ಇನೋವಾ ಕ್ರಿಸ್ಟಾ ಬಿಎಸ್-6 ವರ್ಷನ್‌ನಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳಿದ ಟೊಯೊಟಾ
ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ತರಲಾಗಿರುವ ಬಿಎಸ್-6 ಎಮಿಷನ್‌ನಿಂದಾಗಿ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಕಾರು ಮಾದರಿಗಳು ಮಾರಾಟದಿಂದ ಸ್ಥಗಿತವಾಗಿದ್ದು, ಟೊಯೊಟಾ ಕೂಡಾ ತನ್ನ ಜನಪ್ರಿಯ ಇನೋವಾ ಕ್ರಿಸ್ಟಾ ಮಾದರಿಯಲ್ಲಿನ 2.8-ಲೀಟರ್ ಡೀಸೆಲ್ ಎಂಜಿನ್ ತೆಗೆದುಹಾಕಿದೆ.

ಹೌದು, ಹೊಸ ಎಮಿಷನ್‌ನಿಂದಾಗಿ ಉನ್ನತೀಕರಣಗೊಳ್ಳಲು ಸಾಧ್ಯವಿಲ್ಲದ ಹಲವು ಡೀಸೆಲ್ ಎಂಜಿನ್ ಮಾದರಿಗಳು ಸ್ಥಗಿತಗೊಂಡಿದ್ದು, ಟೊಯೊಟಾ ಮಾತ್ರವಲ್ಲದೇ ಹಲವಾರು ಜನಪ್ರಿಯ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಮಾರಾಟದಿಂದ ಸ್ಥಗಿತಗೊಳಿಸಿ ಹೊಸ ಎಂಜಿನ್ ಜೋಡಣೆ ಪಡೆದುಕೊಂಡಿವೆ. ಇದೀಗ ಇನೋವಾ ಕ್ರಿಸ್ಟಾದಲ್ಲೂ ಕೂಡಾ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೈ ಎಂಡ್ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ 2.8-ಲೀಟರ್ ಡೀಸೆಲ್ ವರ್ಷನ್ ಸ್ಥಗಿತಗೊಳಿಸಲಾಗಿದೆ.

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾದಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಲಾಗಿದೆ.

ಹೊಸ ಎಮಿಷನ್ ಜೊತೆ ಬಿಎಸ್-6 ಇನೋವಾ ಕ್ರಿಸ್ಟಾ ಕಾರುಗಳಲ್ಲಿ ಈ ಬಾರಿ ಹಿಲ್ ಸ್ಟಾರ್ಟ್ ಅಸಿಸ್ಟ್, ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕ್ ಸಿಗ್ನಲ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಬಿಎಸ್-4 ಮಾದರಿಗಿಂತ ಬಿಎಸ್-6 ಆವೃತ್ತಿಯು ರೂ. 1.32 ಲಕ್ಷದಷ್ಟು ದುಬಾರಿಯಾಗಿದೆ.

ಇನ್ನು ಮಲ್ಟಿ ಪ್ಯಾಸೆಂಜರ್ ವೆಹಿಕಲ್ ಮಾರಾಟ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಕಾರು ದುಬಾರಿ ಬೆಲೆ ಹೊಂದಿದ್ದರು ಸಹ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, 2006ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಆವೃತ್ತಿಯು ಇದುವರೆಗೆ ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ. ಇನೋವಾ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ 15 ವರ್ಷ ಪೂರೈಸಿದ್ದು, ಮೊದಲ ಬಾರಿಗೆ ಬಿಡುಗಡೆಗೊಂಡಾಗ ಇದ್ದ ಬೇಡಿಕೆಯು ಇದುವರೆಗೂ ಕಡಿಮೆಯಾಗಿಲ್ಲ.

ಕಾಲ ಕಾಲಕ್ಕೆ ತಕ್ಕಂತೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬದಲಾವಣೆಯೊಂದಿಗೆ ಮಾರಾಟವಾಗುತ್ತಿರುವ ಇನೋವಾ ಆವೃತ್ತಿಯು ಕಳೆದ 2018ರಲ್ಲಿ ಇನೋವಾ ಕ್ರಿಸ್ಟಾ ಮಾದರಿಯಾಗಿ ಮಾರಾಟಗೊಳ್ಳುತ್ತಿದೆ. ಕೈಗೆಟುಕುವ ಬೆಲೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವುದೇ ಬೇಡಿಕೆಗೆ ಪ್ರಮುಖ ಕಾರಣವಾಗಿದೆ.

ಬಿಡುಗಡೆಯ ದಿನದಿಂದ ಇದುವರೆಗೆ ಪ್ರತಿ ತಿಂಗಳು ಸರಾಸರಿಯಾಗಿ 4,500ರಿಂದ 5 ಸಾವಿರ ಯುನಿಟ್ ಮಾರಾಟಗೊಂಡಿದ್ದು, ಇದುವರೆಗೆ 9 ಲಕ್ಷ ಯುನಿಟ್ ಮಾರಾಟಗೊಳ್ಳುವ ಮೂಲಕ ಎಂಪಿವಿ ಕಾರಗಳ ಮಾರಾಟದಲ್ಲೇ ಹೊಸ ದಾಖಲೆಗೆ ಕಾರಣವಾಗಿದೆ.

ಇನೋವಾ ಕ್ರಿಸ್ಟಾ ಕಾರು ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.14 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.06 ಲಕ್ಷ ಬೆಲೆ ಹೊಂದಿದೆ.

ಇದರಲ್ಲಿ ಸಾಮಾನ್ಯ ಕಾರು ಮಾದರಿಗಿಂತಲೂ 15 ವರ್ಷಗಳ ಸಂಭ್ರಮಕ್ಕಾಗಿ ಪರಿಚಯಿಸಲಾಗಿರುವ ಲೀಡರ್‌ಶಿಪ್ ಎಡಿಷನ್‌ಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.21.21 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹೊಸ ಕಾರಿನ ಬೆಲೆಯು ಸಾಮಾನ್ಯ ವಿಎಕ್ಸ್ ವೆರಿಯೆಂಟ್ ಮಾದರಿಗಿಂತಲೂ ರೂ.61 ಸಾವಿರದಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆಮಾಡಲಾಗಿದೆ.

ಲೀಡರ್‌ಶಿಪ್ ಎಡಿಷನ್ ಕಾರಿನಲ್ಲಿ ಟೊಯೊಟಾ ಸಂಸ್ಥೆಯು ಬಿಎಸ್-6 ಎಂಜಿನ್ ಅಳವಡಿಕೆ ಮಾಡಿದ್ದು, ಹೊಸ ಕಾರಿನ ಹೊರ ಮತ್ತು ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಸ್ಪೆಷಲ್ ಎಡಿಷನ್‌ನಲ್ಲಿ ಹೆಚ್ಚುವರಿಯಾಗಿ ಕ್ರೋಮ್ ಗಾರ್ನಿಶ್, ಕಾರಿನ ಎರಡು ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಲೀಡರ್‌ಶಿಪ್ ಬ್ಯಾಡ್ಜ್, ಕಪ್ಪು ಬಣ್ಣದ ಹೊರ ಕವಚ ಹೊಂದಿರುವ 17-ಇಂಚಿನ ಅಲಾಯ್ ಚಕ್ರಗಳು, ರಿಯರ್ ಸ್ಪಾಯ್ಲರ್, ಸೈಡ್ ಸ್ಕರ್ಟ್ ಮತ್ತು ಫ್ರಂಟ್ ಲಿಪ್ಸ್‌ಗಳನ್ನ ನೀಡಲಾಗಿದೆ.


Click it and Unblock the Notifications