ಜುಲೈ ತಿಂಗಳ ಮಾರಾಟ ವರದಿ ಪ್ರಕಟಿಸಿದ ಟೊಯೊಟಾ
ಕರೋನಾ ವೈರಸ್ ಮಹಾಮಾರಿ ಆರ್ಭಟದ ನಡುವೆ ಭಾರತದ ಆಟೋ ಮೊಬೈಲ್ ಉದ್ಯಮವು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ವಾಹನ ತಯಾರಕ ಕಂಪನಿಗಳು ತಮ್ಮ 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸುತ್ತಿವೆ.

ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಸಹ ತನ್ನ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಜುಲೈ ತಿಂಗಳಿನಲ್ಲಿ ಒಟ್ಟು 5,386 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಟೊಯೊಟಾ ಕಂಪನಿಯು ಜೂನ್ ತಿಂಗಳಿನಲ್ಲಿ 3,866 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಜೂನ್ ತಿಂಗಳಿಗೆ ಹೊಲಿಸಿದರೆ ಜುಲೈ ತಿಂಗಳ ಮಾರಾಟವು 40%ನಷ್ಟು ಹೆಚ್ಚಾಗಿದೆ.

ಆದರೆ ಕಳೆದ ವರ್ಷದ ಜುಲೈ ತಿಂಗಳ ಮಾರಾಟಕ್ಕೆ ಹೊಲಿಸಿದರೆ ಟೊಯೊಟಾ ಕಂಪನಿಯ ಮಾರಾಟವು ಈ ವರ್ಷದ ಜುಲೈ ತಿಂಗಳ ಮಾರಾಟವು 48%ನಷ್ಟು ಕಡಿಮೆಯಾಗಿದೆ. ಟೊಯೊಟಾ ಕಂಪನಿಯು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಒಟ್ಟು 10,423 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಳೆದ ವರ್ಷ ಕಂಪನಿಯು 868 ಯುನಿಟ್ ಟೊಯೊಟಾ ಎಟಿಯೋಸ್ ಕಾರುಗಳನ್ನು ರಫ್ತು ಮಾಡಿತ್ತು. ಈ ಬಗ್ಗೆ ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ನವೀನ್ ಸೋನಿರವರು ವಿವಿಧ ಸವಾಲುಗಳ ನಡುವೆಯೂ ಜುಲೈ ತಿಂಗಳ ಮಾರಾಟವು ಉತ್ತಮವಾಗಿದೆ ಎಂದು ಹೇಳಿದರು.

ಅನ್‌ಲಾಕ್ ಮಾಡಲಾದ ನಂತರ ಮತ್ತೆ ಕಂಪನಿಯ ಕಾರುಗಳಿಗೆ ಬೇಡಿಕೆ ಕಂಡುಬಂದಿದೆ. ಬಾಕಿ ಉಳಿದಿರುವ ಗ್ರಾಹಕರ ಆರ್ಡರ್ ಗಳ ಜೊತೆಗೆ ಹೊಸ ವಾಹನಗಳ ಮಾರಾಟವು ಸಹ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಆದರೂ ಸಹ ದೇಶದ ವಿವಿಧ ಭಾಗಗಳಲ್ಲಿರುವ ಲಾಕ್‌ಡೌನ್ ಹಾಗೂ ಲಾಕ್‌ಡೌನ್ ವಿಸ್ತರಣೆಗಳ ಕಾರಣದಿಂದಾಗಿ ನಮ್ಮ ವಹಿವಾಟು ಜುಲೈ ತಿಂಗಳಿನಲ್ಲಿ 20%ನಷ್ಟಿದೆ ಎಂದು ಅವರು ಹೇಳಿದರು.

ಟೊಯೊಟಾ ಕಂಪನಿಯು ಮಾರುತಿ ಬ್ರೆಝಾ ಆಧಾರಿತ ಎಸ್‌ಯುವಿ ಅರ್ಬನ್ ಕ್ರೂಸರ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಟೊಯೊಟಾ ಕಂಪನಿಯ ಈ ಹೊಸ ಕಾರು ಮಾರುತಿ ಸುಜುಕಿ ಕಂಪನಿಯೊಂದಿಗಿನ ಪಾಲುದಾರಿಕೆಯ ನಂತರ ಬಿಡುಗಡೆಯಾಗುತ್ತಿರುವ ಎರಡನೇ ಕಾರ್ ಆಗಿದೆ. ಟೊಯೊಟಾ ಕಂಪನಿಯು ಶೀಘ್ರದಲ್ಲೇ ಅರ್ಬನ್ ಕ್ರೂಸರ್ ನ ವೀಡಿಯೊ ಟೀಸರ್ ಅನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications