ಶುರುವಾಯ್ತು ಬಿಎಸ್ 6 ಟೊಯೊಟಾ ಫಾರ್ಚೂನರ್ ಬುಕ್ಕಿಂಗ್
ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ದೇಶಾದ್ಯಂತವಿರುವ ಕೆಲವು ಡೀಲರ್‍ಗಳು ಈಗಾಗಲೇ ಈ ಎಸ್‍ಯುವಿಯ ಅನಧಿಕೃತ ಬುಕ್ಕಿಂಗ್‍ಗಳನ್ನು ಆರಂಭಿಸಿದ್ದಾರೆ.

ಹೊಸ ಫಾರ್ಚೂನರ್ ಎಸ್‍ಯುವಿಯಲ್ಲಿ 2.8 ಲೀಟರಿನ ಟರ್ಬೊ ಬಿಎಸ್ 6 ಡೀಸೆಲ್ ಎಂಜಿನ್ ಹಾಗೂ 2.7 ಲೀಟರಿನ ಬಿಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. 2.8 ಲೀಟರಿನ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 174 ಬಿಹೆಚ್‍ಪಿ ಪವರ್ ಹಾಗೂ 420 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು ಇನ್ನು ಮುಂದೆ ಟೊಯೊಟಾ ಇನೊವಾ ಕ್ರಿಸ್ಟಾದಲ್ಲಿ ಬಳಸುವುದಿಲ್ಲ. 2.7 ಲೀಟರಿನ 4 ಸಿಲಿಂಡರ್ ಬಿಎಸ್ 6 ಪೆಟ್ರೋಲ್ ಎಂಜಿನ್ 163 ಬಿಹೆಚ್‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎರಡೂ ಎಂಜಿನ್‍ಗಳಲ್ಲಿ 6 ಸ್ಪೀಡಿನ ಮ್ಯಾನುವಲ್ ಹಾಗೂ 6 ಸ್ಪೀಡಿನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಗಳನ್ನು ನೀಡಲಾಗಿದೆ. ಡೀಸೆಲ್ ಎಂಜಿನ್‍ಗಳಲ್ಲಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನಿಂದಾಗಿ 30 ಎನ್‍ಎಂ ಟಾರ್ಕ್ ಹೆಚ್ಚು ಉತ್ಪಾದನೆಯಾಗುತ್ತದೆ.

ಡೀಸೆಲ್ ಎಂಜಿನ್‍ನಲ್ಲಿ ಆಲ್ ವ್ಹೀಲ್ ಡ್ರೈವ್ ಹಾಗೂ ರೇರ್ ವ್ಹೀಲ್ ಡ್ರೈವ್‍ಗಳನ್ನು ನೀಡಲಾಗುವುದು. ಇಂಟಿರಿಯರ್ ಬಗ್ಗೆ ಹೇಳುವುದಾದರೆ ಡ್ಯಾಶ್‍ಬೋರ್ಡ್ ಡಾರ್ಕ್ ಬ್ರೌನ್ ಹಾಗೂ ಬೀಜ್ ಬಣ್ಣಗಳನ್ನು ಹೊಂದಿರಲಿದೆ.

ಇವುಗಳ ಜೊತೆಗೆ ನ್ಯಾವಿಗೇಶನ್ ಹೊಂದಿರುವ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ, ಪೆಡಲ್‍ಶಿಫ್ಟರ್, 7 ಏರ್‍ಬ್ಯಾಗ್, ಬ್ರೇಕ್ ಅಸಿಸ್ಟ್ ಹೊಂದಿರುವ ವೆಹಿಕಲ್ ಸ್ಟಾಬಿಲಿಟಿ, ಹಿಲ್ ಅಸಿಸ್ಟ್ ಕಂಟ್ರೋಲ್, ಇಬಿಡಿ ಹೊಂದಿರುವ ಎಬಿಎಸ್ ನೀಡಲಾಗುವುದು.

ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಎಸ್‍ಯುವಿಯ ಬೆಲೆಯು ಬಿಎಸ್ 4 ಎಂಜಿನ್ ಹೊಂದಿದ್ದ ಎಸ್‍ಯುವಿಯ ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿರಲಿದೆ. ಟೊಯೊಟಾ ಇನೊವಾ ಡೀಸೆಲ್ ಮಾದರಿಯ ಬೆಲೆಯನ್ನು ರೂ.39,000 ದಿಂದ ರೂ.1.12 ಲಕ್ಷದವರೆಗೂ ಏರಿಕೆ ಮಾಡಲಾಗಿದೆ.

ಇದರಿಂದಾಗಿ ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಫಾರ್ಚೂನರ್ ಬೆಲೆಯು ಸಹ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಮಾರುಕಟ್ಟೆಯಲ್ಲಿರುವ ಬಿಎಸ್ 4 ಎಂಜಿನ್ ಹೊಂದಿರುವ ಫಾರ್ಚೂನರ್ ಎಸ್‍ಯುವಿಯ ಪೆಟ್ರೋಲ್ ಆವೃತ್ತಿಯ ಬೆಲೆ ರೂ.28.18 ಲಕ್ಷದಿಂದ ರೂ.29.77 ಲಕ್ಷಗಳಾದರೆ, ಡೀಸೆಲ್ ಆವೃತ್ತಿಯ ಬೆಲೆ ರೂ.30.19 ಲಕ್ಷದಿಂದ ರೂ.34.20 ಲಕ್ಷಗಳಾಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.


Click it and Unblock the Notifications