ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ಹೊಸ ಆಫರ್

ಟೊಯೊಟಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಹೊಸ ಅರ್ಬನ್ ಕ್ರೂಸರ್ ರೀಬ್ಯಾಡ್ಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಮುಂಗಡವಾಗಿ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ಹೊಸ ಆಫರ್ ಒಂದನ್ನು ಘೋಷಣೆ ಮಾಡಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಅರ್ಬನ್ ಕ್ರೂಸರ್ ಅಧಿಕೃತ ಬಿಡುಗಡೆಗೆ ಮುನ್ನ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೆಸ್ಪೆಕ್ಟ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಅಡಿಯಲ್ಲಿ ಕಾರು ಬಿಡುಗಡೆಗೂ ಬುಕ್ಕಿಂಗ್ ಸಲ್ಲಿಸುವ ಎಲ್ಲಾ ಗ್ರಾಹಕರಿಗೂ ಹೆಚ್ಚುವರಿಯಾಗಿ 2 ವರ್ಷಗಳ ಉಚಿತ ವಾರಂಟಿ ಆಫರ್ ಲಭ್ಯವಾಗಲಿದೆ. ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಬೆಸ್ಟ್ ಇನ್ ಫೀಚರ್ಸ್ ಪಡೆದುಕೊಳ್ಳಲಿರುವ ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಮಾಹಿತಿಗಳ ಪ್ರಕಾರ, ಹೊಸ ಅರ್ಬನ್ ಕ್ರೂಸರ್ ಕಾರು ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಎಡ್ಎಕ್ಸ್ಐ ಪ್ಲಸ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 1.5 ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಹೊಂದಿರುವ ಹೊಸ ಕಾರು ಮೂಲ ಕಾರಿನ ಬೆಲೆಗಿಂತಲೂ ತುಸು ದುಬಾರಿಯಾಗಲಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಮೂಲ ಕಾರು ಮಾದರಿಯಾದ ವಿಟಾರಾ ಬ್ರೆಝಾಗಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಕಾರು ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿ ನೀಡುವ ತವಕದಲ್ಲಿದ್ದು, ರೈಜ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಿಂದಲೂ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆದುಕೊಂಡಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಹೊಸ ರೀಬ್ಯಾಡ್ಜ್ ಕಾರಿನಲ್ಲಿ ಟೊಯೊಟಾ ಬ್ಯಾಡ್ಜ್‌ನೊಂದಿಗೆ ಟ್ವಿನ್ ಸ್ಲಾಟ್ ಬೋಲ್ಡ್ ಡೈನಾಮಿಕ್ ಗ್ರೀಲ್, ಆಕರ್ಷಕ ಫ್ರಂಟ್ ಬಂಪರ್, ಇನ್ ಬಿಲ್ಟ್ ಫ್ಲಕ್ಸ್ ಬುಲ್ ಬಾರ್, ಫ್ಲಕ್ಸ್ ಸ್ಕೀಡ್ ಪ್ಲೇಟ್ ಜೋಡಣೆ ಮಾಡಲಾಗಿದ್ದು, ಕಾರಿನ ಒಳಭಾಗದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಹಾಗೆಯೇ ಎಲ್ಇಡಿ ಪ್ರೋಜೆಕ್ಟರ್ ಯನಿಟ್‌ನಲ್ಲಿ ಎಲ್ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ರೂಫ್ ಸ್ಪಾಯ್ಲರ್, ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್ ನೀಡಲಾಗಿದ್ದು, ಒಳಭಾಗದಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಟೋನ್ ಇಂಟಿರಿಯರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ರೈನ್ ಸೆನ್ಸಿಂಗ್ ವೈಪರ್, ಕೀ ಲೆಸ್ ಎಂಟ್ರಿ ನೀಡಲಾಗಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಪ್ರಯಾಣಿಕ ಸುರಕ್ಷತೆಗಾಗಿ ವಿಟಾರಾ ಬ್ರೆಝಾ ಮಾದರಿಯಲ್ಲೇ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಲೋಡ್ ಲಿಮಿಟ್ ಅಲರ್ಟ್, ಓವರ್ ಸ್ಪೀಡ್ ವಾರ್ನಿಂಗ್ ಸಿಸ್ಟಂ ನೀಡಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಒಟ್ಟು ಒಂಬತ್ತು ಬಣ್ಣಗಳ ಆಯ್ಕೆ(6 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್) ನೀಡಲಾಗಿದೆ.

MOST READ: ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..!

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಎಂಜಿನ್ ವೈಶಿಷ್ಟ್ಯತೆ ಮತ್ತು ವಾರಂಟಿ

ಹೊಸ ಅರ್ಬನ್ ಕ್ರೂಸರ್ ಕಾರು ವಿಟಾರಾ ಬ್ರೆಝಾದಲ್ಲಿ ಜೋಡಣೆ ಮಾಡಲಾಗಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದ್ದು, ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಟೊಯೊಟಾ ಕಂಪನಿಯು ಹೊಸ ಅರ್ಬನ್ ಕ್ರೂಸರ್ ಕಾರಿನ ಮೇಲೆ ಗರಿಷ್ಠ ಮೂರು ವರ್ಷಗಳ ವಾರಂಟಿ ನೀಡಲಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ವಾರಂಟಿ ಆಯ್ಕೆ ಮಾಡಬಹುದಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅರ್ಬನ್ ಕ್ರೂಸರ್ ಬಿಡುಗಡೆಗೂ ಮುನ್ನವೇ ಆಫರ್ ಘೋಷಣೆ

ಇದರ ಜೊತೆಗೆ ಹೊಸ ಕಾರು ಬಿಡುಗಡೆಗೂ ಮುನ್ನ ಬುಕ್ಕಿಂಗ್ ಸಲ್ಲಿಸುವ ಗ್ರಾಹಕರಿಗೆ ಹೆಚ್ಚುವರಿಯಾಗಿ 2 ವರ್ಷಗಳ ಹೆಚ್ಚುವರಿ ವಾರಂಟಿ ದೊರೆಯಲಿದ್ದು, ಕಾರು ಬಿಡುಗಡೆಗೂ ಮುನ್ನವೇ ಗ್ರಾಹಕರನ್ನು ಸೆಳೆಯಲು ಹೊಸ ರೆಸ್ಪೆಕ್ಟ್ ಪ್ಯಾಕೇಜ್ ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Motors launches respect package for Urban Cruiser pre-booking customers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X