ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಇನೊವಾ ಕ್ರಿಸ್ಟಾ ಭಾರತದ ಎಂಪಿವಿ ಕಾರು ಸೆಗ್‍‍ಮೆಂಟಿನಲ್ಲಿರುವ ಪ್ರಮುಖ ಕಾರುಗಳಲ್ಲಿ ಒಂದಾಗಿದೆ. ಈ ಸೆಗ್‍‍ಮೆಂಟ್‍‍ನಲ್ಲಿ ಇನೊವಾ ಕ್ರಿಸ್ಟಾಗೆ ಕಿಯಾದ ಕಾರ್ನಿವಾಲ್ ಹಾಗೂ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ತೀವ್ರ ಪೈಪೋಟಿಯನ್ನು ನೀಡುತ್ತಿವೆ.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಇದರಿಂದಾಗಿ ಇನೊವಾ ಕ್ರಿಸ್ಟಾದ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಇದರಿಂದಾಗಿ ಟೊಯೊಟಾ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು ಮತ್ತೊಂದು ವಿಶೇಷ ಮಾದರಿಯ ಕಾರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ಕಾರ್ ಅನ್ನು ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು. ಲೀಡರ್‍‍ಶಿಪ್ ಎಡಿಷನ್ ಕಾರಿನ ಜೊತೆಗೆ ಟೊಯೊಟಾ ಇನೊವಾ ಕ್ರಿಸ್ಟಾದ ವಿ‍ಎಕ್ಸ್ ಮಾದರಿಯನ್ನು ಸಹ ಬಿಡುಗಡೆಗೊಳಿಸಲಾಗುವುದು.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಲೀಡರ್‍‍ಶಿಪ್ ಎಡಿಷನ್ ಮಾದರಿಯನ್ನು ಎರಡು ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಮಾದರಿಯ ಕಾರು ಬಿಳಿ ಹಾಗೂ ಕೆಂಪು ಬಣ್ಣದ ಜೊತೆಗೆ ಕಪ್ಪು ಬಣ್ಣದ ರೂಫ್ ಅನ್ನು ಹೊಂದಿರಲಿದೆ. ಈ ಮಾದರಿಯು ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್, ಡ್ಯುಯಲ್ ಕಲರ್ ಅಲಾಯ್ ವ್ಹೀಲ್, ರೇರ್ ಸ್ಪಾಯಿಲರ್, ಸೈಡ್ ಸ್ಕರ್ಟ್ ಹಾಗೂ ಮುಂಭಾಗದ ಬಂಪರ್‍‍ಗಾಗಿ ಹೆಚ್ಚುವರಿ ಆಕ್ಸೆಸರೀಸ್ ಹೊಂದಿರಲಿದೆ.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಲೀಡರ್‍‍ಶಿಪ್ ಎಡಿಷನ್‍‍ಗಾಗಿ ಕಾರಿನ ಹಿಂಭಾಗದಲ್ಲಿ ವಿಶೇಷವಾದ ಬ್ಯಾಡ್ಜ್ ಅನ್ನು ಅಳವಡಿಸಲಾಗುವುದು. ಇಂಟಿರಿಯರ್‍‍ನಲ್ಲಿ ಕಪ್ಪು ಬಣ್ಣದ ಥೀಮ್ ನೀಡಲಾಗುವುದು. ಇದು ಈ ಕಾರಿಗೆ ಪ್ರೀಮಿಯಂ ಅಂಶವನ್ನು ನೀಡಲಿದೆ.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ಕಾರು ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹೊಂದಿರುವ 7.0 ಇಂಚಿನ ಟಚ್ ಸ್ಕ್ರೀನ್, ಕ್ಲೈಮೆಟ್ ಕಂಟ್ರೋಲ್ ಎಸಿ, ಪುಶ್ ಬಟನ್ ಸ್ಟಾರ್ಟ್, ಕ್ರೂಸ್ ಕಂಟ್ರೋಲ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ ಹಾಗೂ ಆಟೋ ಫೋಲ್ಡಿಂಗ್ ಸೈಡ್ ವೀವ್ ಮಿರರ್‍‍ಗಳನ್ನು ಹೊಂದಿರಲಿದೆ.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಕಾರಿನಲ್ಲಿ 2.4 ಲೀಟರಿನ ಬಿ‍ಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಹಾಗೂ 343 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡ್‍‍ನ ಮ್ಯಾನುವಲ್ ಗೇರ್‍‍ಬಾಕ್ಸ್ ಅಥವಾ 6 ಸ್ಪೀಡ್‍‍ನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗುವುದು.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಹೊಸ ಟೊಯೊಟಾ ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಕಾರು 7 ಏರ್‍‍ಬ್ಯಾಗ್, ಇಬಿ‍ಡಿ ಹೊಂದಿರುವ ಎ‍‍ಬಿ‍ಎಸ್ ಬ್ರೇಕ್ ಸಿಸ್ಟಂ, ವೆಹಿಕಲ್ ಸ್ಟಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಎಮರ್ಜೆನ್ಸಿ ಬ್ರೇಕ್ ಸಿಗ್ನಲ್‍‍ಗಳನ್ನು ಹೊಂದಿರಲಿದೆ.

ಇನೊವಾ ಕ್ರಿಸ್ಟಾ ಲೀಡರ್‍‍ಶಿಪ್ ಎಡಿಷನ್ ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ಹೊಸ ಟೊಯೊಟಾ ಇನೊವಾ ಕ್ರಿಸ್ಟಾ ಲೀಡರ್‍‍‍ಶಿಪ್ ಎಡಿಷನ್ ಮಾದರಿಯನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು. ಈ ವಿಶೇಷ ಆವೃತ್ತಿಯ ಮಾದರಿಯನ್ನು ಟೊಯೊಟಾದ ಡೀಲರ್‍‍ಶಿಪ್‍‍ಗಳಲ್ಲಿ ಮುಂಬರುವ ದಿನಗಳಲ್ಲಿ ಮಾರಾಟ ಮಾಡಲಾಗುವುದು.

Article Published On: Wednesday, March 4, 2020, 17:26 [IST]
English summary
Toyota Innova Crysta Leadership Edition to be launched in India very soon. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+