Just In
Don't Miss!
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ
ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಗಾಗಿ ಗ್ರಾಹಕರ ಬೇಡಿಕೆಯೆಂತೆ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಲಾಗಿದೆ.

ಆಕ್ಸೆಸರಿಸ್ ಪ್ಯಾಕೇಜ್ ಎಂಪಿವಿ ಕಾರು ಖರೀದಿದಾರರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದ್ದು, ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಹೆಚ್ಚುವರಿ ಮೊತ್ತದೊಂದಿಗೆ ಖರೀದಿ ಮಾಡಬೇಕಾಗುತ್ತದೆ. ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ನೀಡಲಾಗುವ ಬಿಡಿಭಾಗಗಳು ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡುವುದರೊಂದಿಗೆ ಕಾರಿನ ಹೊರ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಟೊಯೊಟಾ ಕಂಪನಿಯು ಹೊಸ ಕಾರಿಗಾಗಿ ಸೈಡ್ ಸ್ಟೆಪ್ಸ್, ವೀಲ್ಹ್ ಆರ್ಚ್ ಮೊಲ್ಡಿಂಗ್, ಬಂಪರ್ ಕಾರ್ನರ್ ಪ್ರೋಟೆಕ್ಟರ್, ಸೈಡ್ ಪಿ ಮೋಲ್ಡ್, ಕ್ರೋಮ್ ಡೋರ್ ಹೌಸಿಂಗ್, ರೂಫ್ ರಾಕ್, ಸೈಡ್ ವಿಸರ್, ರೂಫ್ ಒರೊನ್ಮೆಂಟ್ ಸಿಲ್ವರ್ ಸೌಲಭ್ಯಗಳನ್ನು ನೀಡಲಾಗಿದೆ.

ಜೊತೆಗೆ ಹೊಸ ಕಾರಿನ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ರೂಫ್ ಸ್ಪಾಯ್ಲರ್ ಗಾರ್ನಿಶ್, ವೆಲ್‌ಕಂ ಡೋರ್ ಲ್ಯಾಂಪ್, ವೈರ್‌ಲೆಸ್ ಚಾರ್ಜರ್, ಡಿಜಿಟಲ್ ವಿಡಿಯೋ ರೆಕಾರ್ಡರ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈರ್ ಸೌಲಭ್ಯಗಳು ಲಭ್ಯವಿದ್ದು, ಆಕ್ಸೆಸರಿಸ್‌ಗಳ ಆಧಾರದ ಮೇಲೆ ಪ್ಯಾಕೇಜ್ ಬೆಲೆ ನಿರ್ಧಾರವಾಗುತ್ತದೆ.

ಇನ್ನು 2005ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು ಮಾದರಿಯು ಕಳೆದ 2016ರಲ್ಲಿ ನ್ಯೂ ಜನರೇಷನ್ ಫೀಚರ್ಸ್‌ಗಳೊಂದಿಗೆ ಇನೋನಾ ಕ್ರಿಸ್ಟಾ ಮಾದರಿಯಾಗಿ ಬಿಡುಗಡೆಗೊಂಡಿತ್ತು. ಇದೀಗ 2021ರ ಮಾದರಿಯಾಗಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡಗಡೆ ಮಾಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.26 ಲಕ್ಷದಿಂದ ಟಾಪ್ ಎಂಡ್ ಮಾದರಿಯು 24.33 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮಾದರಿಯು ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಫೀಚರ್ಸ್ ಅಳವಡಿಕೆ ನಂತರ ಕಾರಿನ ಬೆಲೆಯು ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 60 ಸಾವಿರದಿಂದ ರೂ.70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನಲ್ಲಿ ಟೊಯೊಟಾ ಕಂಪನಿಯು ಹಲವು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಪ್ರಮುಖ ಬದಲಾವಣೆಗಾಗಿ ಕ್ರೊಮ್ ಸೌಲಭ್ಯ ಹೊಂದಿರುವ ಪಿಯಾನೊ ಬ್ಲ್ಯಾಕ್ ಬಣ್ಣದ ಟ್ರಾಪೆಜೊಡಿಯಲ್ ಫ್ರಂಟ್ ಗ್ರಿಲ್ ಮತ್ತು ಹೊಸ ವಿನ್ಯಾಸ ಫ್ರಂಟ್ ಬಂಪರ್ ಪ್ರಮುಖ ಆಕರ್ಷಣೆಯಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಬ್ಯಾನೆಟ್ ಹೊಂದಿಕೊಂಡಂತೆ ಫ್ರಂಟ್ ಗ್ರಿಲ್‌ನೊಳಗೆ ಸೇರ್ಪಡೆಯಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಡೈಮಂಡ್ ಕಟ್ ಅಲಾಯ್ ವೀಲ್ಹ್ ಮತ್ತು ಹೊಸದಾದ ಬಣ್ಣದ ಆಯ್ಕೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆಯನ್ನು ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್ ಎಂದು ಹೆಸರಿಸಿದೆ. ಇದು ಕಾರಿನ ಪ್ರೀಮಿಯಂ ಸೌಲಭ್ಯಗಳಿಗೆ ಪೂರಕವಾದ ಹೊಸ ಬಣ್ಣ ಆಯ್ಕೆಯಾಗಿದ್ದು, ಹೊರಭಾಗದಂತೆ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳಾಗಿವೆ.

ಹೊಸ ಫೇಸ್‌ಲಿಫ್ಟ್ ಕಾರಿನಲ್ಲಿ ಈ ಬಾರಿ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಸರ್ಪೋಟ್ ಮಾಡುವ ಸ್ಮಾರ್ಟ್ ಪ್ಲೇಕಾಸ್ಟ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ಟಾಪ್ ಎಂಡ್ ಮಾದರಿಯಾದ ಜೆಡ್ಎಕ್ಸ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಕ್ಯಾಮೆಲ್ ಟಾನ್ ಕಲರ್ ಲೆದರ್ ಸೀಟುಗಳನ್ನು ನೀಡಿರುವುದು ಪ್ರೀಮಿಯಂ ಲುಕ್ ಹೆಚ್ಚಿಸಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಎಂಜಿನ್ ಮತ್ತು ಪರ್ಫಾಮೆನ್ಸ್
ಬಿಎಸ್-6 ಎಮಿಷನ್ ಜಾರಿ ನಂತರ ಪರಿಚಯಿಸಲಾದ ಎಂಜಿನ್ ಮಾದರಿಯೇ ಇದೀಗ ಫೇಸ್‌ಲಿಫ್ಟ್ ಮಾದರಿಯಲ್ಲಿ ಜೋಡಿಸಲಾಗಿದ್ದು, ಇನೋವಾ ಕ್ರಿಸ್ಟಾ ಕಾರಿನಲ್ಲಿ ಗ್ರಾಹಕರು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2.7-ಲೀಟರ್ ಪೆಟ್ರೋಲ್ ಮಾದರಿಯು 164-ಬಿಎಚ್‌ಪಿ, 245-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ 2.4-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 160-ಬಿಎಚ್‌ಪಿ, 360-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಸುಧಾರಣೆ ಕಂಡಿದೆ.