ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಟೊಯೊಟಾ ಸಂಸ್ಥೆಯು ಸದ್ಯ ಬಿಎಸ್-6 ಕಾರುಗಳ ಮಾರಾಟಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಹೊಸ ಕಾರುಗಳ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸುತ್ತಿದೆ. ಅದರಲ್ಲೂ ಇನೋವಾ ಕ್ರಿಸ್ಟಾ ಎಂಜಿನ್ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆ ಪರಚಯಿಸಿರುವ ಟೊಯೊಟಾ ಸಂಸ್ಥೆಯು ಇದೇ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆಯನ್ನು ನೀಡಲು ಮುಂದಾಗಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಪ್ರಸ್ತುತ ತಲೆಮಾರಿನ ಇನೋವಾ ಕ್ರಿಸ್ಟಾದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಹೈಬ್ರಿಡ್ ನೀಡುವುದಾಗಿ ಹೇಳಿಕೊಂಡಿರುವ ಟೊಯೊಟಾ ಸಂಸ್ಥೆಯು ಇದೀಗ ಸಿಎನ್‌ಜಿ ಆಯ್ಕೆಯನ್ನು ಸಹ ಪರಿಚಯಿಸುತ್ತಿದೆ. ಹೊಸ ಕಾರು ಬಿಡುಗಡೆಗೆ ಈಗಾಗಲೇ ಅಂತಿಮ ಹಂತದ ಸಿದ್ದತೆ ನಡೆದಿದ್ದು, ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಇನೋವಾ ಕ್ರಿಸ್ಟಾ ಸಿಎನ್‌ಜಿ ಆವೃತ್ತಿಯು ರೋಡ್ ಟೆಸ್ಟಿಂಗ್‌ ಪೂರ್ಣಗೊಳಿಸುತ್ತಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಬಿಎಸ್-6 ನಿಯಮದಿಂದಾಗಿ ಈಗಾಗಲೇ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದ್ದು, ಟೊಯೊಟಾ ಕೂಡಾ ಈ ನಿಟ್ಟಿನಲ್ಲಿ ಯೋಜನೆ ರೂಪಿಸುವ ಮೂಲಕ ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಇನ್ನು ಇನೋವಾ ಬಿಡುಗಡೆ ಮಾಡಿ 15 ವರ್ಷಗಳ ಸಂಭ್ರಮದಲ್ಲಿರುವ ಟೊಯೊಟಾ ಸಂಸ್ಥೆಯು ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಬಿಎಸ್-6 ಆವೃತ್ತಿಯ ಮೂಲಕ ಹೊಸ ಕಾರಿನಲ್ಲಿ ಹಲವು ಬದಲಾವಣೆಗಳೊಂದಿಗೆ ಮಾರಾಟ ಮಾಡುವುದಾಗಿ ಸುಳಿವು ನೀಡಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಟೊಯೊಟಾ ಸಂಸ್ಥೆಯು ಹೈಬ್ರಿಡ್ ಎಂಜಿನ್ ತಂತ್ರಜ್ಞಾನದಲ್ಲಿ ಈಗಾಗಲೇ ಮುಂಚೂಣಿ ಸಾಧಿಸುತ್ತಿದ್ದು, ಕ್ಯಾಮ್ರಿ ಸೆಡಾನ್ ಆವೃತ್ತಿಯಲ್ಲಿ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಮಾರಾಟ ಮಾಡುತ್ತಿದೆ. ಇದೀಗ ಬಿಎಸ್-6 ನಿಯಮದಂತೆ ಇನೋವಾ ಕ್ರಿಸ್ಟಾ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಟೊಯೊಟಾ ಸಂಸ್ಥೆಯು ಪೆಟ್ರೋಲ್ ಮಾದರಿಯಲ್ಲಿ ಹೈಬ್ರಿಡ್ ವರ್ಷನ್ ಪರಿಚಯಿಸುವ ಸಾಧ್ಯತೆಗಳಿವೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಆದರೆ ಹೊಸ ಹೈಬ್ರಿಡ್ ಎಂಜಿನ್ ಅನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ 2.7-ಲೀಟರ್ ಎಂಜಿನ್‌ನಲ್ಲಿಯೇ ನೀಡುತ್ತಾ ಅಥವಾ ಹೊಸ ಎಂಜಿನ್ ಬಿಡುಗಡೆ ಮಾಡಲಿದೆಯಾ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಆದರೂ ಹೊಸ ಕಾರಿನ ಎಂಜಿನ್‌ನಲ್ಲಿ ಅಗತ್ಯ ಬದಲಾವಣೆಯಾಗಬೇಕಿದ್ದು, ಇದು ಗ್ರಾಹಕರ ಆಯ್ಕೆಯಲ್ಲಿ ಮತ್ತೊಮ್ಮೆ ಮುಂಚೂಣಿ ಸಾಧಿಸುವುದಲ್ಲಿ ಯಾವುದೇ ಅನುಮಾನವಿಲ್ಲ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರುಗಳಿಗೆ ಸಂಕಷ್ಟ ಎದುರಾಗಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಎಂಜಿನ್ ಉನ್ನತಿಕರಿಸಬೇಕು ಇಲ್ಲವೇ ಮಾರಾಟವನ್ನೇ ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಇನೋವಾ ಕ್ರಿಸ್ಟಾ ಕಾರು ಟೂರಿಸ್ಟ್ ಮತ್ತು ವ್ಯಯಕ್ತಿಯ ಬಳಕೆಯಲ್ಲೂ ಜನಪ್ರಿಯತೆ ಹೊಂದಿದ್ದು, ಗ್ರಾಹಕರ ಬೇಡಿಕೆಯಂತೆ 2.4-ಲೀಟರ್ ಡೀಸೆಲ್, 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. ಇವುಗಳಲ್ಲಿ 2.4-ಲೀಟರ್ ಡಿಸೇಲ್ ಎಂಜಿನ್ ಮಾದರಿಯು ಟೂರಿಸ್ಟ್ ವಿಭಾಗದ ಬಳಕೆಯಲ್ಲಿ ಅತಿಹೆಚ್ಚು ಮಾರಾಟವಾಗುವ ದುಬಾರಿ ಕಾರು ಮಾದರಿಯಾಗಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಮತ್ತಷ್ಟು ದುಬಾರಿಯಾಗಲಿವೆ ಕಾರು ಬೆಲೆ..!

