ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ದೀಪಾವಳಿ ಹಬ್ಬದ ಅವಧಿಯಲ್ಲಿ ಭರ್ಜರಿ ಕಾರು ಮಾರಾಟವನ್ನು ನಡೆಸಿದೆ. ದೀಪಾವಳಿ ಹಬ್ಬದ ಅವಧಿಯಲ್ಲಿ ಟೊಯೊಟಾ ಕಾರುಗಳು ಉತ್ತಮ ಬೇಡಿಯನ್ನು ಪಡೆದುಕೊಂಡಿತ್ತು.

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಕಳೆದ ವರ್ಷದ ಧಂತೇರಸ್ ಹಬ್ಬದ ಚಿಲ್ಲರೆ ಮಾರಾಟವನ್ನು ಈ ವರ್ಷದ ಅದೇ ಅವಧಿಯ ಮಾರಾಟಕ್ಕೆ ಹೋಲಿಸಿದರೆ ಶೇ.12 ರಷ್ಟು ಹೆಚ್ಚಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಟೊಯೊಟಾ ಕಾರುಗಳ ಮಾರಾಟದಲ್ಲಿ ಉತ್ತಮ ಚೇತರಿಕೆಯನ್ನು ಕಾಣುತ್ತಿದೆ. ಇನ್ನು ದೀಪಾವಳಿ ಹಬ್ಬದ ಅವಧಿಯಲ್ಲಿ ಟೊಯೊಟಾ ಕಾರುಗಳ ಮೇಲೆ ಉತ್ತಮ ಆಫರ್ ಅನ್ನು ನೀಡಿದ್ದರು. ಇದರಿಂದಾಗಿ ಹಬ್ಬದ ಅವಧಿಯಲ್ಲಿ ಟೊಯೊಟಾ ಕಾರುಗಳ ಮಾರಾಟ ಹೆಚ್ಚಾಗಲು ಒಂದು ಕಾರಾಣವಾಯ್ತು.

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಧಂತೇರಸ್ ಎಂದರೆ ದೀಪಾವಳಿ ಹಬ್ಬದ ಮೊದಲ ದಿನ. ಇದನ್ನು ಹೆಚ್ಚಾಗಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಆಚರಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತ ಜನರಿಗೆ ಈ ದಿನವನ್ನು ಬಹಳ ಶುಭದಿನವಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಧಂತೇರಸ್ ಎಂಬ ಶುಭದಿನದಂದು ಹೆಚ್ಚಾಗಿ ಚಿನ್ನ, ಬೆಳ್ಳಿ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತಾರೆ. ಈ ದಿನದಂದು ಕಾರುಗಳು ಹೆಚ್ಚಾಗಿ ಮಾರಾಟವಾಗುತ್ತದೆ. ಇದರಿಂದ ಕಾರು ತಯಾರಕರಿಗೂ ಇದು ಶುಭ ದಿನವೆಂದು ಹೇಳಬಹುದು.

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಟಿಕೆಎಂನ ಸೇಲ್ಸ್ ಮತ್ತು ಸರ್ವಿಸ್ ವಿಭಾಗದ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಅವರು ಮಾತನಾಡಿ, ಕಳೆದ ವರ್ಷ ಧಂತೇರಸ್ ಮರಾಟವನ್ನು ಈ ವರ್ಷದ ಅದೇ ಅವದಿಗೆ ಹೋಲಿಸಿದರೆ ಶೇ.10 -13 ರಷ್ಟು ಹೆಚ್ಚಳವಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಧಂತೇರಸ್ ಅನ್ನು ದೇಶದ ವಿವಿಧ ಭಾಗಗಳಲ್ಲಿ ಎರಡು ದಿನಗಳವರೆಗೂ ಆಚರಿಸಲಾಗುತ್ತಿತ್ತು. ಆದ್ದರಿಂದ ಚಿಲ್ಲರೆ ಮಾರಾಟದ ವಿಷಯದಲ್ಲಿ 2019ರ ಧಂತೇರಸ್‌ಗೆ ಹೋಲಿಸಿದರೆ ನಾವು 12% ಬೆಳವಣಿಗೆಯನ್ನು ಕಂಡಿದ್ದೇವೆ ಎಂದು ಹೇಳಿದರು.

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಅವರು ಮಾತನ್ನು ಮುಂದುವರೆಸಿ ಕಳೆದ ಕೆಲವು ತಿಂಗಳುಗಳಿಂದ ಸ್ಥಿರವಾದ ಚೇತರಿಕೆಗೆ ಸಾಕ್ಷಿಯಾಗಿದ್ದೇವೆ. ಇನ್ನು ಕಳೆದ ಕೆಲವು ತಿಂಗಳುಗಳಿಂದ ಟೊಯೊಟಾ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಯನ್ನು ಹೆಚ್ಚಿಸಲು ಗ್ರಾಹಕರಿಗೆ ಕೆಲವು ಆಫರ್ ಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಟೊಯೊಟಾ ಕಂಪನಿಯು ಹಬ್ಬದ ಅವಧಿಯಲ್ಲಿ ಭರ್ಜರಿಯಾಗಿ ಮಾರಾಟವಾಗಿದೆ. ಆದರೆ ಕಳೆದ ಕೆಲವು ತಿಂಗಳು ಮಾರಾಟದಲ್ಲಿ ಕುಸಿತವನ್ನು ಕಂಡಿತ್ತು. ಆದರೆ ಈ ತಿಂಗಳು ಹಬ್ಬದ ಅವಧಿಯಾಗಿರುವುದರಿಂದ ಉತ್ತಮ ಮಾರಾಟವನ್ನು ಕಂಡಿದೆ.

ಧಂತೇರಸ್‍‍ಗೆ ಭರ್ಜರಿಯಾಗಿ ಮಾರಾಟವಾಯ್ತು ಟೊಯೊಟಾ ಕಾರುಗಳು

ಹಬ್ಬದ ಅವಧಿಯು ಮುಗಿದ ಬಳಿಕ ಟೊಯೊಟಾ ಕಾರುಗಳ ಮಾರಾಟ ಅದೇ ರೀತಿ ಮುಂದುವರೆಯತ್ತಾ ಎಂಬುದನ್ನು ಕಾದು ನೋಡಬೇಕು. ಇನ್ನು ಬಿಡದಿ ಬಳಿಯ ತನ್ನ ಕೈಗಾರಿಗೆಯಲ್ಲಿ ಕಾರ್ಮಿಕರ ಮುಷ್ಕರು ಟೊಯೊಟಾ ಕಂಪನಿಯ ಮಾರಾಟದಲ್ಲಿ ಪಾರಿಣಾಮ ಬೀರುವ ಸಾಧ್ಯತೆಗಳಿದೆ.

Most Read Articles

Kannada
Read more on ಟೊಯೊಟಾ toyota
English summary
Toyota India Witnesses 12% Growth In Retail Sales During Dhanteras. Read In Kannada.
Story first published: Monday, November 16, 2020, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X