ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಕಂಪನಿಯ ಜನಪ್ರಿಯ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಫ್ಯೂಯಲ್ ಪಂಪ್‌ನಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಮುಂದಾಗಿದೆ. ವರದಿಗಳ ಪ್ರಕಾರ ಸರಿಸುಮಾರು 6,500 ಕಾರುಗಳನ್ನು ರಿಕಾಲ್ ಮಾಡಲಾಗುತ್ತದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

2019ರ ಏಪ್ರಿಲ್ 2 ರಿಂದ ಅಕ್ಟೋಬರ್ 6ವರೆಗೆ ತಯಾರಿಸಲಾದ ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಈ ದೋಷವನ್ನು ಕಂಡು ಬಂದಿದೆ. ಇದೀಗ ಟೊಯೊಟಾ ಕಂಪನಿಯು ಈ ಅಪಾವಾದಗಳನ್ನು ಸರಿಪಡಿಸಲು ದೋಷ ಪೂರಿತ ಮಾದರಿಗಳ ಫ್ಯೂಯಲ್ ಪಂಪ್ ಅನ್ನು ಕಂಪನಿಯು ಬದಲಾಯಿಸಲು ಮುಂದಾಗಿದೆ. ಇದರಿಂದ ವಾಹನ ಮಾಲೀಕರು ಟೊಯೊಟಾ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ. ಅವರು ದೋಷ ಕಂಡು ಬಂದ ಕಾರುಗಳ ಫ್ಯೂಯಲ್ ಪಂಪ್ ಅನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಎರಡು ದೈತ್ಯ ಕಾರು ತಯಾರಕ ಕಂಪನಿಗಳಾದ ಟೊಯೊಟಾ ಹಾಗೂ ಮಾರುತಿ ಸುಜುಕಿ ಸಹಭಾಗಿತ್ವವನ್ನು ಹೊಂದಿವೆ. ಈ ಸಹಭಾಗಿತ್ವದಲ್ಲಿ ತಯಾರಾದ ಮೊದಲ ಕಾರು ಟೊಯೊಟಾ ಗ್ಲಾಂಝಾ. ಟೊಯೊಟಾ ಗ್ಲಾಂಝಾ, ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ರಿಫ್ರೆಶ್ ಆವೃತ್ತಿಯಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಗ್ಲಾಂಝಾ, ಬಹುತೇಕ ಮಾರುತಿ ಸುಜುಕಿ ಬಲೆನೊ ರೀತಿ ಕಾಣುತ್ತದೆ. ಆದರೆ ಹೊಸ ಫ್ರಂಟ್ ಗ್ರಿಲ್ ಹಾಗೂ ಹೊಸ ಬ್ಯಾಡ್ಜ್‌ಗಳೊಂದಿಗೆ, ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಬಲೆನೊ ಕಾರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಬಿಎಸ್ 6 ನಿಯಮಗಳು ಜಾರಿಯಾದ ನಂತರ ಬಲೆನೊ ಹಾಗೂ ಗ್ಲಾಂಝಾ ಕಾರುಗಳನ್ನು ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯ 1.2-ಲೀಟರಿನ ಕೆ 12 ಬಿ, ಬಿಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಈ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಗ್ರಾಹಕರು ಎಸ್‌ಎಸ್‌ವಿಎಸ್ 1.2-ಲೀಟರ್ ಡ್ಯುಯಲ್ ಜೆಟ್ ಡ್ಯುಯಲ್-ವಿವಿಡಿಐ ಪೆಟ್ರೋಲ್ ಮಾದರಿಯನ್ನು ಸಹ ಖರೀದಿಸಬಹುದು.

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಈ ಎಂಜಿನ್ 90 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಬಲೆನೊ ಹಾಗೂ ಟೊಯೊಟಾ ಗ್ಲಾಂಝಾ ಕಾರುಗಳು ಹೆಚ್ಚಿನ ಅಂಶಗಳಲ್ಲಿ ಸಾಮ್ಯತೆಯನ್ನು ಹೊಂದಿವೆ. ಗ್ಲಾಂಝಾದ ನಂತರ ಟೊಯೊಟಾ-ಸುಜುಕಿ ಸಹಭಾಗಿತ್ವದಲ್ಲಿ ಇನ್ನೂ ಹಲವು ಕಾರುಗಳು ಬಿಡುಗಡೆಯಾಗಲಿವೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಗ್ಲಾಂಝಾ ಕಾರಿನಲ್ಲಿ ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್ ಹೆಡ್‌ಲ್ಯಾಂಪ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವ್ಹೀಲ್‍‍ಗಳು ಮತ್ತು ಎಲ್ಇಡಿ ರೇರ್ ಕಾಂಬಿನೇಷನ್ ಟೇಲ್‌ಗೇಟ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ರಿಕಾಲ್ ಆಗುತ್ತಿದೆ ದೋಷಪೂರಿತ ಟೊಯೊಟಾ ಗ್ಲಾಂಝಾ ಕಾರು

ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Recalls Glanza Models Over Possible Fuel Pump Fault. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X