ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಬಿಡದಿಯಲ್ಲಿರುವ ತನ್ನ ಉತ್ಪಾದನಾ ಘಟಕದ ಮತ್ತೆ ಐವರು ಉದ್ಯೋಗಿಗಳಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿದೆ ಎಂದು ಖ್ಯಾತ ಕಾರು ತಯಾರಕ ಕಂಪನಿಯಾದ ಟೊಯೊಟಾ ಇಂಡಿಯಾ ತಿಳಿಸಿದೆ. ಮೂಲಗಳ ಪ್ರಕಾರ, ಈ ಐವರು ಸಿಬ್ಬಂದಿಗಳಲ್ಲಿ ನಾಲ್ವರು ಉತ್ಪಾದನಾ ಘಟಕದ ಸಿಬ್ಬಂದಿಯಾದರೆ, ಮತ್ತೊಬ್ಬರು ಗುತ್ತಿಗೆ ಸಿಬ್ಬಂದಿಯಾಗಿದ್ದಾರೆ.

ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಕಳೆದ ತಿಂಗಳು ಸಹ ಕಂಪನಿಯ ಹಲವು ಸಿಬ್ಬಂದಿಗಳಲ್ಲಿ ಕರೋನಾ ಪಾಸಿಟಿವ್ ಕಂಡು ಬಂದಿತ್ತು. ಈಗ ಮತ್ತೊಮ್ಮೆ ಜುಲೈ 26ರಂದು ಕಂಪನಿಯ ಉತ್ಪಾದನಾ ಘಟಕದ ಐವರು ಉದ್ಯೋಗಿಗಳಲ್ಲಿ ಕರೋನಾ ಪಾಸಿಟಿವ್ ಕಂಡುಬಂದಿದೆ. ಉತ್ಪಾದನಾ ಘಟಕದ ಸಿಬ್ಬಂದಿಯಲ್ಲಿ ಕರೋನಾ ಪಾಸಿಟಿವ್ ಕಂಡು ಬಂದರೂ ಕಂಪನಿಯು ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿಲ್ಲವೆಂಬುದನ್ನು ಗಮನಿಸಬೇಕು.

ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಆದರೆ ಕರೋನಾ ಸೋಂಕನ್ನು ಹರಡುವುದನ್ನು ತಡೆಯಲು ಉತ್ಪಾದನಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಟೊಯೊಟಾ ಕಂಪನಿ ಹೇಳಿದೆ. ಈಗ ಕರೋನಾ ಪಾಸಿಟಿವ್ ಕಂಡು ಬಂದ ಉದ್ಯೋಗಿಗಳು ಜುಲೈ 10, ಜುಲೈ 14, ಜುಲೈ 23 ಹಾಗೂ ಜುಲೈ 24ರಂದು ಈ ಉತ್ಪಾದನಾ ಘಟಕದಲ್ಲಿ ಕಾರ್ಯ ನಿರ್ವಹಿಸಿದ್ದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಕರೋನಾ ಸೋಂಕಿಗೆ ಒಳಗಾಗಿರುವ ಎಲ್ಲಾ ಉದ್ಯೋಗಿಗಳನ್ನು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಅನ್ವಯ ಕ್ವಾರಂಟೈನ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದರ ಜೊತೆಗೆ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದ ನೌಕರರ ಮೇಲೂ ನಿಗಾ ಇಡಲಾಗುತ್ತಿದೆ.

ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಟೊಯೊಟಾ ಮಾತ್ರವಲ್ಲದೇ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಗಳ ಉದ್ಯೋಗಿಗಳಲ್ಲೂ ಕರೋನಾ ಪಾಸಿಟಿವ್ ಕಂಡುಬಂದಿತ್ತು. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗುವ ಮುನ್ನವೇ ನೌಕರರ ಸುರಕ್ಷತೆಯ ದೃಷ್ಟಿಯಿಂದ ತನ್ನ ಬಿಡದಿ ಉತ್ಪಾದನಾ ಘಟಕವನ್ನು ಮುಚ್ಚಿತ್ತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಕರೋನಾ ಸೋಂಕಿತರಿಗೆ ಹಾಗೂ ಅವರ ಕುಟುಂಬದವರ ಚಿಕಿತ್ಸೆಗಾಗಿ ಕಂಪನಿಯು ಈಗಾಗಲೇ ನೆರವನ್ನು ಘೋಷಿಸಿದೆ. ಲಾಕ್‌ಡೌನ್ ಸಡಿಲಿಕೆ ನಂತರ, ಕಂಪನಿಯು ತನ್ನ 40%ನಿಂದ 45% ಉದ್ಯೋಗಿಗಳೊಂದಿಗೆ ಉತ್ಪಾದನೆಯನ್ನು ಆರಂಭಿಸಿತು. ಕಂಪನಿಯು ತನ್ನ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದೆ.

ಟೊಯೊಟಾ ಸಿಬ್ಬಂದಿಗಳನ್ನು ಕಾಡುತ್ತಿದೆ ಕರೋನಾ ಮಹಾಮಾರಿ

ಉದ್ಯೋಗಿಯೊಬ್ಬರು ಮೃತರಾದ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಘಟಕವನ್ನು ಜುಲೈ 6ರಂದು ಮುಚ್ಚಿತ್ತು ಎಂದು ಹೇಳಲಾಗಿದೆ. ಈ ಹಿಂದೆ ಸೋಂಕಿಗೆ ಒಳಗಾದ ಕಂಪನಿಯ ನೌಕರರಲ್ಲಿ 21 ಜನರು ಗುಣಮುಖರಾಗಿದ್ದು, ಎಲ್ಲರೂ 14 ದಿನಗಳ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಕಂಪನಿ ಹೇಳಿದೆ.

Most Read Articles

Kannada
Read more on ಟೊಯೊಟಾ toyota
English summary
Toyota employees in Bidadi plant tested corona positive again. Read in Kannada.
Story first published: Tuesday, July 28, 2020, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X