ಕಾರು ಮಾರಾಟ ಇಳಿಕೆ- ಇನೋವಾ ಕ್ರಿಸ್ಟಾ, ಗ್ಲಾಂಝಾ ಕಾರು ಖರೀದಿ ಮೇಲೆ ಸ್ಪೆಷಲ್ ಲೋನ್ ಆಫರ್
ಲಾಕ್‍ಡೌನ್ ಸಡಿಲಿಕೆ ನಂತರ ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ಕಂಡುಬಂದಿದ್ದರೂ ನೀರಿಕ್ಷಿತ ಮಟ್ಟದಲ್ಲಿ ಹೊಸ ವಾಹನ ಮಾರಾಟ ಪ್ರಮಾಣವು ದಾಖಲಾಗದಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ಹೊಸ ವಾಹನಗಳ ಮಾರಾಟ ಪ್ರಮಾಣವನ್ನು ಸುಧಾರಿಸಲು ಬಹುತೇಕ ಆಟೋ ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಣೆ ಮಾಡಲಾಗುತ್ತಿದ್ದು, ಟೊಯೊಟಾ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಸ್ಪೆಷಲ್ ಲೋನ್ ಆಫರ್ ಘೋಷಣೆ ಮಾಡಿದೆ. ಲಾಕ್‌ಡೌನ್‌ನಿಂದ ತಗ್ಗಿರುವ ಹೊಸ ವಾಹನ ಮಾರಾಟವನ್ನು ಸುಧಾರಿಸಲು ಹಲವು ಆಫರ್‌ಗಳನ್ನು ಸಹ ನೀಡಲಾಗುತ್ತಿದ್ದು, ಗರಿಷ್ಠ ಅವಧಿಗಾಗಿ ಲೋನ್ ಸೌಲಭ್ಯಗಳು, ಆಯ್ದ ಕಾರುಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಮತ್ತು ಕನಿಷ್ಠ ಪ್ರಮಾಣದ ಇಎಂಐ ಸೌಲಭ್ಯಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಬಹುತೇಕ ಆಟೋ ಕಂಪನಿಗಳು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ಸದ್ಯಕ್ಕೆ ಹೊಸ ಕಾರು ಖರೀದಿ ಸಾಧ್ಯವಿಲ್ಲವೆಂದು ಮುಂದೂಡುತ್ತಿರುವ ಗ್ರಾಹಕರಿಗೆ ಹೊಸ ಲೋನ್ ಆಫರ್‌ಗಳು ಸಾಕಷ್ಟು ಅನುಕೂಲಕರವಾಗಿದ್ದು, ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ ಸಾಲ ಮರುಪಾವತಿಗಾಗಿ ಸಾಕಷ್ಟು ಸಮಯಾವಕಾಶ ನೀಡಲಾಗುತ್ತಿದೆ.

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಗ್ಲಾಂಝಾ ಮತ್ತು ಇನೋವಾ ಕ್ರಿಸ್ಟಾ ಕಾರು ಖರೀದಿ ಮೇಲೆ ವಿವಿಧ ಮಾದರಿಯ ಆಫರ್ ಘೋಷಿಸಿದ್ದು, ಅತಿ ಕಡಿಮೆ ಇಎಂಐ ಮತ್ತು ಬೈಬ್ಯಾಕ್ ಆಫರ್‌ಗಳನ್ನು ಪರಿಚಯಿಸಿದೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಹೊಸ ಆಫರ್‌ಗಳಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.15 ಸಾವಿರದಷ್ಟು ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್ ಬೋನಸ್ ಮತ್ತು ಬೈಬ್ಯಾಕ್ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಅನ್ನು ಸಿಮೀತ ಅವಧಿಗಾಗಿ ಮಾತ್ರವೇ ನೀಡಲಾಗುತ್ತಿದೆ.

ಹಾಗೆಯೇ ಇನೋವಾ ಕ್ರಿಸ್ಟಾ ಕಾರು ಖರೀದಿಯ ಮೇಲೆ ಮೊದಲ ಮೂರು ತಿಂಗಳು ಮಾಸಿಕವಾಗಿ ರೂ.9,999 ಪ್ಯಾಕೇಜ್ ಹೊಂದಿರುವ ಅತಿ ಕಡಿಮೆ ಇಎಂಐ ಆಫರ್ ನೀಡಲಾಗುತ್ತಿದ್ದು, ಎಂಪಿವಿ ಕಾರು ಖರೀದಿಗೂ ಬೈಬ್ಯಾಕ್ ಆಯ್ಕೆ ನೀಡಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇನ್ನು ಗ್ಲಾಂಝಾ ಮತ್ತು ಇನೋವಾ ಕ್ರಿಸ್ಟಾ ಹೊರತುಪಡಿಸಿ ಇನ್ನುಳಿದ ಟೊಯೊಟಾ ಆಯ್ದ ಕಾರು ಮೇಲೂ ವಿವಿಧ ಮಾದರಿಯ ಆಫರ್‌ಗಳು ಲಭ್ಯವಿದ್ದು, ಕರೋನಾ ವಾರಿಯರ್ಸ್‌ಗಾಗಿ ಪ್ರತ್ಯೇಕವಾಗಿ ರೂ. 32,500 ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.


Click it and Unblock the Notifications