ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಜಪಾನ್ ಬ್ರಾಂಡ್ ಟೊಯೊಟಾ ಕಂಪನಿಯು ತನ್ನ ಐಷಾರಾಮಿ ಎಂಪಿವಿ ಕಾರು ಮಾದರಿಗಳಾದ ವೆಲ್‌ಫೈರ್ ಮತ್ತು ಅಲ್ಫಾರ್ಡ್ ಕಾರು ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಎರಡು ಕಾರುಗಳಲ್ಲೂ ಸ್ಪೆಷಲ್ ಎಡಿಷನ್‌ಗಳನ್ನು ಹೊರತಂದಿದೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಅಲ್ಫಾರ್ಡ್ ಕಾರು ಮಾದರಿಗಾಗಿ ಟೈಪ್ ಗೋಲ್ಡ್ ಮತ್ತು ವೆಲ್‌ಫೈರ್ ಕಾರು ಮಾದರಿಗಾಗಿ ಗೋಲ್ಡನ್ ಐಸ್ ಮಾಡೆಲಿಸ್ಟಾ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಲಾಗಿದ್ದು, ಇವು ಸಾಮಾನ್ಯ ಮಾದರಿಯ ವೆಲ್‌ಫೈರ್ ಮತ್ತು ಅಲ್ಪಾರ್ಡ್ ಕಾರು ಮಾದರಿಗಳಿಂತಲೂ ಹೆಚ್ಚು ದುಬಾರಿಯಾಗಿರಲಿವೆ. ಟೈಪ್ ಗೋಲ್ಡ್ ಮಾದರಿಯು ಅಲ್ಪಾರ್ಡ್ ಕಾರಿನ ಎಸ್ ವೆರಿಯೆಂಟ್ ಆಧರಿಸಿದ್ದು, ಗೋಲ್ಡ್ ಐಸ್ ಮಾದರಿಯು ವೆಲ್‌ಫೈರ್ ಕಾರಿನ ಜೆಡ್ ವೆರಿಯೆಂಟ್ ಆಧರಿಸಿ ಸಿದ್ದಪಡಿಸಲಾಗಿದೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಎರಡು ಮಾಡೆಲಿಸ್ಟಾ ಸ್ಪೆಷಲ್ ಎಡಿಷನ್ ಕಾರುಗಳು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಹೊರಭಾಗದಲ್ಲಿನ ಬದಲಾವಣೆಯ ಜೊತೆಗೆ ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆ ಪಡೆದುಕೊಂಡಿವೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಸದ್ಯಕ್ಕೆ ಸ್ಪೆಷಲ್ ಎಡಿಷನ್ ಕಾರುಗಳು ಜಪಾನ್ ಮಾರುಕಟ್ಟೆಗಾಗಿಯೇ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದ್ದು, ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಡವಾಗಿ ಬಿಡುಗಡೆಯಾಗಲಿವೆ. ಇನ್ನು ಮಾಡಿಫೈ ಕಿಟ್ ಸೌಲಭ್ಯಗಳನ್ನು ಆಧರಿಸಿ ಹೊಸ ಕಾರುಗಳ ಬೆಲೆಯು ಮೂಲ ಕಾರುಗಳ ಬೆಲೆಗಿಂತಲೂ ರೂ.5 ಲಕ್ಷದಿಂದ ರೂ.8 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿವೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಮಾಡಿಫೈ ಪ್ರಿಯರಿಗಾಗಿ ಈ ಸ್ಪೆಷಲ್ ಎಡಿಷನ್ ಕಾರುಗಳು ಸಿದ್ದಗೊಂಡಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ವೆಲ್‌ಫೈರ್ ಮಾದರಿಯಲ್ಲಿ ಗೋಲ್ಡನ್ ಐಸ್ ಮಾಡೆಲಿಸ್ಟಾ ಆವೃತ್ತಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಸದ್ಯ ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ವೆಲ್‌ಫೈರ್ ಕಾರು ಮುಂದಿನ ಮೂರು ತಿಂಗಳ ಅವಧಿಗೆ ಸಂಪೂರ್ಣವಾಗಿ ಮಾರಾಟಗೊಂಡಿದ್ದು, ಆಮದು ಆವೃತ್ತಿಯಾಗಿರುವುದರಿಂದ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ 180 ಯುನಿಟ್‌ಗಳನ್ನು ಮಾತ್ರವೇ ಜಪಾನ್ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಹೀಗಾಗಿ ಬಿಡುಗಡೆಯ ನಂತರ ಮೊದಲ ಬ್ಯಾಚ್‌ನಲ್ಲಿದ್ದ 180 ಯುನಿಟ್ ಸಂಪೂರ್ಣ ಮಾರಾಟಗೊಂಡಿದ್ದು, ಮುಂದಿನ ಮೂರು ತಿಂಗಳ ನಂತರ ಮತ್ತೆ ಹೊಸ ಬ್ಯಾಚ್ ಕಾರುಗಳು ವಿತರಣೆಗೊಳ್ಳಲಿವೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ವೆಲ್‌ಫೈರ್ ಕಾರು ಸದ್ಯಕ್ಕೆ ಭಾರತದಲ್ಲಿ 'ಎಕ್ಸಿಕ್ಯೂಟಿವ್ ಲೌಂಜ್' ಎನ್ನುವ ಸಿಂಗಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.79.50 ಲಕ್ಷ ಬೆಲೆ ಪಡೆದುಕೊಂಡಿದೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ಹೊಸ ವೆಲ್‌ಫೈರ್ ಕಾರು 4,935-ಎಂಎಂ ಉದ್ದ, 1,850-ಎಂಎಂ ಅಗಲ, 1,895-ಎಂಎಂ ಎತ್ತರ ಮತ್ತು 3,000-ಎಂಎಂ ವೀಲ್ಹ್ ಬೆಸ್‌ನೊಂದಿಗೆ 2,815 ಕೆಜಿ ತೂಕ ಹೊಂದಿದ್ದು, 6 ಸೀಟರ್ ಮಾದರಿಯೊಂದಿಗೆ ಹಲವಾರು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಪಡೆದುಕೊಂಡಿದೆ.

ವೆಲ್‌ಫೈರ್ ಮತ್ತು ಅಲ್ಫಾರ್ಡ್ ಸ್ಪೆಷಲ್ ಎಡಿಷನ್ ಬಹಿರಂಗಗೊಳಿಸಿದ ಟೊಯೊಟಾ

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರಿನಲ್ಲಿ ಸದ್ಯಕ್ಕೆ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Reveals Modellista Kits For Vellfire, Alphard Golden Eyes. Read in Kannada.
Story first published: Tuesday, April 28, 2020, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X