ಸದ್ಯ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರು ಆನ್‌ರೋಡ್ ಬೆಲೆ ಪ್ರಕಾರ ಆರಂಭಿಕವಾಗಿ ರೂ. 18.88 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.29.65 ಲಕ್ಷ ಬೆಲೆ ಹೊಂದಿದ್ದು, ಬಿಎಸ್-6 ಎಂಜಿನ್ ಜೋಡಣೆಯ ನಂತರ ಮತ್ತಷ್ಟು ದುಬಾರಿಯಾಗಲಿದೆ.

ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಮೊದಲ ಬಾರಿಗೆ ಸಿಎನ್‌ಜಿ ಆಯ್ಕೆ ನೀಡಲಿದೆ ಟೊಯೊಟಾ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ಪೆಟ್ರೋಲ್ ಕಾರಿನ ಬೆಲೆಯಲ್ಲಿ ರೂ.50 ಸಾವಿರದಿಂದ ರೂ.80 ಸಾವಿರ ದುಬಾರಿಯಾದಲ್ಲಿ, ಡೀಸೆಲ್ ಎಂಜಿನ್ ಕಾರಿನ ಬೆಲೆಯು ರೂ.1.20 ಲಕ್ಷದಿಂದ ರೂ.1.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

Article Published On: Thursday, January 16, 2020, 16:54 [IST]
English summary
Toyota Innova Crysta CNG spied. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+