ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ ಟೊಯೊಟಾ
ಟೊಯೊಟಾ ಕಂಪನಿಯು ದಸರಾ ಮತ್ತು ದೀಪಾವಳಿ ವಿಶೇಷತೆಗಾಗಿ ವಿವಿಧ ಕಾರು ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಗ್ಲಾಂಝಾ, ಯಾರಿಸ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳ ಖರೀದಿ ಮೇಲೆ ಗ್ರಾಹಕರು ಹಲವಾರು ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ದಸರಾ ಮತ್ತು ದೀಪಾವಳಿಗೆ ಗರಿಷ್ಠ ವಾಹನ ಮಾರಾಟ ಗುರಿಹೊಂದಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಗರಿಷ್ಠ ಮಟ್ಟದ ಆಫರ್ ನೀಡುತ್ತಿದ್ದು, ಟೊಯೊಟಾ ಕಂಪನಿಯು ಕೂಡಾ ವಿವಿಧ ಕಾರು ಮಾದರಿಗಳ ಮೇಲೆ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದೆ. ಟೊಯೊಟಾ ಕಂಪನಿಯು ಗ್ಲಾಂಝಾ, ಯಾರಿಸ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳ ಖರೀದಿ ಮೇಲೆ ಮಾತ್ರವೇ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಇನ್ನುಳಿದ ಕಾರು ಮಾದರಿಗಳ ಮೇಲೆ ಯಾವುದೇ ಹೆಚ್ಚುವರಿ ಉಳಿತಾಯ ನೀಡಿಲ್ಲ.

ಟೊಯೊಟಾ ಕಂಪನಿಯು ಗ್ಲಾಂಝಾ, ಯಾರಿಸ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳ ಖರೀದಿ ಮೇಲೆ ರೂ. 30 ಸಾವಿರದಿಂದ ರೂ.65 ಸಾವಿರದಷ್ಟು ಆಫರ್ ಘೋಷಣೆ ಮಾಡಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ.

ಗ್ಲಾಂಝಾ ಕಾರು ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5 ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಲಭ್ಯವಿದ್ದಲ್ಲಿ ಯಾರಿಸ್ ಕಾರು ಖರೀದಿ ಮೇಲೆ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ.

ಇನ್ನು ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.30 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಇನ್ನುಳಿದ ಯಾವುದೇ ಕಾರು ಮಾದರಿಯ ಮೇಲೆ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿಲ್ಲ. ಡಿಸ್ಕೌಂಟ್ ಬದಲಾಗಿ ವಿಶೇಷವಾಗಿ ಉದ್ಯೋಗಸ್ಥ ಗ್ರಾಹಕರಿಗಾಗಿಯೇ ಆಕರ್ಷಕ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ.

ಟೊಯೊಟಾ ಕಾರುಗಳ ಮೇಲೆ ಲಭ್ಯಲಿರುವ ಆಫರ್‌ಗಳಿಗೆ ಸರ್ಕಾರಿ ಉದ್ಯೋಗಿಗಳು ಮಾತ್ರವಲ್ಲದೆ ಮತ್ತು ಖಾಸಲಿ ವಲಯದಲ್ಲಿನ ಉದ್ಯೋಗಸ್ಥ ಗ್ರಾಹಕರು ಕೂಡಾ ಅರ್ಹರಾಗಿದ್ದು, ಹೊಸ ಆಫರ್‌ಗಳ ಅಡಿಯಲ್ಲಿ ಗ್ರಾಹಕರು ಸುಲಭವಾಗಿ ಮಾಲೀಕತ್ವವನ್ನು ಹೊಂದಬಹುದಾಗಿದೆ. ಹೊಸ ಪ್ಯಾಕೇಜ್ ಅಡಿ ಕಾರು ಖರೀದಿಸುವ ಗ್ರಾಹಕರಿಗೆ ಮೂರು ತಿಂಗಳ ಇಎಂಐ ಹಾಲಿಡೇ ಘೋಷಣೆ ಮಾಡಿದ್ದು, ಆಕರ್ಷಕ ಇಎಂಐ ದರಗಳು ಕಾರು ಖರೀದಿಯ ಹೊರೆಯನ್ನು ಇಳಿಕೆ ಮಾಡಲಿವೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕರೋನಾ ವೈರಸ್ ಪರಿಣಾಮ ಸ್ವಂತ ವಾಹನಗಳ ಖರೀದಿಯ ಪ್ರಕ್ರಿಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಲಾಕ್‌ಡೌನ್ ವೇಳೆ ಕಾರು ಮಾರಾಟದಲ್ಲಿ ನಷ್ಟ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಆಫರ್‌ಗಳ ಮೂಲಕ ಮಾರಾಟ ಹೆಚ್ಚಳದ ನೀರಿಕ್ಷೆಯಲ್ಲಿವೆ.

ಉದ್ಯೋಗಸ್ಥ ಗ್ರಾಹಕರು ಟೊಯೊಟಾ ನಿರ್ಮಾಣದ ಗ್ಲಾಂಝಾ, ಅರ್ಬನ್ ಕ್ರೂಸರ್, ಯಾರಿಸ್, ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ಖರೀದಿಗೆ ಮೇಲೆ ದೀರ್ಘಾವಧಿಯ ಸಾಲಸೌಲಭ್ಯಗಳೊಂದಿಗೆ ಕನಿಷ್ಠ ಪ್ರಮಾಣದ ಇಎಂಐ ಆಯ್ಕೆ ಮಾಡಬಹುದಾಗಿದ್ದು, ಇದರ ಜೊತೆಗೆ ವಾಹನ ಖರೀದಿ ಮಾಡಿದ ಮೂರು ಅವಧಿಗೆ ಇಎಂಐ ಹಾಲಿಡೇ ಆಫರ್ ಪಡೆದುಕೊಳ್ಳಬಹುದಾಗಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸರ್ಕಾರಿ ಅಧಿಕಾರಿಗಳಿಗೆ ಇತ್ತೀಚೆಗೆ ಕೇಂದ್ರ ಹಣಕಾಸು ಇಲಾಖೆಯು ರೂ. 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆಯನ್ನು ಘೋಷಿಸಿರುವ ಆಧಾರದ ಮೇಲೆ ಈ ಆಫರ್ ನೀಡಲಾಗಿದ್ದು, ಎಲ್ ಟಿಸಿಯ ಬದಲಾಗಿ ಈ ಬಾರಿ ನಗದು ವೋಚರ್ ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಹೊಸ ವಾಹನ ಖರೀದಿಗೆ ಸಹಕಾರಿಯಾಗಿದೆ ಎನ್ನುವುದು ಆಟೋ ಉತ್ಪಾದನಾ ಕಂಪನಿಗಳ ಲೆಕ್ಕಾಚಾರ.


Click it and Unblock the Notifications