ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಎರಡು ದೈತ್ಯ ಕಾರು ತಯಾರಕ ಕಂಪನಿಗಳಾದ ಟೊಯೊಟಾ ಹಾಗೂ ಮಾರುತಿ ಸುಜುಕಿ ಸಹಭಾಗಿತ್ವವನ್ನು ಹೊಂದಿವೆ. ಈ ಸಹಭಾಗಿತ್ವದಲ್ಲಿ ತಯಾರಾದ ಮೊದಲ ಕಾರು ಟೊಯೊಟಾ ಗ್ಲಾಂಝಾ. ಟೊಯೊಟಾ ಗ್ಲಾಂಝಾ, ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ರಿಫ್ರೆಶ್ ಆವೃತ್ತಿಯಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಟೊಯೊಟಾ ಗ್ಲಾಂಝಾ, ಬಹುತೇಕ ಮಾರುತಿ ಸುಜುಕಿ ಬಲೆನೊ ರೀತಿ ಕಾಣುತ್ತದೆ. ಆದರೆ ಹೊಸ ಫ್ರಂಟ್ ಗ್ರಿಲ್ ಹಾಗೂ ಹೊಸ ಬ್ಯಾಡ್ಜ್‌ಗಳೊಂದಿಗೆ, ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಬಲೆನೊ ಕಾರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಟೊಯೊಟಾ ಗ್ಲಾಂಝಾ, ಬಲೆನೊ ಕಾರಿನಷ್ಟು ಜನಪ್ರಿಯತೆಯನ್ನು ಹೊಂದಿಲ್ಲವಾದರೂ ಉತ್ತಮವಾಗಿ ಮಾರಾಟವಾಗುತ್ತಿದೆ. ಟೊಯೊಟಾ ಗ್ಲಾಂಝಾ ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಟೊಯೊಟಾ ಗ್ಲಾಂಝಾ 25,000 ಯುನಿಟ್‌ಗಳ ಮಾರಾಟದ ಹೊಸ ಮೈಲಿಗಲ್ಲನ್ನು ದಾಟಿದೆ. ಮಾರ್ಚ್‌ ತಿಂಗಳಿನಲ್ಲಿ ಈ ಮೈಲಿಗಲ್ಲನ್ನು ತಲುಪಿದೆ. ಬಿಡುಗಡೆಯಾದ 10 ತಿಂಗಳಲ್ಲಿ ಗ್ಲಾಂಝಾದ 25,002 ಯೂನಿಟ್ ಗಳು ಮಾರಾಟವಾಗಿವೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಮಾರ್ಚ್‌ ತಿಂಗಳಿನಲ್ಲಿ ಗ್ಲಾಂಝಾದ 2,104 ಯೂನಿಟ್ ಗಳು ಮಾರಾಟವಾಗಿವೆ. ಇದರಿಂದಾಗಿ ಗ್ಲಾಂಝಾದ ಒಟ್ಟು ಮಾರಾಟವು 25 ಸಾವಿರಕ್ಕೆ ಏರಿದೆ. ಟೊಯೊಟಾ ಗ್ಲಾಂಝಾ, ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಎಲೈಟ್ ಐ20 ಹಾಗೂ ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಮಾರುತಿ ಸುಜುಕಿ ಬಲೆನೊ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಿದರೆ, ಗ್ಲಾಂಝಾ ಕಾರ್ ಅನ್ನು ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಬಿಎಸ್ 6 ನಿಯಮಗಳು ಜಾರಿಯಾದ ನಂತರ ಬಲೆನೊ ಹಾಗೂ ಗ್ಲಾಂಝಾ ಕಾರುಗಳನ್ನು ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯ 1.2-ಲೀಟರಿನ ಕೆ 12 ಬಿ, ಬಿಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಈ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಗ್ರಾಹಕರು ಎಸ್‌ಎಸ್‌ವಿಎಸ್ 1.2-ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್-ವಿವಿಡಿಐ ಪೆಟ್ರೋಲ್ ಮಾದರಿಯನ್ನು ಸಹ ಖರೀದಿಸಬಹುದು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಟೊಯೊಟಾ ಗ್ಲಾಂಝಾ

ಈ ಎಂಜಿನ್ 90 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಝಾ ಕಾರುಗಳು ಹೆಚ್ಚಿನ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿವೆ. ಗ್ಲಾಂಝಾದ ನಂತರ ಟೊಯೊಟಾ-ಸುಜುಕಿ ಸಹಭಾಗಿತ್ವದಲ್ಲಿ ಇನ್ನೂ ಹಲವು ಕಾರುಗಳು ಬಿಡುಗಡೆಯಾಗಲಿವೆ.

More from DriveSpark

Article Published On: Thursday, April 2, 2020, 15:56 [IST]
English summary
Toyota Glanza premium hatchback sales cross 25000 mark. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+