2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಆವೃತ್ತಿಯ ಫೇಸ್‌ಲಿಫ್ಟ್ ವರ್ಷನ್ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಿದ್ದವಾಗುತ್ತಿದ್ದು, ಹೊಸ ಕಾರು ಮೊದಲ ಹಂತದಲ್ಲಿ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಲಿದೆ.

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

2018ರಲ್ಲಿ ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಬಿಡುಗಡೆ ಮಾಡಿದ್ದ ಟೊಯೊಟಾ ಕಂಪನಿಯು ಇದೀಗ ಫೇಸ್‌ಲಿಫ್ಟ್ ಮಾದರಿಯನ್ನು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ. ಇನೋವಾ ಕ್ರಿಸ್ಟಾ ಮಾದರಿಯು ದುಬಾರಿ ಬೆಲೆ ನಡುವೆಯೂ ಭಾರೀ ಪ್ರಮಾಣದ ಮಾರಾಟ ಸಂಖ್ಯೆಯನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಫೇಸ್‌ಲಿಫ್ಟ್ ಆವೃತ್ತಿ ಮೂಲಕ ಎಂಪಿವಿ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಇದೇ ತಿಂಗಳು 15ಕ್ಕೆ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಲಿರುವ ಫೇಸ್‌ಲಿಫ್ಟ್ ಇನೋವಾ ಕ್ರಿಸ್ಟಾ ಕಾರು ಮಾದರಿಯು ಭಾರತದಲ್ಲಿ 2021ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆ ಪಡೆದುಕೊಂಡಿದೆ.

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರು ಆವೃತ್ತಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದ್ದು, ಕಾರಿನ ಹೊರ ಮತ್ತು ಒಳ ಭಾಗದ ವಿನ್ಯಾಸಗಳಲ್ಲಿ ಮಹತ್ವದ ಬದಲಾವಣೆಗಳಾಗಿರುವುದು ರೋಡ್ ಟೆಸ್ಟಿಂಗ್ ಬಹಿರಂಗವಾಗಿದೆ.

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಮರವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್ಸ್ ಒಳಗೊಂಡ ಫ್ರಂಟ್ ಫಾಸಿಯಾ, ಮರುವಿನ್ಯಾಸಗೊಂಡ ಗ್ರಿಲ್ ಮತ್ತು ಬಂಪರ್, ಹೊಸ ಮಾದರಿಯ ಟೈಲ್ ಲ್ಯಾಂಪ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ನೀಡಲಾಗುತ್ತಿದ್ದು, ಹಿಂಭಾಗದ ಬಂಪರ್ ವಿನ್ಯಾಸದಲ್ಲಿ ಯಾವುದೇ ಹೊಸ ಬದಲಾವಣೆ ತಂದಿಲ್ಲ.

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಗೊಂಡಿದ್ದು, ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಎಂಜಿನ್ ಆಯ್ಕೆ ಮಾತ್ರ ಸದ್ಯ ಮಾರುಕಟ್ಟೆಯಲ್ಲಿನ ಮಾದರಿಯಂತೆ ಮುಂದುವರಿಯಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾ ಎಂಪಿವಿ ಕಾರಿನಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಿದೆ.

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಇದರ ಬೆನ್ನಲ್ಲೇ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಹೊಸ ಕಾರಿನಲ್ಲಿ ಸಿಎನ್‌ಜಿ ಆಯ್ಕೆಯನ್ನು ನೀಡಲು ಸಿದ್ದತೆ ನಡೆಸಲಾಗುತ್ತಿದ್ದು, ಸಿಎನ್‌ಜಿ ಆವೃತ್ತಿಯು ಡೀಸೆಲ್ ಕಾರಿಗಿಂತಲೂ ತುಸು ಹೆಚ್ಚಿನ ಮಟ್ಟದ ಮೈಲೇಜ್ ವೈಶಿಷ್ಟ್ಯತೆಯೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

2021ರ ಟೊಯೊಟಾ ಇನೋವಾ ಕ್ರಿಸ್ಟಾ ಬಿಡುಗಡೆ ಮಾಹಿತಿ ಬಹಿರಂಗ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ಜಾರಿಗೆ ತರಲಾಗಿದ್ದು, ಹೊಸ ನಿಯಮ ಅನುಸಾರವಾಗಿ ಬಹುತೇಕ ಕಾರು ಮಾದರಿಗಳು ಈಗಾಗಲೇ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿವೆ. ಟೊಯೊಟಾ ಕೂಡಾ ಇನೋವಾ ಕ್ರಿಸ್ಟಾ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

Article Published On: Sunday, October 11, 2020, 8:45 [IST]
English summary
Toyota is all set to reveal 2021 Innova Crysta globally. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+