ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯ ಆಫ್ ರೋಡ್ ಪರ್ಫಾಮೆನ್ಸ್ ವೀಡಿಯೋ ಬಿಡುಗಡೆ
ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಇದೀಗ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯ ಆಫ್-ರೋಡ್ ಪರ್ಫಾಮೆನ್ಸ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೋದಲ್ಲಿ ಕೆಸರಿ ತುಂಬಿದ ರಸ್ತೆಯಲ್ಲಿ ಸಾಗುವುದನ್ನು ಪ್ರದರ್ಶಿಸಿದ್ದಾರೆ. ಕೆಸರು ತುಂಬಿರುವ ಎತ್ತರದ ಪ್ರದೇಶವನ್ನು ಉತ್ತಮ ಗ್ರಿಪ್ ನೊಂದಿಗೆ ಮುನ್ನುಗುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಫಾರ್ಚೂನರ್ ಲೆಜೆಂಡರ್ ಹೆಸರಿಗೆ ತಕ್ಕೆಂತೆ ಲೆಜೆಂಡ್ ಎಂದು ಹೇಳಬಹುದು. ಆಫ್-ರೋಡ್ ಪ್ರಿಯರಿಗೆ ಹೇಳಿ ಮಾಡಿಸಿದ ಎಸ್‍ಯುವಿಯಾಗಿದೆ. ಆನ್-ರೋಡ್ ಮತ್ತು ಆಫ್-ರೋಡ್ ಎರಡು ವಿಭಾಗದಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ವೀಡಿಯೋದಲ್ಲಿ ಲೆಜೆಂಡರ್ ಎಸ್‍ಯುವಿಯು ಆರಂಭದಲ್ಲಿ ಕೆಸರು ತುಂಬಿದ ರಸ್ತೆಗಳಲ್ಲಿ ಚಲಿಸುತ್ತದೆ. ಇದು ಸರಾಗವಾಗಿ ಯಾವುದೇ ಕಷ್ಟವಿಲ್ಲದೇ ಸಾಮಾನ್ಯ ರಸ್ತೆಗಲ್ಲಿ ಚಲಿಸುವಂತೆ ಚಲಿಸುತ್ತದೆ.

ಸ್ವಲ್ಪ ದೂರ ಸಾಗಿದ ನಂತರ ಪೂರ್ತಿಯಾಗಿ ಕೆಸರಿನ ತುಂಬಿದ ಎತ್ತರದ ಪ್ರದೇಶಗಳನ್ನು ತಲುಪುತ್ತದೆ. ಪೂರ್ತಿಯಾಗಿ ಕೆಸರಿ ತುಂಬಿದ ಪ್ರದೇಶ ತುಂಬಾ ಜಾರುವ ರೀತಿ ಸನ್ನಿವೇಷ ಎದುರಾಗುತ್ತದೆ. ಜಾರಿ ಹಿಂದೆ ಬರಬಹುದು ಎನ್ನುವಂತೆ ಇದ್ದರು ಕೆಸರಿನ ರಸ್ತೆಯಲ್ಲಿ ಉತ್ತಮ ಗ್ರಿಪ್ ನಿಂದ ಸವಾಲು ಒಡ್ಡುವ ರೀತಿಯಲ್ಲೇ ಮುಂದೆ ಸಾಗುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಕೆಸರಿನಿಂದ ತುಂಬಿದ ಎತ್ತರದ ಪ್ರದೇಶವನ್ನು ಏರುವಾಗ ತನ್ನ ಟ್ರ್ಯಾಕ್ಷನ್ ಕಂಟ್ರೋಲ್ ಪಡೆದುಕೊಳ್ಳಲು ಹೆಣಗಾಡುತ್ತದೆ. ಎಸ್‍ಯುವಿಯ ಟಯರುಗಳು ಕೆಸರಿನಲ್ಲಿ ಪೂರ್ತಿಯಾಗಿ ತಿರುಗುತ್ತಿದೆ. ಆದರೆ ಇದನ್ನು ಚಾಲಾಯಿಸಿದವನು ನುರಿತ ಚಾಲಕವೆಂದು ತೋರುತ್ತದೆ.

ಅವನು ಸ್ವಲ್ಪ ಗ್ರಿಪ್ ಕಡೆ ಎಸ್‍ಯುವಿಯನ್ನು ತಿರುಗಿಸಿ ಮುಂದೆ ಸಾಗುತ್ತಾನೆ. ಅಲ್ಲಿ ಎಲೆಕ್ಟ್ರಾನಿಕ್ಸ್ ಚಾಲಕನಿಗೆ ಸುರಕ್ಷಿತ ವೇಗವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ಸಮರ್ಥ ಆಫ್-ರೋಡರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಟೊಯೊಟಾ ಕಂಪನಿಯ ಎಸ್‍ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ. ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯು ಮುಂಭಾಗ ಹೊಸ ವಿನ್ಯಾಸವನ್ನು ಹೊಂದಿದೆ.

ಈ ಎಸ್‍ಯುವಿಯಲ್ಲಿ ಡೇ ಟೈಮ್ ರನ್ನಿಂಗ್ ಲೈಟ್ ಹೊಂದಿರುವ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಹೆಡ್‌ಲೈಟ್, ಮೆಶ್ ಮಾದರಿಯ ದೊಡ್ಡದಾದ ಗ್ರಿಲ್ 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಎಲ್ಇಡಿ ಆಂಬಿಯೆಂಟ್ ಲೈಟಿಂಗ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು 360 ಡಿಗ್ರಿ ಕ್ಯಾಮೆರಾ. 7 ಏರ್‌ಬ್ಯಾಗ್‌ಗಳು ಮತ್ತು ಸಾಮಾನ್ಯ ಸುರಕ್ಷತಾ ಫೀಚರ್‌ಗಳ ಜೊತೆಗೆ 'ಟೊಯೋಟಾ ಸೇಫ್ಟಿ ಸೆನ್ಸ್' ಅನ್ನು ಸಹ ಹೊಂದಿದೆ.

ಈ ಎಸ್‍ಯುವಿಯಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಬಹುದು. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ನೀಡುತ್ತದೆ.

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್‍ಯುವಿಯಾಗಿದೆ. ಈ ಟೊಯೊಟಾ ಫಾರ್ಚೂನರ್ ತನ್ನ ಉತ್ತಮ ಸಾಮರ್ಥ್ಯದಿಂದ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಇನ್ನು ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಲಾಗಿತ್ತು.


Click it and Unblock the Notifications