150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಟೊಯೊಟಾ ಕಂಪನಿಯು ತನ್ನ ತವರು ಜಪಾನ್ ನಲ್ಲಿ ಹೊಸ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದೆ. ಹೊಸ ಟೊಯೊಟಾ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರು 2 ವಯಸ್ಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ 'ಅಲ್ಟ್ರಾ ಕಾಂಪ್ಯಾಕ್ಟ್' ಎಲೆಕ್ಟ್ರಿಕ್ ವಾಹನವಾಗಿದೆ.

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಈ ಹೊಸ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರನ್ನು ಮೊದಲಿಗೆ ಸ್ಥಳೀಯ ಸರ್ಕಾರಿ ಸಂಸ್ಥೆಗಳು, ಕಾರ್ಪೊರೇಟ್ ಬಳಕೆದಾರರು ಮತ್ತು ಇತರ ಸಂಸ್ಥೆಗಳಿಗೆ ಮಾರಾಟವನ್ನು ಸೀಮಿತಗೊಳಿಸಲಾಗುವುದು, ಜನಸಾಮಾನ್ಯರಿಗಾಗಿ 2022ರಲ್ಲಿ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಹೊಸ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರು ಕೇವಲ 2,490 ಎಂಎಂ ಉದ್ದ, 1,550 ಎಂಎಂ ಎತ್ತರ ಮತ್ತು 1,290 ಎಂಎಂ ಅಗಲವನ್ನು ಹೊಂದಿದೆ.

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಟೋಕಿಯೊದಂತಹ ಹೆಚ್ಚು ಬ್ಯುಸಿಯಾದ ನಗರಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 06 ಕಿಲೋವ್ಯಾಟ್ ಲಿಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿಯು ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ನೀಡುತ್ತದೆ, ಇದನ್ನು ಹಿಂದಿನ ಆಕ್ಸಲ್‌ನಲ್ಲಿ ಸ್ಥಾಪಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಇದರ ಸಂಯೋಜಿದ ಮೋಟಾರ್ ಯುನಿಟ್ 12 ಬಿಹೆಚ್‍ಪಿ ಪವರ್ ಮತ್ತು 56 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೊಸ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರು 150 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರು ಪೂರ್ಣ ಪ್ರಮಾಣದ ಚಾರ್ಜ್ ಆಗಲು 5 ಗಂಟೆಗಳ ಸಮಯ ಅವಧಿಯನ್ನು ತೆಗೆದುಕೊಳ್ಳುತ್ತದೆ.

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಹೊಸ ಟೊಯೊಟಾ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರು ಎಕ್ಸ್ ಮತ್ತು ಜಿ ಎಂಬ 2 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ಭಾರತದ ಕರೆನ್ಸಿ ಪ್ರಕಾರ ರೂ.11.75 ಲಕ್ಷಗಳಾಗಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಇನ್ನು ಈ ಟೊಯೊಟಾ ಎಲೆಕ್ಟ್ರಿಕ್ ಕಾರು 690 ಕೆಜಿ ತೂಕವನ್ನು ಹೊಂದಿದೆ. ಟೊಯೊಟಾ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರನ್ನು ಜನಸಮಾನ್ಯರಿಗಾಗಿ ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗುತ್ತಿದೆ.

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಇನ್ನು ಭಾರತೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ ಇಲ್ಲಿ ಇಂತಹ ಮಾದರಿಗಳು ಪ್ರಸ್ತುತ ಲಭ್ಯವಿಲ್ಲ. ಇದು ಸಿಟಿಗಳಲ್ಲಿ ಉಪಯೋಗಿಸಲು ಹೆಚ್ಚು ಯೋಗ್ಯವಾಗಿದೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ನಲ್ಲಿಯು ಈ ಕಾರಿಗೆ ಹೆಚ್ಚಿನ ಜಾಗದ ಅಗತ್ಯವಿಲ್ಲ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಟೊಯೊಟಾ ಸಿ ಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರು ಹೆಚ್ಚಿನ ಗ್ರಾಹಕರ ಗಮನವನ್ನು ಸೆಳೆಯಬಹುದು. ಆದರೆ ಟೊಯೊಟಾ ಕಂಪನಿಯು ಪ್ರಸ್ತುತ ಭಾರತಕ್ಕೆ ಅಲ್ಟ್ರಾ ಕಾಂಪ್ಯಾಕ್ಟ್ ಇವಿ ತರಲು ಅಂತಹ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದು ನಾವು ಭಾವಿಸುವುದಿಲ್ಲ.

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಆದರೆ ಅಂತಹ ಮಾದರಿಗೆ ಸೂಕ್ತವಾಗಿ ಬೆಲೆಯಿದ್ದರೆ ಭವಿಷ್ಯದಲ್ಲಿ ಕೆಲವು ಆರೋಗ್ಯಕರ ಮಾರಾಟ ಸಂಖ್ಯೆಗಳೊಂದಿಗೆ ಟೊಯೊಟಾಗೆ ಸಹಾಯ ಮಾಡುತ್ತದೆ ಎಂಜಿ ಮೋಟಾರ್ ಇಂಡಿಯಾ 2020ರ ಆಟೋ ಎಕ್ಸ್‌ಪೋದಲ್ಲಿ ಎಂಜಿ ಇ200 ಎಂದು ಕರೆಯಲ್ಪಡುವ ಸಣ್ಣ ಗಾತ್ರದ 2 ಆಸನಗಳ ಎಲೆಕ್ಟ್ರಿಕ್ ಕಾರನ್ನು ಪ್ರದರ್ಶಿಸಿತ್ತು.

150 ಕಿ.ಮೀ ಮೈಲೇಜ್ ನೀಡುವ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿದ ಟೊಯೊಟಾ

ಆದರೆ ಸಣ್ಣ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಬಗ್ಗೆ ಎಂಜಿ ನಂತರದ ದಿನಗಳಲ್ಲಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿರುವುದರಿಂದ ಸಣ್ಣ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೊಳಿಸುವುದರ ಬಗ್ಗೆ ಕಾರು ತಯಾರಕರು ಒಲವು ತೋರಿಸಬಹುದು

Most Read Articles

Kannada
Read more on ಟೊಯೊಟಾ toyota
English summary
Toyota C+Pod Small Electric Car Debuts. Read In Kannada.
Story first published: Monday, December 28, 2020, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X