ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಆವೃತ್ತಿಯನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ಜಾರಿಗೆ ತರಲಾಗಿದ್ದು, ಹೊಸ ನಿಯಮ ಅನುಸಾರವಾಗಿ ಬಹುತೇಕ ಕಾರು ಮಾದರಿಗಳು ಈಗಾಗಲೇ ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿವೆ. ಟೊಯೊಟಾ ಕೂಡಾ ಇನೋವಾ ಕ್ರಿಸ್ಟಾ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಇನೋವಾ ಕ್ರಿಸ್ಟಾ ಕಾರು ಆವೃತ್ತಿಯು ಹೊಸ ಎಂಜಿನ್‌ನೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.15.36 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.24.06 ಲಕ್ಷ ಬೆಲೆ ಹೊಂದಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾದಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಹೊಸ ಎಮಿಷನ್ ಜೊತೆಗೆ ಇನೋವಾ ಕ್ರಿಸ್ಟಾ ಕಾರಿನಲ್ಲಿ ಈ ಬಾರಿ ಹಿಲ್ ಸ್ಟಾರ್ಟ್ ಅಸಿಸ್ಟ್, ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಎಮರ್ಜೆನ್ಸಿ ಬ್ರೇಕಿಂಗ್ ಸಿಗ್ನಲ್ ಸೌಲಭ್ಯಗಳನ್ನು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಈ ಹಿಂದಿಗಿಂತಲೂ ಹೊಸ ಕಾರು ಹೆಚ್ಚು ಬಲಶಾಲಿಯಾಗಿರುವುದಲ್ಲದೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಇನ್ನು ಹೊಸ ಎಂಜಿನ್ ಮತ್ತು ಸೇಫ್ಟಿ ಫೀಚರ್ಚ್‌ಗಳಿಂದಾಗಿ ಬಿಎಸ್-4 ಮಾದರಿಗಿಂತಲೂ ಬಿಎಸ್-6 ಆವೃತ್ತಿಯು ರೂ. 1.32 ಲಕ್ಷದಷ್ಟು ದುಬಾರಿಯಾಗಿದ್ದು, ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭವಾಗಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಜೊತೆಗೆ ಇನೋವಾ ಕಾರು ಮಾದರಿಯು ಭಾರತದಲ್ಲಿ ಪರಿಚಯಿಸಿ 15 ವರ್ಷಗಳ ಸಂಭ್ರಮಕ್ಕಾಗಿ ಇನೋವಾ ಕ್ರಿಸ್ಟಾ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿರುವ ಟೊಯೊಟಾ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗಾಗಿ ಲೀಡರ್‌ಶಿಪ್ ಎಡಿಷನ್ ಪರಿಚಯಿಸಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಸೀಮಿತ ಅವಧಿಗೆ ಮಾತ್ರ ಖರೀದಿ ಲಭ್ಯವಿರುವ ಸ್ಪೆಷನ್ ಎಡಿಷನ್ ಕಾರಿನ ಬೆಲೆಯು ಸಾಮಾನ್ಯ ವಿಎಕ್ಸ್ ವೆರಿಯೆಂಟ್ ಮಾದರಿಗಿಂತಲೂ ರೂ.61 ಸಾವಿರದಷ್ಟು ಹೆಚ್ಚಳವಾಗಿದ್ದು, ಬೆಲೆ ಹೆಚ್ಚಳಕ್ಕೆ ತಕ್ಕಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆಮಾಡಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಲೀಡರ್‌ಶಿಪ್ ಎಡಿಷನ್ ಕಾರು ಬಿಎಸ್-6 ಎಂಜಿನ್ ಜೊತೆ ಸಾಮಾನ್ಯ ಆವೃತ್ತಿಗಿಂತ ಹೊರ ಮತ್ತು ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಕ್ರೋಮ್ ಗಾರ್ನಿಶ್, ಕಾರಿನ ಎರಡು ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿ ಲೀಡರ್‌ಶಿಪ್ ಬ್ಯಾಡ್ಜ್, ಕಪ್ಪು ಬಣ್ಣದ ಹೊರ ಕವಚ ಹೊಂದಿರುವ 17-ಇಂಚಿನ ಅಲಾಯ್ ಚಕ್ರಗಳು, ರಿಯರ್ ಸ್ಪಾಯ್ಲರ್, ಸೈಡ್ ಸ್ಕರ್ಟ್ ಮತ್ತು ಫ್ರಂಟ್ ಲಿಪ್ಸ್‌ಗಳನ್ನ ನೀಡಲಾಗಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಹೊಸ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಇನೋವಾ ಕ್ರಿಸ್ಟಾ

ಸದ್ಯಕ್ಕೆ ಕರೋನಾ ವೈರಸ್ ಮಹಾಮಾರಿಯಿಂದಾಗಿ ಹೊಸ ಕಾರಿನ ವಿತರಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಮುಂದಿನ ತಿಂಗಳು ಮೇ 3ರ ನಂತರ ಹೊಸ ಕಾರಿನ ವಿತರಣೆಯು ಆರಂಭವಾಗುವ ಸಾಧ್ಯತೆಗಳಿವೆ. ಕರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಕರ್ನಾಟಕ ಸರ್ಕಾರದ ಜೊತೆ ಕೈಜೋಡಿಸಿರುವ ಟೊಯೊಟಾ ಕಂಪನಿಯು ರೂ.2 ಕೋಟಿ ದೇಣಿಗೆ ಜೊತೆಗೆ ಪಿಪಿಇ ಕಿಟ್ ಉತ್ಪಾದನೆಗೂ ಚಾಲನೆ ನೀಡಿದೆ.

Article Published On: Wednesday, April 29, 2020, 16:30 [IST]
English summary
Toyota Innova Crysta now gets new safety features as standard. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+