ಆರ್ ಕಾರುಗಳು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿವೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಇದಕ್ಕೆ ಪೂರಕ ಎನ್ನುವಂತೆ ಸಿ-ಹೆಚ್ಆರ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿರುವ ಟೊಯೊಟಾ ಸಂಸ್ಥೆಯು ಹೊಸ ಕಾರಿನಲ್ಲಿ ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಶಾರ್ಪ್, ಎಡ್ಜ್ ಡಿಸೈನ್‌ ಮತ್ತು ಸ್ಲಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೋಡಣೆ ಮಾಡಿರುವುದು ಬಹಿರಂಗವಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ ಅಲಾಯ್ ವೀಲ್ಹ್‌ಗಳು, ಸಿ ಸೇಫ್ ಎಲ್ಇಡಿ ಟೈಲ್ ಲೈಟ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಮಸ್ಕ್ಯೂಲರ್ ಬಂಪರ್ ಜೊತೆ ಪ್ಲಾಸಿಕ್ಟ್ ಕ್ಯಾಡಿಂಗ್ ಅಳವಡಿಸಲಾಗಿದೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಹೀಗಾಗಿ ಹೊಸ ಸಿ-ಹೆಚ್ಆರ್ ಕ್ರಾಸ್ ಓವರ್ ಎಸ್‌ಯುವಿ ಕಾರಿನ ವಿನ್ಯಾಸಗಳು ಐಷಾರಾಮಿ ಕಾರಿನ ಮಾದರಿಯಲ್ಲೇ ಹೋಲಿಕೆ ಪಡೆಯಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿನ ಬೇಡಿಕೆಗೆ ಇದು ಪೂರಕವಾಗಲಿದೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಹೊಸ ಕಾರು 4,360-ಎಂಎಂ ಉದ್ದ, 1,795-ಎಂಎಂ ಅಗಲ, 1,566-ಎಂಎಂ ಎತ್ತರ ಮತ್ತು 18-ಇಂಚಿನ ಡ್ಯುಯಲ್ ಅಲಾಯ್ ವೀಲ್ಹ್‌ಗಳನ್ನು ಹೊಂದಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಕ್ರಾಸ್ ಓವರ್ ಮಾದರಿ ರೆನಾಲ್ಟ್ ಕ್ಯಾಚ್ಚರ್ ಕಾರಿಗಿಂತಲೂ 31-ಎಂಎಂ ಹೆಚ್ಚುವರಿ ಉದ್ದಳತೆ ಪಡೆದಿದೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಮಾಹಿತಿಗಳ ಪ್ರಕಾರ ಹೊಸ ಸಿ-ಹೆಚ್‌ಆರ್ ಕಾರು ಹೈಬ್ರಿಡ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಕ್ಯಾಮ್ರಿ ಮತ್ತು ಪ್ರಿಯಸ್ ನಂತರ ಸಿ-ಹೆಚ್ಆರ್ ಕೂಡಾ 1.8-ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ಮಾದರಿಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಹಾಗೆಯೇ ಮತ್ತೊಂದು ಸಿ-ಹೆಚ್ಆರ್ ಮಾದರಿಯು ಹೈ ಪರ್ಫಾಮೆನ್ಸ್ ವರ್ಷನ್‌ನಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ಎನ್ನಲಾಗಿದ್ದು, ಪೆಟ್ರೋಲ್ ಹೈಬ್ರಿಡ್ ಮಾದರಿಯು 122-ಬಿಹೆಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 145-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಈ ಮೂಲಕ ಪ್ರೀಮಿಯಂ ಸೌಲಭ್ಯಗಳಲ್ಲೂ ಸದ್ದು ಮಾಡಲಿರುವ ಸಿ-ಹೆಚ್ಆರ್ ಮಾದರಿಯು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಮುಂದಿನ ತಿಂಗಳು 5ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಟೊಯೊಟಾ ಬಹುನೀರಿಕ್ಷಿತ ಸಿ-ಹೆಚ್ಆರ್ ಕಾರು ಬಿಡುಗಡೆಗೆ ಭರ್ಜರಿ ಸಿದ್ದತೆ

ಇದರೊಂದಿಗೆ ಹೊಸ ಸಿ-ಹೆಚ್ಆರ್ ಕಾರು ಬಿಎಸ್-6 ಎಂಜಿನ್ ಹೊಂದಿದ್ದು, ತಾಂತ್ರಿಕವಾಗಿ ಬಲಿಷ್ಠವಾಗಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13 ಲಕ್ಷದಿಂದ ರೂ.16 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Article Published On: Tuesday, January 7, 2020, 15:56 [IST]
English summary
Toyota C-HR Spied Testing In India Ahead Of Possible Launch. Read more in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+