ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ತನ್ನ ಇನೋವಾ ಟೂರಿಂಗ್ ಸ್ಪೋರ್ಟ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದೆ. ಈ ಕಾರನ್ನು ಕಂಪನಿಯ ವೆಬ್‌ಸೈಟ್‌ನಿಂದಲೂ ತೆಗೆದುಹಾಕಲಾಗಿದೆ. ಟೊಯೊಟಾ ಕಂಪನಿಯು ಇನೋವಾ ಟೂರಿಂಗ್ ಸ್ಪೋರ್ಟ್ ಕಾರನ್ನು 2017ರಲ್ಲಿ ಬಿಡುಗಡೆಗೊಳಿಸಿತ್ತು.

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.19.53 ಲಕ್ಷಗಳಿಂದ ರೂ. 22.67 ಲಕ್ಷಗಳಾಗಿತ್ತು. ಈ ಕಾರು ಇನೋವಾ ಸ್ಟ್ಯಾಂಡರ್ಡ್ ಮಾದರಿಯ ಸ್ಪೋರ್ಟಿ ಮಾದರಿಯಾಗಿದೆ. ಈ ಕಾರಣದಿಂದಾಗಿ ಈ ಕಾರಿನ ಹೊರಭಾಗದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇನೋವಾ ಟೂರಿಂಗ್ ಸ್ಪೋರ್ಟ್ ಮಾದರಿಯನ್ನು ಸ್ಟ್ಯಾಂಡರ್ಡ್ ಮಾದರಿಯ ಮೊದಲ ವಾರ್ಷಿಕೋತ್ಸವದಂದು ಬಿಡುಗಡೆಗೊಳಿಸಲಾಗಿತ್ತು.

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಈ ಎರಡೂ ಮಾದರಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತಿತ್ತು. ಇನೋವಾ ಟೂರಿಂಗ್ ಸ್ಪೋರ್ಟ್ ಮಾದರಿಯನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಹಾಗೂ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಇನೋವಾ ಟೂರಿಂಗ್ ಸ್ಪೋರ್ಟ್ ಮಾದರಿಯನ್ನು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ 2.7 ಲೀಟರಿನ ಪೆಟ್ರೋಲ್ ಹಾಗೂ 2.4 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಇದು 5 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ಹೊಂದಿದೆ. ಮ್ಯಾನುಯಲ್ ಗೇರ್ ಬಾಕ್ಸ್ ಅನ್ನು ವಿಎಕ್ಸ್ ಮಾದರಿಯಲ್ಲಿ ಪರಿಚಯಿಸಲಾಗಿತ್ತು. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಟಾಪ್ ಎಂಡ್ ಮಾದರಿಯಾದ ಝಡ್ಎಕ್ಸ್ ನಲ್ಲಿ ಪರಿಚಯಿಸಲಾಗಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಟೊಯೊಟಾ ಇನೋವಾ ಟೂರಿಂಗ್ ಸ್ಪೋರ್ಟ್ ಮಾದರಿಯು ಬ್ಲಾಕ್ ಪ್ಲಾಸ್ಟಿಕ್ ಟ್ರಿಮ್, ಬ್ಲಾಕ್ ಅಲಾಯ್ ವ್ಹೀಲ್, ಸ್ಮೋಕ್ ಹೆಡ್‌ಲ್ಯಾಂಪ್‌, ಫಾಗ್ ಲ್ಯಾಂಪ್ ಗಳನ್ನು ಹೊಂದಿದೆ. ಟೇಲ್‌ಗೇಟ್‌ನಲ್ಲಿ ಟೂರಿಂಗ್ ಸ್ಪೋರ್ಟ್ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ.

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಈ ಮಾದರಿಯನ್ನು ವೈಲ್ಡ್ ಫೈರ್ ರೆಡ್ ಹಾಗೂ ಪರ್ಲ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಟೊಯೊಟಾ ಇನೋವಾ ಟೂರಿಂಗ್ ಸ್ಪೋರ್ಟ್‌ ಮಾದರಿಯು ಬ್ಲಾಕ್ ಅಪ್ ಹೊಲೆಸ್ಟರಿ, ರೆಡ್ ಸ್ಟಿಚಿಂಗ್ ಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಈ ಕಾರಿನ ಸ್ಟೀಯರಿಂಗ್ ವ್ಹೀಲ್ ಮೇಲ್ಭಾಗವು ಕಪ್ಪು ಬಣ್ಣವನ್ನು ಹೊಂದಿದೆ. ಇನೋವಾ ಟೂರಿಂಗ್ ಸ್ಪೋರ್ಟ್ ಮಾದರಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್‌ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್, ಟ್ರಾಕ್ಷನ್ ಕಂಟ್ರೋಲ್ ಗಳನ್ನು ನೀಡಲಾಗಿದೆ. ಮುಂದಿನ ವರ್ಷ ಟೊಯೊಟಾ ಇನೋವಾ ಟೂರಿಂಗ್ ಸ್ಪೋರ್ಟ್ ಕಾರಿನ ಫೇಸ್ ಲಿಫ್ಟ್ ಮಾದರಿಯನ್ನು ಬಿಡುಗಡೆಗೊಳಿಸಲಾಗುವುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಫೇಸ್ ಲಿಫ್ಟ್ ಮಾದರಿಯನ್ನು ಬಹಿರಂಗಪಡಿಸಿದೆ. ಇನೋವಾ ಕ್ರಿಸ್ಟಾದ ಫೇಸ್‌ಲಿಫ್ಟ್ ಮಾದರಿಯನ್ನು ಸಹ ಮುಂದಿನ ವರ್ಷ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಇನೋವಾ ಟೂರಿಂಗ್ ಸ್ಪೋರ್ಟ್ ಮಾರಾಟವನ್ನು ಸ್ಥಗಿತಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಹೊಸ ಇನೋವಾ ಕ್ರಿಸ್ಟಾ ಕಾರಿನಲ್ಲಿ ಹಲವಾರು ಅಪ್ ಡೇಟ್ ಗಳನ್ನು ಮಾಡಿದೆ. ಈ ಕಾರಣದಿಂದಾಗಿ ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಹೆಚ್ಚಿನ ಫೀಚರ್ ಗಳನ್ನು ಹೊಂದಿರಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota company removes Innova Touring sport from website. Read in Kannada.
Story first published: Tuesday, November 3, 2020, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X