ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಹ್ಯಾರಿಯರ್ ಎಸ್‍ಯುವಿಯನ್ನು ಇತ್ತಿಚೆಗೆ ಜಪಾನಿನ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ, ಕೂಪ್ ಶೈಲಿಯ ಈ ಎಸ್‍ಯುವಿಯನ್ನು 2020ರ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಈ ಹೊಸ ಟೊಯೊಟಾ ಎಸ್‍ಯುವಿಯನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಚೀನಾ ಅಥವಾ ಇತರ ಮಾರುಕಟ್ಟೆಯಲ್ಲಿ ಈ ಎಸ್‍ಯುವಿಯನ್ನು ಟೊಯೊಟಾ ಫ್ರಂಟ್‌ಲ್ಯಾಂಡರ್ ಎಂಬ ಹೊಸ ಹೆಸರಿನಲ್ಲಿ ಬಿಡುಗಡೆಗೊಳಿಸಲಿದೆ. 1990ರಲ್ಲಿ ಹ್ಯಾರಿಯರ್ ಎಸ್‍ಯುವಿಯನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಅನಾವರಣಗೊಳಿಸಿದ ಎಸ್‍ಯುವಿಯು ನಾಲ್ಕನೇ ತಲೆಮಾರಿನ ಮಾದರಿಯಾಗಿದೆ. ಟೊಯೊಟಾ ಹ್ಯಾರಿಯರ್ ಮಾಡ್ಯುಲರ್ ಟಿಎನ್‌ಜಿಎ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ.

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಹೊಸ ತಲೆಮಾರಿನ ಎಸ್‍ಯುವಿಯು ಸ್ಲೀಕರ್ ವಿನ್ಯಾಸ ಅಂಶಗಳು ಮತ್ತು ಕೂಪ್ ಸಿಲೂಯೆಟ್ ಅನ್ನು ಹೊಂದಿದೆ. ಹ್ಯಾರಿಯರ್ ಎಸ್‍ಯುವಿಯಲ್ಲಿ ಉದ್ದವಾದ ಬಾನೆಟ್ ಅನ್ನು ಅಳವಡಿಸಲಾಗಿದೆ. ಜೆ-ಆಕಾರದ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಲ್ಇಡಿ-ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಸ್ಲಿಮ್ ಎಲ್ಇಡಿ ಟೈಲ್ ಲೈಟ್ ಗಳನ್ನು ಹೊಂದಿದೆ.

MOST READ: ಇನ್ನು ಪಾಕಿಸ್ತಾನದಲ್ಲಿ ಮಾರಟವಾಗುವುದಿಲ್ಲ ಜನಪ್ರಿಯ ಮಾರುತಿ ಸಿಯಾಜ್ ಕಾರು

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಹೊಸ ಟೊಯೊಟಾ ಎಸ್‍ಯುವಿಯ ಇಂಟಿರಿಯರ್‍ನಲ್ಲಿ 12.3-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಇದರ ಕೆಳಗೆ ಟಚ್ ಸೆನ್ಸಿಟಿವ್ ಹೆಚ್‌ವಿಎಸಿ ಕಂಟ್ರೋಲ್‍ ಅನ್ನು ಹೊಂದಿದೆ.

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಇನ್ನು ಈ ಹ್ಯಾರಿಯರ್ ಎಸ್‍ಯುವಿಯ ಇಂಟಿರಿಯರ್‍‍ನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ದೊಡ್ಡ ಎಂಐಡಿ ಡಿಸ್‍ಪ್ಲೇ ಎರಡು ಬದಿಯಲ್ಲಿ ಟ್ವಿನ್ ಡಯಲ್‌ಗಳನ್ನು ಹೊಂದಿದೆ. ಇದರೊಂದಿಗೆ ಎಲೆಕ್ಟ್ರೋಕ್ರೊಮಿಕ್ ಪನೋರಮಿಕ್ ಸನ್‌ರೂಫ್, ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು ಡಿಜೆಟಲ್ ರೇರ್ ವ್ಯೂ ಮಿರರ್ ಮತ್ತು ಇತರ ಫೀಚರ್‍ಗಳನ್ನು ಹೊಂದಿದೆ.

MOST READ: ಹೊಸ ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಟೊಯೊಟಾ ಹ್ಯಾರಿಯರ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್‍ ಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ 2.0-ಲೀಟರ್ ಡೈರೆಕ್ಟ್-ಇಂಜೆಕ್ಷನ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಈ ಎಂಜಿನ್ 170 ಬಿಹೆಚ್‌ಪಿ ಪವರ್ ಮತ್ತು 207 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಡೈರೆಕ್ಟ್-ಶಿಫ್ಟ್ ಸಿವಿಟಿಯನ್ನು ಜೋಡಿಸಲಾಗಿದೆ. ಇನ್ನು ಹೈಬ್ರಿಡ್ ಆವೃತ್ತಿಯಲ್ಲಿ 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಈ ಎಂಜಿನ್ 175 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂಭಾಗದ ಟಯರ್‍ನೊಂದಿಗೆ 88ಕಿ.ವ್ಯಾಟ್ ಮೋಟರ್‍ಗೆ ಜೋಡಿಸಲಾಗಿದೆ. ಎರಡು ಆವೃತ್ತಿಗಳನ್ನು ಆಲ್-ವೀಲ್ ಡ್ರೈವ್‌ ಸಿಸ್ಟಂ ಅನ್ನು ಹೊಂದಿದೆ.

ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಟೊಯೊಟಾ ಹ್ಯಾರಿಯರ್ ಎಸ್‍ಯುವಿ

ಸದ್ಯಕ್ಕೆ ಭಾರತದಲ್ಲಿ ಟೊಯೊಟಾ ಹ್ಯಾರಿಯರ್ ಅನ್ನು ಬಿಡುಗಡೆಗೊಳಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಟೊಯೊಟಾ ಕಂಪನಿಯು ಹೊಸ ಫಾರ್ಚೂನರ್ ಫೇಸ್‌ಲಿಫ್ಟ್‌ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Harrier likely to be called Frontlander outside Japan. Read in Kannada.
Story first published: Saturday, May 9, 2020, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X